Breaking News

ಜಾಗತಿಕ ಮೆರಿಟೈಮ್ ಇಂಡಿಯಾ ಶೃಂಗಸಭೆ ಆತ್ಮನಿರ್ಭರಕ್ಕೆ ಸಹಕಾರಿ: ಸಚಿವೆ ಶೋಭಾ

 

ಮಂಗಳೂರು: ನವಮಂಗಳೂರು ಬಂದರು ಸೇರಿದಂತೆ ದೇಶದ ಎಲ್ಲ ಬಂದರುಗಳನ್ನು ಆತ್ಮನಿರ್ಭರದ ವ್ಯಾಪ್ತಿಗೆ ಸೇರ್ಪಡೆ ಮಾಡಲು ಕೇಂದ್ರ ಸರಕಾರವು ಉತ್ಸುಕತೆ ಹೊಂದಿದ್ದು, ಉದ್ಯಮಿಗಳು ಕೇಂದ್ರ ಸರಕಾರದ ಈ ಯೋಜನೆಗೆ  ಕೈಜೋಡಿಸಬೇಕು ಎಂದು ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಮಂಗಳೂರಿನ ಪಣಂಬೂರು ಬಿಡಿಎಸ್ ಸಭಾಂಗಣದಲ್ಲಿ ಅ. 17 ರಿಂದ 19 ವರಿಗೆ ನಡೆಯಲಿರುವ ಜಾಗತಿಕ ಮೆರಿಟೈಮ್ ಇಂಡಿಯಾ ಶೃಂಗಸಭೆ 2023 ರ  ಭಾಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಸಮಾವೇಶ ಪೂರ್ವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 

ಅಭಿವೃದ್ಧಿಯ ದೃಷ್ಟಿಯಿಂದ ಕೊಂಕಣ ರೈಲ್ವೆಯನ್ನು ನೈರುತ್ಯ ರೈಲ್ವೆಯ ಜತೆ ವಿಲೀನಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಕೇಂದ್ರ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಅವರ ಜತೆ ಕೂಡ ಈ ಕುರಿತು ಸಮಾಲೋಚನೆ ನಡೆಸಲಾಗಿದೆ. ಬಂದರುಗಳನ್ನು ಆತ್ಮನಿರ್ಭರಗೊಳಿಸಲು ಜಾಗತಿಕ ಮೆರಿಟೈಮ್ ಇಂಡಿಯಾ ಶೃಂಗಸಭೆ 2023 ಸಹಕಾರಿ ಎಂದು ಹೇಳಿದರು.

  1.  

ಕೊಂಕಣ ರೈಲ್ವೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದು,  ಪ್ಲಾಟ್‌ ಫಾರ್ಮ್‌ಗಳ ವಿಸ್ತರಣೆ, ಹೆಚ್ಚುವರಿ ನಿಲ್ದಾಣಗಳು ಸಿಗುತ್ತಿಲ್ಲ. ಈ ವಿಭಾಗದಲ್ಲಿ ರೈಲುಗಳಲ್ಲಿ ಭದ್ರತೆ ಕೊರತೆ ಇದೆ. ಆದ್ದರಿಂದ ಕೊಂಕಣ ರೈಲ್ವೆಯನ್ನು ನೈರುತ್ಯ ರೈಲ್ವೆಯ ಜೊತೆಗೆ ವಿಲೀನಗೊಳಿಸಬೇಕು ಅಥವಾ ಕೊಂಕಣ ರೈಲ್ವೆಗೆ ಹಣ ಒದಗಿಸುವಂತೆ ಕೇಂದ್ರ ರೈಲ್ವೆ ಸಚಿವರ ಎದುರು ಬೇಡಿಕೆ ಮಂಡಿಸಲಾಗುತ್ತದೆ ಎಂದರು.

ಕೇಂದ್ರದ ಬಂದರು, ಪ್ರವಾಸೋದ್ಯಮ, ಒಳನಾಡು ಜಲಸಾರಿಗೆ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಉದ್ಘಾಟಿಸಿ ಮಾತನಾಡಿದರು. ಸಂಸದ ನಳಿನ್‌ ಕುಮಾರ್‌ ಕಟೀಲ್‌, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ನವಮಂಗಳೂರು ಬಂದರು ಪ್ರಾಧಿಕಾರ ಅಧ್ಯಕ್ಷ ಡಾ.ಎ.ವಿ.ರಮಣ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ ಸಿ.ಎಲ್, ಶ್ರೀನಿವಾಸ್‌ ವಿದ್ಯಾಸಂಸ್ಥೆಯ ಕುಲಪತಿ ಡಾ. ಸಿಎ ಎ. ರಾಘವೇಂದ್ರ ರಾವ್‌, ಪ್ರವೀಣ್‌ ಕಲ್ಭಾವಿ ಇದ್ದರು.

Union Minister of State for Agriculture Shobha Karandlaje said that the central government is eager to include all the ports of the country including Mangalore Navamangaluru port under the scope of self-reliance and businessmen should join hands with this plan of the central government.

In Panambur BDS hall of Mangalore. He was speaking at a pre-convention program on Sunday as part of the Global Maritime India Summit 2023 to be held from 17 to 19.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com