Breaking News

ನಟ ಅನಂತನಾಗ 70 ನೇ ಜನ್ಮದಿನ, ಅನಂತ ಅಭಿನಂದನೆಗೆ ಅದ್ದೂರಿ ಚಾಲನೆ

 

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಅನಂತನಾಗ ಅಭಿನಂದನಾ ಸಮಿತಿ ವತಿಯಿಂದ ಅನಂತನಾಗ ಅವರ 75 ನೇ ವರ್ಷದ ಜನ್ಮದಿನ ಹಾಗೂ ವೃತ್ತಿ ಜೀವನದ 50 ನೇ ವರ್ಷದ ಸಂಭ್ರಮಾಚರಣೆ‌ ಅನಂತ ಅಭಿನಂದನೆ ಕಾರ್ಯಕ್ರಮಕ್ಕೆ ಭಾನುವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.

ಡೊಂಗರಕೇರಿಯಲ್ಲಿರುವ ಕೆನರಾ ಹೈಸ್ಕೂಲ್‌ ನಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಪುತ್ಥಳಿಗೆ ಅನಂತನಾಗ ಅವರು ಹಾರವನ್ನು ಹಾಕಿ ಗೌರವ ಸಲ್ಲಿಸಿದರು.

ಕೆನರಾ ಹೈಸ್ಕೂಲ್‌ ಎದುರು ವಿಶೇಷವಾಗಿ ಸಿಂಗಾರ ಮಾಡಿದ್ದ ಸಾರೋಟಿನಲ್ಲಿ ಅನಂತನಾಗ ದಂಪತಿ ಮೆರವಣಿಗೆ ಮೂಲಕ ಸಾಗಿ ಟಿ ವಿ ರಮಣ್ ಪೈ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತು. ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಹುಲಿವೇಷ‌ ಕುಣಿತ, ಸ್ಯಾಕ್ಸೋಫೋನ್, ಬೊಂಬೆಗಳು, ಮಕ್ಕಳಿಂದ ಅನಂತನಾಗ ಸಿನಿಮಾ ಪಾತ್ರಗಳ ವೇಷಭೂಷಣ, ವಾದ್ಯಗಳ ಮೂಲಕ ಅವರನ್ನು ಕರೆದು ತರಲಾಯಿತು.

  1.  

ಶಾಸಕ ವೇದವ್ಯಾಸ ಕಾಮತ್ ಮುಂದಾಳತ್ವದಲ್ಲಿ ಅನಂತನಾಗ ಹಾಗೂ ಗಾಯತ್ರಿ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಆ ಬಳಿಕ ನಡೆದ ಸಂವಾದದಲ್ಲಿ ಕಾಸರಗೋಡು ಚಿನ್ನಾ, ದಿನೇಶ್ ಮಂಗಳೂರು, ಲಕ್ಷ್ಮಣ್ ಕುಮಾರ್ ಮಲ್ಲೂರು, ಸದಾಶಿವ ಶೆಣೈ‌ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಮನೋಹರ್ ಪ್ರಸಾದ್ ನಿರೂಪಿಸಿದರು.

Kudla Cultural Foundation and Anantnaga Abhinandana Samiti launched the Ananta Pratishti program on Sunday to celebrate Anantanaga’s 75th birthday and 50th year of professional life.

Anantanaga garlanded the effigy of Ammembala Subbarao Pai at Canara High School in Dongarkeri.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com