Breaking News

ಮಂಗಳೂರು: ಎಲ್ಐಸಿ ಪ್ರತಿನಿಧಿಗಳ ವಿವಿದೋದ್ಧೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

 

ಮಂಗಳೂರು: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ವಿವಿದೋದ್ಧೇಶ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಶನಿವಾರ ರಾಧಾಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ಕೆ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಆರ್ಥಿಕ ವರ್ಷ 2010-11 ರಲ್ಲಿ ಭಾರತೀಯ ಜೀವವಿಮಾ ನಿಗಮದ ವೃತ್ತಿನಿರತ ಪ್ರತಿನಿಧಿಗಳ ಆರ್ಥಿಕ ಸ್ವಾವಲಂಬನೆಯ ಸದುದ್ದೇಶದಿಂದ ಆರಂಭಗೊಂಡ ಸಹಕಾರ ಸಂಘದಲ್ಲಿ ಪ್ರಸ್ತುತ 1155 ವಿವಿಧ ವರ್ಗದ ಸದಸ್ಯರು ಸಕ್ರೀಯರಾಗಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ರೂಪಾಯಿ 16.87 ಕೋಟಿಗಳ ಒಟ್ಟು ವ್ಯವಹಾರ ದಾಖಲಿಸಿದೆ. ರೂ.3.16 ಕೋಟಿಗಳನ್ನು ತನ್ನ ಸದಸ್ಯರಿಗೆ ವಿವಿಧ ಸಾಲ ರೂಪದಲ್ಲಿ ವಿತರಿಸಲಾಗಿದೆ. ಶೇ 98 ರಷ್ಟು ಸಾಲಗಳು ಕ್ಲಪ್ತ ಸಮಯದಲ್ಲಿ ಮರುಪಾವತಿಯಾಗಿದೆ ಎಂದು ತಿಳಿಸಿದರು.

ಸಹಕಾರಿ ಸಂಘದಲ್ಲಿ ಒಟ್ಟು ರೂ.6.15 ಕೋಟಿಗಳ ದುಡಿಯುವ ಬಂಡವಾಳವಿದ್ದು ರೂ.4.87 ಕೋಟಿಗಳ ಠೇವಣಿಯನ್ನು ಹೊಂದಿದೆ. ಸದಸ್ಯರಿಂದ ಒಟ್ಟು ರೂ. 46.35 ಲಕ್ಷಗಳ ಪಾಲು ಬಂಡವಾಳವನ್ನು ಸಂಗ್ರಹಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ರೂ. 12.11 ಲಕ್ಷಗಳ ನಿವ್ವಳ ಲಾಭಾಂಶ ಗಳಿಸಿದೆ. ಸದಸ್ಯರ ಪಾಲು ಬಂಡವಾಳದ ಮೇಲೆ ಶೇ 10 ರಂತೆ ಪಾಲು ಮುನಾಫೆ ವಿತರಿಸಲು ಆಡಳಿತ ಮಂಡಳಿ ಶಿಫಾರಸು ಮಾಡಿದ್ದು ಮಹಾಸಭೆಯ ಮಂಜೂರಾತಿ ಪಡೆಯಲಾಗಿದೆ ಎಂದರು.

ಸಂಸ್ಥೆಯ ಕಾರ್ಯವ್ಯಾಪ್ತಿಯ ಎಲ್ಲ ಸಕ್ರಿಯ ಜೀವ ವಿಮಾ ಪ್ರತಿನಿಧಿಗಳು ಸಹಕಾರಿ ಸಂಘದ ಸದಸ್ಯತ್ವ ಪಡೆದು ಸಂಸ್ಥೆಯ ಬೆಳವಣಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.

ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷ  ದಿ. ಪಿ ಜೆ ಸಾಲ್ದಾನಾ ಅವರ ಸ್ಮರಣಾರ್ಥ ಸಹಕಾರಿ ಸಂಘದ ಸದಸ್ಯರ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ  ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾದ ಸದಸ್ಯರ ಅರ್ಹ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಸಲಾಯಿತು.

  1.  

ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಾಂತ್ ಸಿ ಎಚ್ ಸಂಸ್ಥೆಯ ಪರಿಶೋಧಿತ ಲೆಕ್ಕಪತ್ರವನ್ನು ಮಹಾಸಭೆಯ ಅನುಮೋದನೆ ಪಡೆಯಲಾಯಿತು. ಸಂಸ್ಥೆಯು ಅಡಿಟ್ ವರ್ಗೀಕರಣದಲ್ಲಿ ‘ಎ’ ಗ್ರೇಡ್ ಅನ್ನು ಪಡೆದಿದೆ.

ಸಹಕಾರಿ ಸಂಘದ ಸಲಹೆಗಾರ ರಾಮಯ್ಯ ಶೆಟ್ಟಿ ಅವರು ಕಳೆದ ಆರ್ಥಿಕ ವರ್ಷದ ವಾರ್ಷಿಕ ವರದಿ ಮಂಡಿಸಿ ಮಹಾಸಭೆಯ ಅನುಮೋದನೆ ಪಡೆದರು.

ಸಹಕಾರಿ ಸಂಘದ ಉಪಾಧ್ಯಕ್ಷ  ಜಯಪ್ರಕಾಶ್ ಶೆಟ್ಟಿ ಅವರು ಎಲ್ಲರನ್ನು ಸ್ವಾಗತಿಸಿದರು. ನಿರ್ದೇಶಕ  ಎ ವಿಶ್ವನಾಥ ಗಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ  ಕಾಶೀನಾಥ್ ಪುತ್ರನ್ ವಂದಿಸಿದರು. ಸದಸ್ಯೆ ಸ್ವಾತಿ ಸತೀಶ್ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಸಹಕಾರಿ ಸಂಘದ ನಿರ್ದೇಶಕ ಸ್ಟ್ಯಾನಿ ಡಿಸೋಜಾ, ಕೊಡಂಗೆ ಬಾಲಕೃಷ್ಣ ನಾಯ್ಕ್,  ಲೀಲಾವತಿ ಕೆ, ಶ್ರೀನಿವಾಸ್ ಕಣ್ವತೀರ್ಥ, ಎಚ್ ಸುಬ್ರಹ್ಮಣ್ಯ ಭಟ್, ಮಗಾಲಿಂಗೇಶ್ವರ ಭಟ್, ಕಿಶೋರ್ ಕುಟಿನ್ಹ ಮತ್ತು ಸಹಕಾರಿ ಸಂಘದ ಸಿಬ್ಬಂದಿ ಇದ್ದರು.

The annual general meeting of all members of Vividodhesh Cooperative Society of Mangalore representatives of Life Insurance Corporation of India was held on Saturday at the Radhakrishna Temple hall under the chairmanship of Purushottam K Bhandari, President of the Cooperative Society.

In the financial year 2010-11 with the objective of financial self-sufficiency of the professional representatives of Life Insurance Corporation of India, the co-operative society currently has 1155 active members from various categories. It recorded a total turnover of Rs 16.87 crores in the last financial year. Rs.3.16 Crores have been disbursed to its members in the form of various loans. He said that 98 percent of the loans were repaid on time.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com