Breaking News

ಪಂಚಾಯಿತಿ ಕಡೆಗಣಿಸಿದ್ದ ವೀರ ಯೋಧನಿಗೆ ಜನಶಕ್ತಿ ವೇದಿಕೆಯ ಗೌರವ

 

ಕಾರವಾರ:  77 ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಗ್ರಾಮ ಪಂಚಾಯಿತಿ ಗೌರವಿಸದೆ ಕಡೆಗಣನೆ ಮಾಡಿದ್ದ ವೀರ ಯೋಧರೊಬ್ಬರನ್ನು ಜನಶಕ್ತಿ ವೇದಿಕೆ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು.

ತಾಲೂಕಿನ ಮಾಜಾಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶೀತಲ್ ಪವಾರ್ ಅವರ ಮಾವ ಪ್ರಭಾಕರ್ ಪವಾರ್ ಅವರಿಗೆ ಈಗ 87 ವರ್ಷ.  ರಕ್ಷಣಾ ಇಲಾಖೆಯಲ್ಲಿ ಸಬ್ ಮೇಜರ್ ಆಗಿ ಎರಡು ಮಹತ್ವದ ಯುದ್ಧಗಳಲ್ಲಿ ಭಾಗವಹಿಸಿದ್ದರು. 28 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಯೋಧರನ್ನ ಸನ್ಮಾನಿಸಿ ಗೌರವಿಸಲಾಗುತ್ತಿದೆ.

ಮಾಜಾಳಿ ಗ್ರಾಮ ಪಂಚಾಯತಿ ಮಾತ್ರ ಪ್ರಭಾಕರ್ ಪವಾರ್ ಅವರನ್ನು ಕಡೆಗಣನೆ ಮಾಡಲಾಗಿತ್ತು. ಈ ಬಗ್ಗೆ ವಿಷಯ ತಿಳಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ನೇತೃತ್ವದಲ್ಲಿ ಪದಾಧಕಾರಿಗಳು ಅವರ ಮನೆಗೆ ತೆರಳಿ, ಫಲತಾಂಬೂಲ ನೀಡಿ, ಪೇಟ ತೊಡಿಸಿ, ತ್ರಿವರ್ಣ ಧ್ವಜ ನೀಡಿ ಗೌರವಿಸಿದರು. ಇದಕ್ಕೆ ಪವಾರ್ ಅವರು ಬಹಳ ಸಂತಸಪಟ್ಟು, ಜನಶಕ್ತಿ ವೇದಿಕೆ ಕಾರ್ಯಕ್ಕೆ ಕೃತಜ್ಞತೆ ಅರ್ಪಿಸಿದರು.

  1.  

ಪ್ರಮುಖರಾದ ಶಿವಾನಂದ್ ನಾಯ್ಕ್, ಅಲ್ತಾಫ್ ಶೇಖ್, ಸುರೇಶ್ ನಾಯ್ಕ, ಅಲಿ ಖುರೇಶಿ, ಸಿ.ಎನ್.ನಾಯ್ಕ, ಸೂರಜ್ ಕುರುಮಕರ, ಭಾಸ್ಕರ್, ಮತ್ತು ಪ್ರಭಾಕರ ಪವಾರರ ಪುತ್ರ ಸಂತೋಷ ಪವಾರ್, ಸೊಸೆ ಮಾಜಾಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ  ಶೀತಲ್ ಪವಾರ್, ಮೊಮ್ಮಕ್ಕಳಾದ, ಪ್ರತಿಕ್, ರೋಹಿತ್, ನಿವೃತ್ತ ಸೇನಾನಿ ರಮಾಕಾಂತ್ ಗಾಂವ್ಕರ್ ಇದ್ದರು.

During the 77th Independence Day celebrations, a brave soldier who was neglected by the Gram Panchayat was honored on Tuesday by the Janashakti Odisha.

Prabhakar Pawar, father-in-law of Sheetal Pawar, ex-president of Majali Gram Panchayat of Karwar taluk, is now 87 years old. He participated in two important wars as a Sub Major in the Defense Department. He served in the army for 28 years. On the occasion of Independence Day, freedom fighters and ex-warriors are honored and respected in all Gram Panchayats.

Only Prabhakar Pawar was ignored by Majali Gram Panchayat. On learning about this, under the leadership of Madhav Nayaka, president of Jan Shakti vedike, the soldiers went to his house, presented him with fruits, wore a turban and honored him with a tricolor flag. Pawar was very happy about this and thanked the Jan Shakti Vodhya work.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com