Breaking News

ಚಂದ್ರನ ಮೇಲೆ ಇಳಿಯಲಿದೆ ವಿಕ್ರಮ್: ಮತ್ತೊಂದು ಮೈಲುಗಲ್ಲಿಗೆ ಇಸ್ರೋ ಸಜ್ಜು

 

ನವದೆಹಲಿ:  ವಿಶ್ವವೇ ಕಾಯುತ್ತಿರುವ ಚಂದ್ರಯಾನ-3 ನೌಕೆಯ ಲ್ಯಾಂಡಿಂಗ್​​ನ ದಿನ ಮತ್ತು ಸಮಯವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧಿಕೃತವಾಗಿ ಪ್ರಕಟಿಸಿದೆ. ಮೂರೇ ದಿನಗಳಲ್ಲಿ ದೇಶವು ಐತಿಹಾಸಿಕ ದಾಖಲೆ ನಿರ್ಮಾಣಕ್ಕೆ ಕಾಯುತ್ತಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿಪಡಿಸಲಾದ ಜಾಗದಲ್ಲಿ ಚಂದ್ರಯಾನ-3 ನೌಕೆ ಲ್ಯಾಂಡರ್​ ಅ. 23 ಸಂಜೆ 6.04 ನಿಮಿಷಕ್ಕೆ ಸರಿಯಾಗಿ ಇಳಿಯಲಿದೆ ಎಂದು ಇಸ್ರೋ ಭಾನುವಾರ ಅಧಿಕೃತ ಘೋಷಿಸಿಕೊಂಡಿದೆ. ಕೋಟ್ಯಂತರ ಭಾರತೀಯರ ಕನಸು ನನಸಾದಲ್ಲಿ, ಈ ವಿಕ್ರಮ ಸಾಧಿಸಿದ ವಿಶ್ವದ ನಾಲ್ಕನೇ ಮತ್ತು ದಕ್ಷಿಣ ಧ್ರುವಕ್ಕೆ ಇಳಿದ ಮೊದಲ ದೇಶ ಎಂಬ ಹಿರಿಮೆ ಭಾರತಕ್ಕೆ ಲಭಿಸಲಿದೆ.

ಚಂದ್ರಯಾನ-3 ಅಗಸ್ಟ್ 23,06:04 ನಿಮಿಷಕ್ಕೆ ಚಂದ್ರನ ಮೇಲೆ ಲ್ಯಾಂಡರ್​ ಇಳಿಯಲಿದೆ. ಇಷ್ಟು ದಿನಗಳ ಪ್ರಯಾಣಕ್ಕೆ ಶುಭ ಕೋರಿದ ಮತ್ತು ಸಕಾರಾತ್ಮಕ ಮನೋಭಾವಕ್ಕೆ ಧನ್ಯವಾದಗಳು. ಮುಂದಿನ ಪ್ರಯಾಣವನ್ನು ಒಟ್ಟಿಗೆ ಮುಂದುವರಿಸೋಣ” ಎಂದು ಇಸ್ರೋ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಬರೆದುಕೊಂಡಿದೆ. ಜತೆಗೆ ಈ ಸಾಹಸವನ್ನು ಇಸ್ರೋದ ವೆಬ್‌ಸೈಟ್, ಯೂಟ್ಯೂಬ್​ ಚಾನಲ್, ಫೇಸ್​ಬುಕ್​ ಮತ್ತು ಡಿಡಿ ನ್ಯಾಷನಲ್ ಚಾನಲ್​ನಲ್ಲಿ 05.27 ರಿಂದ ನೇರಪ್ರಸಾರ ಲಭ್ಯವಾಗಲಿದೆ ಎಂದು ತಿಳಿಸಿದೆ.

  1.  

ಚಂದ್ರನ ಮೇಲೆ ಇಳಿಯುವ ಲ್ಯಾಂಡರ್​ಗೆ ‘ವಿಕ್ರಮ್​’ ಎಂದು ಹೆಸರಿಸಲಾಗಿದೆ. ಅದರಲ್ಲಿರುವ ರೋವರ್​ ಚಂದ್ರನ ಮೇಲ್ಮೈ ಅಧ್ಯಯನ ನಡೆಸಲಿದೆ. ಕೆಲ ದಿನಗಳ ಹಿಂದೆಯಷ್ಟೇ ಚಂದ್ರಯಾನ-3 ಗಗನನೌಕೆ ಪ್ರೊಪಲ್ಷನ್​ ಮಾಡ್ಯೂಲ್​ನಿಂದ ಲ್ಯಾಂಡರ್​ ಮಾಡ್ಯೂಲ್​ ಬೇರ್ಪಟ್ಟಿತ್ತು. ಇದಾದ ಬಳಿಕ ಸಾಫ್ಟ್​ ಲ್ಯಾಂಡಿಂಗ್​ಗೆ ನಿರ್ಣಾಯಕ ‘ಡಿಬೂಸ್ಟಿಂಗ್​’ ನಡೆಸಿ ಚಂದ್ರನ 100 ಕಿಲೋ ಮೀಟರ್ ಅಂತರದಲ್ಲಿ ಲ್ಯಾಂಡರ್​ ಅನ್ನು ತಂದು ನಿಲ್ಲಿಸಲಾಗಿದೆ.

Indian Space Research Organization (ISRO) has officially announced the date and time of Chandrayaan-3 landing which the world is waiting for. In just three days, the country is waiting for a historic record.

Chandrayaan-3 spacecraft lander at the designated space in the south pole of the moon. ISRO has officially announced on Sunday that it will land at 6.04 pm on the 23rd. If the dream of millions of Indians comes true, India will become the fourth country in the world to achieve this feat and the first country to reach the South Pole.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com