Breaking News

ಮಾಜಿ ಶಾಸಕಿ ರೂಪಾಲಿ ನಾಯ್ಕ್ ಜನ್ಮದಿನ, ಆಟೋ ನಿಲ್ದಾಣಗಳಿಗೆ ಚಾವಣಿ ಭಾಗ್ಯ

 

ಕಾರವಾರ: ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಸ್ವಂತ ಖರ್ಚಿನಲ್ಲಿ ನಗರದ ಮಹಾಗಣಪತಿ ಆಟೋ ನಿಲ್ದಾಣಕ್ಕೆ ಹಾಗೂ ಕೋಡಿಬಾಗದ ಹೂವಿನ ಚೌಕ್ ಆಟೋ ನಿಲ್ದಾಣಕ್ಕೆ ಚಾವಣಿ ಹಾಕಿಸಿದ್ದು, ಶುಕ್ರವಾರ ತಮ್ಮ ಜನ್ಮದಿನದಂದು ಉದ್ಘಾಟನೆ ನೆರವೇರಿಸಿದರು.

ಅವರು ಮಾತನಾಡಿ, ರಿಕ್ಷಾ ಚಾಲಕರು ಶ್ರಮಿಕ ವರ್ಗದವರು. ತಮ್ಮ ಕುಟುಂಬದ ನಿರ್ವಹಣೆ ಜತೆಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಅನೇಕ ಚಾಲಕರು ಇದ್ದಾರೆ. ರಿಕ್ಷಾ ಚಾಲಕರ ಅನುಕೂಲತೆಗಾಗಿ ಚಾವಣಿ ಹಾಕಲಾಗಿದೆ ಎಂದರು.

ಬಳಿಕ  ರೂಪಾಲಿ ನಾಯ್ಕ ಅವರ ಜನ್ಮದಿನಕ್ಕೆ ಆಟೋ ಚಾಲಕರು ಹಾಗೂ ಮಾಲೀಕರು ಸೇರಿ ಅವರನ್ನು ಸನ್ಮಾನಿಸಿ ಶುಭಾಶಯ ಕೋರಿದರು.

ಸುಭಾಷ್ ಸರ್ಕಲ್ ಆಟೋ ನಿಲ್ದಾಣದಲ್ಲಿ ಕೇಕ್ ಕತ್ತರಿಸುವ ಮೂಲಕ  ಆಟೋ ಚಾಲಕರ ಹಾಗೂ ಮಾಲೀಕರ ಜತೆಗೆ ಜನ್ಮದಿನವನ್ನು ಆಚರಿಸಿಕೊಂಡರು.

  1.  

ಒಬಿಸಿ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯ ರಾಜೇಂದ್ರ ನಾಯ್ಕ, ಕಾರವಾರ ಗ್ರಾಮೀಣ ಮಂಡಲ  ಅಧ್ಯಕ್ಷ  ಸುಭಾಷ ಗುನಗಿ, ನಗರಸಭೆ  ಸದಸ್ಯರಾದ ರವಿರಾಜ ಅಂಕೋಲೆಕರ್ ಹಾಗೂ ಆಟೋ ಚಾಲಕರು ಹಾಗೂ ಮಾಲೀಕರು ಇದ್ದರು.

ಆಶಾ ನಿಕೇತನ ಶಾಲೆ: ಕಾರವಾರ ಆಶಾ ನಿಕೇತನ ಶಾಲೆಯ  ಮಕ್ಕಳ ಜತೆಗೆ ಸರಳ ಜನ್ಮದಿನವನ್ನು ಮಾಜಿ ಶಾಸಕಿ ರೂಪಾಲಿ ನಾಯ್ಕ ಆಚರಿಸಿಕೊಂಡರು. ಪರಿವಾರದವರು. ಆಪ್ತರು, ಶಾಲೆಯ ಶಿಕ್ಷಕ ವೃಂದ, ನಗರ ಮಂಡಲ ಬಿಜೆಪಿ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

ದೇಗುಲಗಳ ಭೇಟಿ :  ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ್ ಅವರು ಕಾರವಾರದಲ್ಲಿನ ದೇವಳಿ ವಾಡದಲ್ಲಿ ಇರುವ  ತಮ್ಮ ಮನೆಯಲ್ಲಿ ಕ್ಷೇತ್ರದ ಸಾವಿರಾರು ಜನ ಅಭಿಮಾನಿಗಳು, ಹಿತೈಷಿಗಳು, ಆಪ್ತರ ಸಮ್ಮುಖದಲ್ಲಿ ಜನ್ಮದಿನ ಆಚರಿಸಿಕೊಂಡರು. ಅವರಿಗೆ ಹಲವರು ಶುಭಾಶಯಗಳನ್ನು ಕೋರಿದರು.

ಕಾರವಾರ ನಗರದ ಗಣಪತಿ ದೇವಸ್ಥಾನದಲ್ಲಿ ತಮ್ಮ ಪರಿವಾರ ಮತ್ತು ಬಂಧು-ಬಳಗದ ಜತೆಗೆ ಬಂದು ಪೂಜೆ ನೆರವೇರಿಸಿದರು. ನಂತರ ದುರ್ಗಾದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಗರದ ಮಾರುತಿ ಮಂದಿರದಲ್ಲಿ ಪೂಜೆ ಸಲ್ಲಿಸಿ, ಜೈಸಂತೋಷಿ ಮಾತಾ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದರು.

Karwar, former MLA from Ankola Constituency, Rupali Nayka, at her own expense, installed a roof at the city’s Mahaganapati auto station and Kodibag’s Pusula Chowk auto station and inaugurated it on her birthday on Friday.

He said, rickshaw pullers are working class. There are many drivers who are involved in social service along with maintaining their families. He said that the ceiling has been put up for the convenience of rickshaw pullers.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com