Breaking News

ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ: ಬಾಲಕೃಷ್ಣ ಡಿ.ಬಿ.

 

ಮಂಗಳೂರು: ಸೌಜನ್ಯ  ಕೊಲೆ ಪ್ರಕರಣ ಮರು ತನಿಖೆಗೆ ಒತ್ತಾಯಿಸಿ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಸೆ.11 ರಿಂದ ಮೂರು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಾಲಕೃಷ್ಣ ಡಿ.ಬಿ. ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ನೈಜ ಆರೋಪಿ ಸಿಕ್ಕಿಲ್ಲವೆಂದು ಕರಾವಳಿ ಸೇರಿದಂತೆ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದ್ದರೂ, ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸಿದೆ. ಜನರ ಹಕ್ಕೊತ್ತಾಯವನ್ನು  ಪರಿಗಣಿಸಿ ಸರಕಾರವೇ ಸ್ವತಃ ಮುತುವರ್ಜಿ ವಹಿಸಿ ಪ್ರಕರಣವನ್ನು ತನಿಖೆಗೆ ಆದೇಶ ನೀಡಬೇಕು. ಈ ಕಾರಣಕ್ಕಾಗಿಯೇ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿ ಸರಕಾರದ ಗಮನ ಸೆಳೆಯುತ್ತೇವೆ. ಮುಖ್ಯಮಂತ್ರಿಗೆ ಮನವಿ ಸಲ್ಲಿಸುತ್ತೇವೆ ಎಂದರು.

ಸೆ.11ರಂದು ಬೆಳ್ತಂಗಡಿ ಮತ್ತು ಮಂಗಳೂರು ತಾಲೂಕಿನವರು ಪಾಲ್ಗೊಳ್ಳಲಿದ್ದಾರೆ. 12 ರಂದು ವಿಟ್ಲ ಮತ್ತು ಪುತ್ತೂರು ತಾಲೂಕಿನವರು ಹಾಗೂ 13 ರಂದು ಸುಳ್ಯ ಮತ್ತು ಕಡಬ ತಾಲೂಕಿನ ಒಕ್ಕಲಿಗ ಸಂಘದ ಪ್ರತಿನಿಧಿಗಳು, ಇತರೆ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ. ಸೌಜನ್ಯ ಪರವಾದ ಹೋರಾಟ ನಡೆಸಿರುವ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ವಕೀಲರ ಜತೆಗೆ ಮಾತುಕತೆ ನಡೆಸಿದ್ದೇವೆ. ಇದರ ಜೊತೆಗೆ ಒಕ್ಕಲಿಗರ ಸಮುದಾಯದಿಂದ ಧ್ವನಿಯೆತ್ತಲು ಬಾಲಗಂಗಾಧರ ನಾಥ ಸ್ವಾಮೀಜಿ ಅವರನ್ನು ಭೇಟಿ ಆಗಲಿದ್ದೇವೆ ಎಂದು ತಿಳಿಸಿದರು.

  1.  

ಕಿರಣ್ ಬುಡ್ಲೆಗುತ್ತು ಅವರು ಮಾತನಾಡಿ, ಸೌಜನ್ಯ ಕೊಲೆ ಆರೋಪಿಗಳಿಗೆ ಶಿಕ್ಷೆ ಆಗಬೇಕು. ನಮ್ಮ ಹೋರಾಟ ಯಾವುದೇ ಕ್ಷೇತ್ರ, ವ್ಯಕ್ತಿಗಳ ವಿರುದ್ಧವಲ್ಲ. ನಮ್ಮದು ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕು. ಸೌಜನ್ಯ ಸಾವಿನ ಪ್ರಕರಣ ಮರುತನಿಖೆ ಆಗಬೇಕು ಎಂಬುದು ನಮ್ಮ ಹೋರಾಟದ ಪ್ರಮುಖ ಅಜಂಡಾ ಎಂದರು.

ಒಕ್ಕಲಿಗರ ಸಂಘದ ತಾಲೂಕು ಘಟಕದ ಪ್ರಮುಖರಾದ ಚಂದ್ರ ಕೋಲ್ಚಾರ್, ಗುರುದೇವ್ ಯು.ಬಿ, ಸುರೇಶ್ ಬೈಲು, ವಿಶ್ವನಾಥ್, ಕುಶಾಲಪ್ಪ ಗೌಡ, ಮೋನಪ್ಪ ಗೌಡ, ರಕ್ಷಿತ್ ಸುತ್ತಿಲ ಇದ್ದರು.

On behalf of Okkaligar Zilla Struga Samiti, District Struga Samiti President Balakrishna D.B said that they have staged a sit-in in front of the Dakshina Kannada District Collector’s Office for three days from September 11, demanding a re-investigation of the courtesy killing case. He told the news conference.

Although there are protests all over the state, including the coast, that the real accused has not been found, the state government has ignored it. Considering the rights of the people, the government itself should step in and order an investigation into the case. It is for this reason that we will hold a sit-in satyagraha in front of the District Collector’s office to draw the attention of the government. He said that he will submit a request to the Chief Minister.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com