Breaking News

ಆಯುಷ್‌ ಆಸ್ಪತ್ರೆಯಲ್ಲಿ ಇನ್ಮುಂದೇ ಶಸ್ತ್ರಚಿಕಿತ್ಸೆ ಸೌಲಭ್ಯ ಕೂಡ ಲಭ್ಯ: ಡಾ. ಇಕ್ಬಾಲ್‌

 

ಮಂಗಳೂರು: ವೆನ್ಲಾಕ್‌ ಆಯುಷ್‌ ಆಸ್ಪತ್ರೆಯಲ್ಲಿ ಆಯುರ್ವೇದ, ಯುನಾನಿ, ನ್ಯಾಚುರೋಪತಿ ಹಾಗೂ ಹೋಮಿಯೋಪತಿ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಇನ್ನೂ ಇದರ ಜತೆಗೆ ಶಸ್ತ್ರಚಿಕಿತ್ಸೆ ಕೂಡ ಅಗಸ್ಟ್‌ ಅಂತ್ಯದ ಕಾರ್ಯಾರಂಭ ಆಗಲಿದೆ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ. ಇಕ್ಬಾಲ್‌ ಅವರು  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪ್ರೆಸ್‌ ಕ್ಲಬ್‌ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ತಿಳಿಸಿದರು.

ಅತ್ಯಾಧುನಿಕ ಅಪರೇಷನ್‌ ಥಿಯೇಟರ್‌ ಅನ್ನು ಎಂಆರ್‌ಪಿಎಲ್‌ನ ಸಿಎಸ್‌ಆರ್‌ ಅನುದಾನದಲ್ಲಿ ಸಿದ್ಧ ಮಾಡಿಕೊಳ್ಳಲಾಗಿದೆ. ಕ್ಷಾರಸೂತ್ರ ಚಿಕಿತ್ಸೆ ಆರಂಭಿಸಲಿದ್ದು, ಪುತ್ತೂರು ಆಸ್ಪತ್ರೆ ವೈದ್ಯ ಡಾ. ರವಿಶಂಕರ್‌ ಪೆರುವಾಜೆ ಹಾಗೂ ಶಿವಮೊಗ್ಗ ಆಸ್ಪತ್ರೆ ತಜ್ಞ ವೈದ್ಯರು ಬಂದು ಚಿಕಿತ್ಸೆ ನೀಡಲಿದ್ದಾರೆ ಎಂದರು.

10 ರಿಂದ 25 ಮಂದಿಗೆ ಸರ್ಜರಿಗೆ ಅವಕಾಶವಿದ್ದು, ಯುನಾನಿ ಹಿಜಾಮ ಚಿಕಿತ್ಸಾ ಸೌಲಭ್ಯವೂ ಇದೆ. ಫಿಸಿಯೋಥೆರಪಿ ಕೇಂದ್ರದಲ್ಲಿ ಎಲ್ಲ ವಿಧದ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಆಧುನಿಕ ಯಂತ್ರದ ಸಹಾಯದಿಂದ ಹೈಡ್ರೋ ಥೆರಪಿ, ಗಂಟು ನೋವಿಗೆ ಸರ್ಜರಿ ರಹಿತ ಚಿಕಿತ್ಸಾ ಸೌಲಭ್ಯ ಕೂಡ ಆಯುಷ್‌ ಆಸ್ಪತ್ರೆಯಲ್ಲಿ ಸಿಗಲಿದೆ. ಎಲ್ಲ ಬಗೆಯ ಚಿಕಿತ್ಸೆಯನ್ನೂ ಉಚಿತವಾಗಿಯೇ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತ ಹಾಗೂ ಎಪಿಎಲ್‌ ಕಾರ್ಡ್‌ದಾರರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಆಯುಷ್‌ ಆಸ್ಪತ್ರೆಯಲ್ಲಿ ಈಗಾಗಲೇ  20 ಹಾಸಿಗೆ ವ್ಯವಸ್ಥೆ ಇದೆ. ಡಿಸೆಂಬರ್‌ ಅಂತ್ಯಕ್ಕೆ 50 ಹಾಸಿಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

  1.  

ಸೃಷ್ಟಿ ಯೋಜನೆಯಲ್ಲಿ ಈಗಾಗಲೇ ಮೂರು ಮಂದಿ ಮಕ್ಕಳು ಜನಿಸಿದ್ದಾರೆ. 57 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪೌಷ್ಠಿಕತೆ ನಿವಾರಣೆಗೆ ಸಮೃದ್ಧಿ ಯೋಜನೆ, ತಾಯಿ ಮತ್ತು ಮಕ್ಕಳ ಆರೋಗ್ಯ ಪಾಲನೆಗೆ ಸುಪ್ರಜಾ ಯೋಜನೆ, ಸುಳ್ಯ, ಪುತ್ತೂರು ಹಾಗೂ ಬಂಟ್ವಾಳ ಅಥವಾ ಬೆಳ್ತಂಗಡಿಗೆ ಆಯುಷ್‌ ಸಂಚಾಋ ಕ್ಲಿನಿಕ್‌ ಕಾರ್ಯಕ್ರಮ ಆರಂಭವಾಗಲಿದೆ ಎಂದರು.

ವೆನ್ಲಾಕ್‌ ಆಯುಷ್‌ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅಜಿತ್‌ನಾಥ್‌ ಇಂದ್ರ, ಲಾಲ್‌ಬಾಗ್‌ ಆಯುಷ್‌ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಹೇಮವಾಣಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಪ್ರೆಸ್‌ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ, ಉಪಾಧ್ಯಕ್ಷ ಬಿ.ಎನ್‌. ಪುಷ್ಪರಾಜ್‌ ಇದ್ದರು.

Mangalore Wenlock AYUSH Hospital offers Ayurveda, Unani, Naturopathy and Homeopathy treatments. In addition to this, the operation of the surgery will also begin at the end of August, according to the district AYUSH officer Dr. Iqbal said in an interaction organized by the District Working Journalists Association at the Press Club.

A state-of-the-art operation theater has been prepared under MRPL’s CSR grant. Alkaline treatment will be started, Dr. Puttur Hospital doctor. Ravi Shankar Peruja and Shimoga Hospital specialist doctors will come and provide treatment, he said.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com