ಸಿರಸಿ: ಪರಿಶಿಷ್ಟ ಸಮಾಜದ ಹಿರಿಯ ಕೊಂಡಿ ಮೋಹನ್ ಶಿರೂರ್ ಅವರು ತೀವೃ ಹೃದಯಾಘಾತದಿಂದ ಶನಿವಾರ ಬೆಳಗಿನ ಜಾವ ನಿಧನರಾದರು.
ಇವರು ಪರಿಶಿಷ್ಟ ಕಲ್ಯಾಣಕ್ಕಾಗಿ ಮಾಡಿದ ಸೇವೆ ಸ್ಮರಣೀಯವಾಗಿದೆ. ಮೋಹನ್ ಶಿರೂರ್ ಅವರು ಬಹಳ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯರಾಗಿದ್ದರು. ಇವರ ನಿಧನಕ್ಕೆ ತಾಲೂಕಿನ ಹಲವು ಎಸ್ಸಿ,ಎಸ್ಟಿ ಕುಟುಂಬಗಳು ಸಂತಾಪ ಸಲ್ಲಿಸಿವೆ. ಮೋಹನ್ ಶಿರೂರ್ ಅವರ ನಿಧನಕ್ಕೆ ಶಾಸಕ ಭೀಮಣ್ಣ ಟಿ ನಾಯ್ಕ ಶ್ರದ್ಧಾಂಜಲಿ ಸಲ್ಲಿಸಿದರು.