Breaking News

ಸುಳ್ಯದಲ್ಲಿ ಸೌಜನ್ಯ ಪರ ಬೃಹತ್ ಹಕ್ಕೊತ್ತಾಯ ಸಭೆ, ಬೃಹತ್ ಜಾಥಾ

 

ಸುಳ್ಯ: ಸೌಜನ್ಯ ಅತ್ಯಾಚಾರ, ಕೊಲೆ ನಡೆದು 11 ವರ್ಷ ಕಳೆದರೂ ನ್ಯಾಯ ಸಿಗದೇ ಇರುವುದು ಪ್ರಜಾಪ್ರಭುತ್ವಕ್ಕೆ ಅಂಟಿದ ಕಳಂಕ ಎಂದು ಹೋರಾಟಗಾರ ಮಹೇಶ್ ತಿಮರೋಡಿ ಹೇಳಿದರು.

ಬೆಳ್ತಂಗಡಿ ಸೌಜನ್ಯ ಹತ್ಯೆ ಪ್ರಕರಣವನ್ನು ಮರು ತನಿಖೆ ನಡೆಸಿ ನೈಜ ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಒತ್ತಾಯಿಸಿ ‘ನ್ಯಾಯಕ್ಕಾಗಿ ಸೌಜನ್ಯ ಹೋರಾಟ ಸಮಿತಿ’ ವತಿಯಿಂದ ಸುಳ್ಯದಲ್ಲಿ  ನಡೆದ ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.

ಸೌಜನ್ಯಳಿಗೆ 11 ವರ್ಷಗಳಿಂದ ನ್ಯಾಯ ಕೊಡಲು ಆಗಿಲ್ಲ. ಮಾತೆಯ ರಕ್ಷಕರು ಎನ್ನುವ ನಮಗೆ ಸೌಜನ್ಯಳ ರಕ್ಷಣೆ ನಮ್ಮಿಂದ ಆಗಿಲ್ಲ. ದೇವರ ಹೆಸರಿನಲ್ಲಿ ಧಾರ್ಮಿಕ ಭಯೋತ್ಪಾದನೆ ನಡೆಯುತ್ತಿದೆ. ಸೌಜನ್ಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆಗುವವೆರೆಗೂ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ. ನಮ್ಮ ಹೋರಾಟ ದೇವಸ್ಥಾನ, ಧರ್ಮ, ಜಾತಿ ವಿರುದ್ಧ ಅಲ್ಲ. ನ್ಯಾಯಾಂಗದ ಮೇಲೆ ನಂಬಿಕೆ ಇದ್ದರೆ ನೈಜ ಆರೋಪಿಗಳನ್ನು ಬಂಧಿಸಿ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದರು.

ಸೌಜನ್ಯ ತಾಯಿ ಕುಸುಮಾವತಿ ಸಭೆ ಉದ್ಘಾಟಿಸಿ ಮಾತನಾಡಿ, ನನ್ನ ಮಗಳನ್ನು ಅತ್ಯಾಚಾರ – ಕೊಲೆ ಮಾಡಿ ಅಮಾನವೀಯ ರೀತಿಯಲ್ಲಿ ಕೊಂದು ಹಾಕಿದ್ದಾರೆ. ಎಲ್ಲರಲ್ಲಿಯೂ ನ್ಯಾಯವನ್ನು ಬೇಡುತಿದ್ದೇನೆ. ಇದಕ್ಕೆಲ್ಲ ನಿಮ್ಮ ಸಹಕಾರ ಬೇಕು. ಮುಂದೆ ನಡೆವ ಎಲ್ಲಾ ಹೋರಾಟಗಳಲ್ಲಿಯೂ ಭಾಗಿ ಆಗುತ್ತೇನೆ. ಇನ್ನೂ ಇಂತಹ ಪ್ರಕರಣಗಳು ನಡೆಯಬಾರದು. ಸೌಜನ್ಯಳ ಕೊಲೆ ಅತ್ಯಾಚಾರ ಪ್ರಕರಣ ಕೊನೆಯದಾಗಬೇಕು ಎಂದು ಆಗ್ರಹಿಸಿದರು.

  1.  

ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ನ್ಯಾಯ ಕೇಳಿ ನಿಂತಿಕಲ್ಲಿನಿಂದ ಆರಂಭಗೊಂಡ ವಾಹನ ಜಾಥಾ  ಸುಳ್ಯ ನಗರ ಪ್ರವೇಶಿಸಿ ಜ್ಯೋತಿ ಸರ್ಕಲ್ ಬಳಿಯಿಂದ ಸಾವಿರಾರು ಜನರು ನಗರದಲ್ಲಿ ಪಾದಯಾತ್ರೆ ಮೂಲಕ ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿ ಪ್ರತಿಭಟನಾ ಸಭೆ ನಡೆಯಿತು. ಹಕ್ಕೊತ್ತಾಯ ಸಭೆಯ ಬಳಿಕ ಸೌಜನ್ಯ ಪ್ರಕರಣದ ಮರು ತನಿಖೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಸೌಜನ್ಯಾಳ ತಂದೆ ಚಂದಪ್ಪ ಗೌಡ, ಒಡನಾಡಿ ಸಂಸ್ಥೆ ಸ್ಟ್ಯಾನ್ಲಿ, ಪರಶುರಾಮ್, ಹೋರಾಟ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಡಿ.ಬಿ.ಬಾಲಕೃಷ್ಣ, ಸುಳ್ಯ ಗೌಡ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಹೋರಾಟ ಸಮಿತಿ ಸಂಯೋಜಕ ಎನ್.ಟಿ. ವಸಂತ, ಜಿ.ಪಂ. ಮಾಜಿ ಸದಸ್ಯೆ ಸರಸ್ವತಿ ಕಾಮತ್, ಕಾರ್ಯಕ್ರಮ ಸಂಚಾಲಕ ಹರೀಶ್ ಕುಮಾರ್ ಹುದೇರಿ, ಪ್ರಶಾಂತ್ ಮುರುಳ್ಯ ಇದ್ದರು. ಅಜಿತ್ ಐವರ್ನಾಡು ನಿರೂಪಿಸಿದರು.

The activist Mahesh Timarodi said that even after 11 years of courtship rape and murder, justice has not been done, it is a stain on democracy.

He spoke at a massive rights meeting held in Sullya on behalf of the ‘Justice for Courtesy Struggle Committee’ demanding that the Beltangadi courtesy killing case should be re-investigated and the real accused should be found.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com