
ಮಂಗಳೂರು: ಸುರತ್ಕಲ್ ಬಳಿಯ ಇಡ್ಯಾ ಎಂಬಲ್ಲಿ ಜೆಸಿಬಿ ಮೂಲಕ ಎಟಿಎಂ ಒಡೆದು ಹಣ ದೋಚುವ ಯತ್ನ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಶಿವಮೊಗ್ಗ ಮೂಲದ ನಾಲ್ಕು ಮಂದಿಯನ್ನು ಬಂಧನ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೇಗೂರು ಗ್ರಾಮದ ದೇವರಾಜ (24), ಭರತ್ (20), ನಾಗರಾಜ ನಾಯ್ಕ (21), ಕೃತ್ಯಕ್ಕೆ ಸಹಾಯ ಮಾಡಿದ್ದ ಧನರಾಜ್ ನಾಯ್ಕ (26) ಬಂಧಿತರು. ಬಂಧಿತರಿಂದ ಹೊಂಡಾ ಸ್ಪ್ಲೆಂಡರ್ ಬೈಕ್ ಮತ್ತು ಎರಡು ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜುಲೈ 26 ರಂದು ರಾತ್ರಿ ಶಿವಮೊಗ್ಗ ಜಿಲ್ಲೆಯ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಿವ ದೇವಸ್ಥಾನದ ಬಳಿ ಇರುವ ಏಕ್ಸಿಸ್ ಬ್ಯಾಂಕ್ ಎಟಿಎಂ ಕೇಂದ್ರ ಜೆಸಿಬಿ ಮೂಲಕ ಒಡೆವ ಪ್ರಯತ್ನ ಮಾಡಿದ್ದರು. ಈ ಕೃತ್ಯವನ್ನು ತಾವೇ ಮಾಡಿದ್ದಾಗಿ ಆರೋಪಿಗಳು ಒಪ್ಪಿದ್ದಾರೆ. ಇದರ ಜತೆಗೆ ಅಗಸ್ಟ್ 4ರಂದು ರಾತ್ರಿ ಪಡುಬಿದ್ರೆ ಠಾಣೆ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಜೆಸಿಬಿ ಯಂತ್ರವನ್ನು ಕಳವು ಮಾಡಿ ಸುರತ್ಕಲ್ ವರೆಗೆ ಚಲಾಯಿಸಿಕೊಂಡು ಬಂದು ಇಡ್ಯಾ ಗ್ರಾಮದ ಸೌತ್ ಇಂಡಿಯನ್ ಬ್ಯಾಂಕ್ ಎಟಿಎಂ ಯಂತ್ರವನ್ನು ಒಡೆವ ಯತ್ನ ಮಾಡಿದ್ದರು. ಅದೇ ದಿನ ನಸುಕಿನ 2 ರಿಂದ 2.30 ರ ನಡುವೆ ಘಟನೆ ನಡೆದಿದ್ದು ಎಟಿಎಂ ಕೇಂದ್ರದಲ್ಲಿ ಸೈರನ್ ಆಗಿದ್ದರಿಂದ ಅರ್ಧಕ್ಕೆ ಬಿಟ್ಟು ಹೋಗಿದ್ದರು.
ಮಾಹಿತಿಯಂತೆ ಸ್ಥಳಕ್ಕೆ ಬ್ಯಾಂಕ್ ಶಾಖೆ ಮ್ಯಾನೇಜರ್ ರೋಹಿತ್ ರಾತ್ರಿಯೇ ಬಂದಿದ್ದರು. ಅಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಮರುದಿನ ಬೈಕಂಪಾಡಿ ಬಳಿ ಜೋಕಟ್ಟೆಯಲ್ಲಿ ಜೆಸಿಬಿ ಪತ್ತೆಯಾಗಿತ್ತು. ಪಡುಬಿದ್ರಿಯಲ್ಲಿ ಕಳವು ಮಾಡಿದ್ದ ಜೆಸಿಬಿ ಎಂದು ಪತ್ತೆ ಹಚ್ಚಲಾಗಿತ್ತು. ಆರೋಪಿಗಳ ಪತ್ತೆಗೆ ಸುರತ್ಕಲ್ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು.
At Idya near Suratkal, an attempt was made to break into an ATM by JCB and steal money. In connection with the case, the Suratkal police have arrested four people from Shimoga.
Devaraja (24), Bharat (20), Nagaraja Nayka (21) and Dhanraj Nayka (26) who helped in the act were arrested from Beguru village in Shikaripura taluk of Shimoga district. Police have seized a Honda Splendor bike and two mobile phones from the arrested.


