Breaking News

ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ 2ನೇ ಬಾರಿಗೆ ಅವಕಾಶ: ಇಂದಿನಿಂದ ಪರೀಕ್ಷೆ

 

ಬೆಂಗಳೂರು: ದ್ವಿತೀಯ ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಅ 21 ರಿಂದ 2ನೇ ಪೂರಕ ಪರೀಕ್ಷೆಗಳು ನಡೆಯಲಿವೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇದೇ ಮೊದಲ ಬಾರಿಗೆ ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಈ ರೀತಿ  ಪರೀಕ್ಷೆ ಬರೆಯಲು 2ನೇ ಅವಕಾಶ ನೀಡಿದೆ.

1.20 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷೆ ಪ್ರತಿದಿನ ಬೆಳಿಗ್ಗೆ 10.15 ರಿಂದ 12.30 ರವರಿಗೆ ಮತ್ತು ಮಧ್ಯಾಹ್ನ 2.15 ರಿಂದ ಸಂಜೆ 5.30 ರವರಿಗೆ ನಡೆಯಲಿದೆ. ಸೆ.2ಕ್ಕೆ ಪರೀಕೆ ಕೊನೆಗೊಳ್ಳಲಿವೆ. ಪರೀಕ್ಷಾ ಮಂಡಳಿ ಪರೀಕ್ಷೆ ನಡೆಸಲು ಪ್ರಶ್ನೆಪತ್ರಿಕೆ, ಪರೀಕ್ಷಾ ಕೇಂದ್ರ, ಮೂಲ ಸೌಕರ್ಯ ಸೇರಿ ಎಲ್ಲ ರೀತಿ ಸಿದ್ಧತೆಗಳನ್ನು ಮಾಡಿಕೊಂಡಿದೆ  ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

  1.  

2nd supplementary exams will be held from A 21st for the second PUC failed students. This is the first time that the Karnataka Board of School Examination and Valuation has given a second opportunity to the students who failed in the second PUC to write the exam in this way.

1.20 lakh students have registered their names for the examination. The exam will be held from 10.15 am to 12.30 pm and from 2.15 pm to 5.30 pm every day. The exam will end on September 2. The examination board has made all kinds of preparations including question paper, examination center and infrastructure to conduct the examination, the board said in a release.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com