
ಮಂಗಳೂರು: ಇಲ್ಲಿನ ಕಥೋಲಿಕ್ ಕೋಅಪರೇಟಿವ್ ಬ್ಯಾಂಕ್ ಗೆ ಅನಿಲ್ ಲೋಬೊ ತಂಡವು ಅವಿರೋಧವಾಗಿ ಪುನರ್ ಆಯ್ಕೆಆಗಿದ್ದು, 2028 ರವರಿಗೆ ಈ ಅಧಿಕಾರದ ಸಾರಥ್ಯ ವಹಿಸಲಿದೆ.
ಅ. 13ರಂದು ನಾಮಪತ್ರ ಸಲ್ಲಿಕೆ ನಂತರ ಎಂಸಿಸಿ ಚುನಾವಣಾ ಪ್ರಕ್ರಿಯೆಗೆ 14 ಮಂದಿ ಆಕಾಂಕ್ಷಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅ. 20 ರಂದು ನಾಮಪತ್ರ ಪರಿಶೀಲನೆ ನಡೆಸಿದ ಬಳಿಕೆ 14 ಮಂದಿ ಅರ್ಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳು ಕ್ರಮಬದ್ದವಾಗಿರುವುದರಿಂದ, ಚುನಾವಣಾ ಅಧಿಕಾರಿ ಸುಧೀರ್ ಕುಮಾರ್ ಜೆ ಅವರು, ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ ಎಂದು ಘೋಷಣೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಎಂಸಿಸಿ ಬ್ಯಾಂಕ್ ಆಡಳಿತ ಮಂಡಳಿ ಎಲ್ಲ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, ಅ. 27 ರಂದು ನಡೆಯಬೇಕಿದ್ದ ಚುನಾವಣೆ ಪ್ರಕ್ರಿಯೆ ನಡೆಯುವುದಿಲ್ಲ ಎಂದು ಬ್ಯಾಂಕ್ ಮಹಾಪ್ರಬಂಧಕ ಸುನಿಲ್ ಮಿನೇಜಸ್ ತಿಳಿಸಿದ್ದಾರೆ.
111 ವರ್ಷಗಳ ಇತಿಹಾಸ ಹೊಂದಿರುವ ಮಂಗಳೂರಿನ ಸಹಕಾರಿ ರಂಗದ ಮುಂಚೂಣಿ ಎಂಸಿಸಿ ಬ್ಯಾಂಕ್ ನ ಅಧಿಕಾರದ ಚುಕ್ಕಾಣಿ, ಮುಂದಿನ 5 ವರ್ಷಗಳ ಅವಧಿಗೆ, ಹಾಲಿ ಅಧ್ಯಕ್ಷ ಅನಿಲ್ ಲೋಬೊ ಅವರ ನೇತೃತ್ವದ ತಂಡದ ಪಾಲಾಗಿದೆ. ಬ್ಯಾಂಕ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬ್ಯಾಂಕಿನ ನಿರ್ದೇಶಕ ಮಂಡಳಿಯ ಆಯ್ಕೆ ಅವಿರೋಧವಾಗಿ ನಡೆದಿದೆ.

ವೆಲೆನ್ಸಿಯಾ ನಿವಾಸಿ ಅನಿಲ್ ಲೋಬೊ ಅವರ ನೇತೃತ್ವದ ತಂಡದಲ್ಲಿ ಜೆರಾಲ್ಡ್ ಪಿಂಟೋ, ಕಲ್ಯಾಣ್‌ಪುರ, ರೋಷನ್ ಡಿಸೋಜ, ಮುಡಿಪು , ಹೆರಾಲ್ಡ್ ಜೋನ್ ಮೊಂತೆರೊ, ಕೆಲರಾಯ್, ಜೋಸೆಫ್ ಎಂ.ಅನಿಲ್ ಪತ್ರಾವೊ, ದೆರೆಬೈಲ್, ಡೇವಿಡ್ ಡಿಸೋಜ, ಬಜಪೆ, ಮೆಲ್ವಿನ್ ಅಕ್ವಿನಸ್ ವಾಸ್, ಮಂಗಳೂರು, ಜೆ.ಪಿ.ರೋಡ್ರಿಗಸ್, ಪುತ್ತೂರು, ಆಂಡ್ರು ಡಿಸೋಜ, ಮೂಡಬಿದಿರೆ , ಎಲ್‌ರೊ ಕಿರಣ್ ಕ್ರಾಸ್ಟೊ, ಗಂಗೊಳ್ಳಿ, ಜೆರಾಲ್ಡ್ ಜೂಡ್ ಡಿಸಿಲ್ವ, ಕಾರ್ಕಳ, ವಿನ್ಸೆಂಟ್ ಅನಿಲ್ ಲಸ್ರಾದೊ, ಬಂಟ್ವಾಳ, ಐರಿನ್ ರೆಬೆಲ್ಲೊ, ಕುಲಶೇಖರ ಮತ್ತು ಫ್ರೀಡಾ ಫ್ಲಾವಿಯಾ ಡಿಸೋಜ, ಬಳ್ಕುಂಜೆ ಇದ್ದಾರೆ.
ಹಾಲಿ ಬ್ಯಾಂಕ್ ಆಡಳಿತ ಮಂಡಳಿಯ ಅವಧಿ ಅ. 26 ಕ್ಕೆ ಕೊನೆ ಆಗಲಿದೆ. ನಂತರ ನೂತನ ಆಡಳಿತ ಮಂಡಳಿ ರಚನೆ ಆಗಲಿದೆ.
Anil Lobo’s team has been re-elected unopposed to the Catholic Cooperative Bank here and will head this position for 2028.
A. After submission of nomination papers on 13th, 14 aspirants applied for the MCC election process. A. After the scrutiny of the nomination papers on 20th, as the nomination papers submitted by 14 candidates were in order, the Election Officer Sudhir Kumar J announced that all the candidates who applied have been selected.
In this background, MCC Bank Board of Directors was elected unopposed for all directorships, and A. Bank General Manager Sunil Menages said that the election process which was supposed to be held on 27th will not take place.


