Breaking News

ನಾಡು ಕಂಡ ಮುತ್ಸದಿ ನಾಯಕ ದೇವರಾಜ ಅರಸು: ಸಚಿವ ಮಂಕಾಳ ವೈದ್ಯ

 

ಕಾರವಾರ: ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರಿಯಾಗಿಟ್ಟು ಜಾರಿಗೆ ತಂದ ಅನೇಕ ಯೋಜನೆಯಿಂದಾಗಿ‌ ಅರಸು ಅವರು ರಾಜ್ಯದ ಜನರ ಮನಸ್ಸಿನಲ್ಲಿ‌ ಶಾಶ್ವತವಾಗಿ ಉಳಿದುಕೊಂಡಿದ್ದಾರೆ. ದೇವರಾಜ ಅರಸು ಅವರು ನಾಡು ಕಂಡ ಮುತ್ಸದಿ ನಾಯಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಬಣ್ಣಿಸಿದರು.

ಕಾರವಾರ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,  ನಗರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ  ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 108 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ಸತೀಶ್ ಸೈಲ್ ಅವರು ಮಾತನಾಡಿ, ಡಿ.ದೇವರಾಜ ಅರಸು ಅವರ‌ ಆದರ್ಶಗಳನ್ನು ಪ್ರತಿಯೊಬ್ಬರು‌ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಮಾತನಾಡಿ‌,  ಡಿ.ದೇವರಾಜ ಅರಸು  ಅವರು ಹಿಂದುಳಿದ, ಅಲ್ಪಸಂಖ್ಯಾತರ,  ದೀನ ದಲಿತರ ಏಳಿಗೆಗಾಗಿ  ತಮ್ಮ‌ ಜೀವನವನ್ನು ಮೂಡಿಪಾಗಿಟ್ಟ  ಧೀಮಂತ  ವ್ಯಕ್ತಿ. ಧ್ವನಿ ಇಲ್ಲದ ಜನರ ಧ್ವನಿ ಆಗಿದ್ದರು ಎಂದು ಹೇಳಿದರು.

ಪಿ.ಎಚ್.ಡಿ ಸಂಶೋಧನಾ ವಿದ್ಯಾರ್ಥಿ ಕುಮಾರಸೋಮಲಿಂಗ ಬಿ ಬಾಳಿಕಾಯಿ ಅವರು ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು‌ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

  1.  

ಸಭಾ ಕಾರ್ಯಕ್ರಮಕ್ಕೂ‌ ಮೊದಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ  ಡಿ.ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆ  ಜಿಲ್ಲಾಧಿಕಾರಿ‌ ಗಂಗೂಬಾಯಿ‌ ಮಾನಕರ ಅವರು‌ ಚಾಲನೆ ನೀಡಿದರು.  ಮೆರವಣಿಗೆಯಲ್ಲಿ‌ ಡೊಳ್ಳು ಕುಣಿತ, ಸೇರಿದಂತೆ ಐದು ಪ್ರಕಾರದ ಕಲಾ ತಂಡಗಳು‌ ಭಾಗವಹಿಸಿದ್ದವು.

ಜಿ.ಪಂ. ಸಿಇಒ  ಈಶ್ವರ ಕುಮಾರ ಕಾಂದೂ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಜಯಕುಮಾರ, ತಹಶೀಲ್ದಾರ್ ನಿಶ್ಚಲ್ ನರೋನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಮಚಂದ್ರ ಮಡಿವಾಳ, ಕರ್ನಾಟಕ ದಲಿತ ಸಂಘಟನೆ ಸಮಿತಿಯ ಜಿಲ್ಲಾ ಅಧ್ಯಕ್ಷ ದೀಪಕ ಬಿ ಕುಡಳಕರ, ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ  ಎಲಿಷಾ ಎಲಕಪಾಟಿ, ನಗರಸಭೆ ಸದಸ್ಯರಾದ ಹನುಮಂತಪ್ಪ ತಳವಾರ, ಅಂಬಿಗ ಸಮಾಜದ ಮುಖಂಡರಾದ ಬಾಲಾಜಿ ಅಂಬಿಗ, ಪ.ಜಾತಿ ಮತ್ತು ಪ. ಪಂಗಡ ನೌಕರ ಸಂಘದ ಅಧ್ಯಕ್ಷರಾದ ಡಿ.ಜೆ. ಮನೋಜ್, ವಿದ್ಯಾರ್ಥಿಗಳು ಇತರರು ಇದ್ದರು.

ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಿ.ಸತೀಶ ಸ್ವಾಗತಿಸಿದರು. ಶ್ರೀಶೈಲ ನಿರೂಪಿಸಿದರು. ವೀಣಾ ನಾಯಕ ವಂದಿಸಿದರು.

Because of the many schemes implemented targeting the fringes of the society, Arasu has remained forever in the minds of the people of the state. District In-charge Minister Mankala S Vaidya described Devaraja Arasu as a mutsadi leader who saw the country.

He spoke while inaugurating the 108th birth anniversary program of Devaraja Arasu organized on Sunday under the auspices of District Administration, District Panchayat, Backward Classes Welfare Department, Municipal Council and various organizations at Karwar Police Welfare Hall.

MLA Satish Sail said that everyone should adopt the ideals of D. Devaraja Arasu in their lives.

District Collector Gangubai Manakara said that D. Devaraja Arasu was a valiant person who dedicated his life for the prosperity of the backward, minorities and downtrodden Dalits. He said that he was the voice of the voiceless people.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com