Breaking News

ಆಸೀಫ್ ಗೆ ಚಿಕಿತ್ಸೆ ನೀಡಿದ ವೈದ್ಯರ ಮೇಲಿನ ದೌರ್ಜನ್ಯಕ್ಕೆ ಸಿಡಿದ ವೈದ್ಯರ ಪಡೆ: ಘಟನೆ ಖಂಡಿಸಿದ ಐಎಂಎ ಅಧ್ಯಕ್ಷ ಡಾ. ವಿಶಾಲ

 

ಹೊನ್ನಾವರ: ಮಹಮ್ಮದ್ ಇಬ್ರಾಹಿಂ ಅಸೀಫ್ ಸಾವಿನ ನಂತರದಲ್ಲಿ ಈತನಿಗೆ ಚಿಕಿತ್ಸೆ ನೀಡಿದ್ದ ಶ್ರೀ ದೇವಿ ಆಸ್ಪತ್ರೆ ಇಬ್ಬರು ವೈದ್ಯರ ವಿರುದ್ಧ ಕೆಲವರು ನಡೆಸಿದ ಪ್ರತಿಭಟನೆ ಹಾಗೂ ಚಿಕಿತ್ಸೆ ನೀಡಿದ ವೈದ್ಯರ ಮೇಲಿನ ದೌರ್ಜನ್ಯವನ್ನು  ಭಾರತೀಯ ವೈದ್ಯಕೀಯ ಸಂಘವು ತೀವ್ರವಾಗಿ ಖಂಡಿಸಲಿದೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಡಾ. ವಿಶಾಲ ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶಸ್ತ್ರ ಚಿಕಿತ್ಸೆಗೆ ರೋಗಿ ಸ್ಪಂದಿಸುವ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ ಆಗಿರುತ್ತದೆ. ಕೋವಿಡ್ ನಂತರದ ಕಾಲಘಟ್ಟದಲ್ಲಿ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಆಸೀಫ್ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ವೈದ್ಯರೂ ಸಾಕಷ್ಟು ಕಾಳಜಿ ತೆಗೆದುಕೊಂಡಿದ್ದಾರೆ. ರೋಗಿ ಸಾವಿಗೆ ಬೇರೆ ಕಾರಣಗಳಿರಬಹುದು. ತನಿಖೆಗೆ ಆಸ್ಪತ್ರೆಯ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಜರುಗಿಸಲಿ. ಆದರೆ, ತನಿಖೆಗೆ ಮೊದಲು ವೈದ್ಯರನ್ನು ಅಪರಾಧಿ ಎಂದು ಆರೋಪಿಸುವುದು ವೈದ್ಯಕೀಯ ವೃತ್ತಿಗೆ ಅಪಮಾನ ಮಾಡಿದಂತೆ. ಪೊಲೀಸರು ರಕ್ಷಣೆ ನೀಡದಿದ್ದರೆ ಆಸ್ಪತ್ರೆಯ ಸ್ವತ್ತು ಹಾಗೂ ವೈದ್ಯರಿಗೆ ಇನ್ನಷ್ಟು ತೊಂದರೆಯಾಗುತ್ತಿತ್ತು ಎಂದು ಅಸಮಾಧಾನ ಹೊರ ಹಾಕಿದರು.

ಪ್ರತಿಭಟನೆ ಅಂಗವಾಗಿ ಹೊನ್ನಾವರ, ಮಂಕಿ, ಹಳದೀಪುರ ಸೇರಿದಂತೆ ಹಲವು ಕಡೆಗಳಲ್ಲಿ ಸೋಮವಾರ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ವಿಭಾಗವನ್ನು ಬಂದ್ ಮಾಡಲಾಗಿದೆ. ವೈದ್ಯರು ಕಪ್ಪು ಬಟ್ಟೆ ಧರಿಸಿ ಒಳರೋಗಿ ವಿಭಾಗದ ಕರ್ತವ್ಯಕ್ಕೆ ಹಾಜರಾಗಿದ್ದು ಸರ್ಕಾರಿ ಆಸ್ಪತ್ರೆ ವೈದ್ಯರೂ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದರು.

  1.  

ಶ್ರೀದೇವಿ ಆಸ್ಪತ್ರೆ ಮುಖ್ಯಸ್ಥ ಡಾ. ವಿ. ಚಂದ್ರಶೇಖರ ಶೆಟ್ಟಿ ಅವರು ಮಾತನಾಡಿ, ಆಸ್ಪತ್ರೆ  40 ವರ್ಷಗಳಿಂದ ಜನರಿಗೆ ಸೇವೆ ನೀಡುತ್ತಿದೆ. ಹಲವು ಶಸ್ತ್ರಚಿಕಿತ್ಸೆಗಳು ಆಸ್ಪತ್ರೆಯಲ್ಲಿ ಯಶಸ್ವಿಯಾಗಿವೆ ಕೂಡ. ಮೃತ ಆಸೀಫ್ ಅವರಿಗೆ ಮೂತ್ರಕೋಶ ತಜ್ಞ ಡಾ. ಕಿಶನ್ ರಾಜ್ ಶಸ್ತ್ರಚಿಕಿತ್ಸೆ ನಡೆಸಿದ್ದು ಡಾ. ಭಾರ್ಗವ ಸಹಕಾರ ನೀಡಿದ್ದಾರೆ. ಶಸ್ತ್ರ ಚಿಕಿತ್ಸೆ ನಡೆದ ಎರಡು ದಿನಗಳಲ್ಲಿ ಆಸ್ಪತ್ರೆಯಲ್ಲಿದ್ದ ಆಸೀಫ್ ಚೇತರಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಕೂಡ ಮಾಡಲಾಗಿತ್ತು. ಆದರೆ ಏಕಾಏಕಿ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದ ಅವರನ್ನು ಮಣಿಪಾಲದ ಆಸ್ಪತ್ರೆಗೆ ಕಳಿಸಿಕೊಡಲಾಯಿತು. ಶಸ್ತ್ರ ಚಿಕಿತ್ಸೆ ಕ್ಯಾಮೆರಾದಲ್ಲಿ ಸೆರೆ ಆಗಿರುವ ದೃಶ್ಯಾವಳಿ ಕೂಡ ತನಿಖೆ ನಡೆಸಬಹುದು ಎಂದು ತಿಳಿಸಿದರು.

ಆಯುಷ್ ವೈದ್ಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ರಂಗನಾಥ ಪೂಜಾರಿ ಅವರು ಮಾತನಾಡಿ, ವೈದ್ಯರು ಜನರ ವಿರುದ್ಧ ಅನಗತ್ಯ ಪ್ರತಿಭಟನೆ ನಡೆಸಿದರೆ ನಗರ ಬಿಟ್ಟು ಹೊನ್ನಾವರದಂಥ ಸಣ್ಣ ಪಟ್ಟಣಗಳಿಗೆ ಬರುವ ವೈದ್ಯರು ಹಿಂದೇಟು ಹಾಕುತ್ತಾರೆ. ಇದರಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡುವ ಯೋಜನೆಗೂ ಹಿನ್ನೆಡೆಯಾಗುತ್ತದೆ. ತಾಲ್ಲೂಕಿನ ಆಸ್ಪತ್ರೆಗಳು ಜಿಲ್ಲೆಯಲ್ಲೇ ಮಾದರಿ ಆಗಿವೆ. ಆದರೆ, ವೈದ್ಯರ ವಿರುದ್ಧ ಆಗಾಗ್ಗೆ ಇಂತಹ ಪ್ರತಿಭಟನೆ ನಡೆಯುತ್ತಿರುವುದರಿಂದ ಭಯದ ವಾತಾವರಣ ಉಂಟಾಗಿದೆ ಎಂದು ತಿಳಿಸಿದರು.

ಐಎಂಎ  ಕಾರ್ಯದರ್ಶಿ ಡಾ.ವಿನಾಯಕ ರಾಯ್ಕರ, ದಂತ ವೈದ್ಯರ ಸಂಘದ ಘಟಕದ ಅಧ್ಯಕ್ಷೆ ಡಾ. ಮಮತಾ, ಹಿರಿಯ ಕಿರಿಯ ವೈದ್ಯರು ಇದ್ದರು.

ನಂತರ ವೈದ್ಯರು ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

After the death of Muhammad Ibrahim Asif, the Indian Medical Association will strongly condemn the protest against the two doctors of Shree Devi Hospital who treated him and the violence against the treating doctors. Vishal told a press conference held on Monday.

Patient response to surgery varies from person to person. The problem is even more complicated in the post-Covid era. Asif underwent surgery using state-of-the-art technology. Doctors have also taken a lot of care. There may be other reasons for the patient’s death. He said that the hospital is fully cooperating with the investigation.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com