Breaking News

ಸೌಹಾರ್ದ ಆಟಿಕೂಟ, ಗ್ರಾಮೀಣ ಆಟೋಟ ಸ್ಪರ್ಧೆ ಸಂಭ್ರಮ

 

ಸುರತ್ಕಲ್: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಮತ್ತು ಸುರತ್ಕಲ್‌ ಬ್ಲಾಕ್‌ ಕಿಸಾನ್‌ ಘಟಕದ ವತಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ ಅವರ ನೇತೃತ್ವದಲ್ಲಿ ಸೌಹಾರ್ದ ಆಟಿಕೂಟ ಮತ್ತು ಗ್ರಾಮೀಣ ಆಟೋಟ ಸ್ಪರ್ಧೆ ಎನ್‌ಐಟಿಕೆ ಸಮೀಪದ ಪಡ್ರೆ ಧೂಮಾವತಿ ದೈವಸ್ಥಾನದ ವಠಾರದ ಗದ್ದೆಯಲ್ಲಿ ನಡೆಯಿತು.

ಇನಾಯತ್‌ ಅಲಿ ಅವರು ಮಾತನಾಡಿ, ನಾವು ಯಾವುದೇ ರೀತಿಯ ಭೇದ, ಭಾವ, ಜಾತಿ, ಧರ್ಮಗಳ ಸಂಕೋಲೆಗಳ ಮಧ್ಯೆ ಬಂಧಿಗಳಲ್ಲ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಕಾಂಗ್ರೆಸ್‌ ಕುಟುಂಬದ ಸದ್ಯಸರು ಎಂದರು.

ಕಲಾವಿದೆ ಕುತ್ತಾರು ತಮ್ಮಕ್ಕ ಅವರಿಂದ ಪಾರ್ದನ ಕಾರ್ಯಕ್ರಮ ನಡೆಯಿತು. ಪಡ್ರೆ  ಧೂಮಾವತಿ ದೈವಸ್ಥಾನದ ಬಾಬು ಪಡ್ರಿಯಾರ್‌ ಉದ್ಘಾಟಿಸಿದರು. ಕೆಸರು ಗದ್ದೆಯ ಕ್ರೀಡಾ ಕೂಟವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ ಉದ್ಘಾಟಿಸಿದರು.

  1.  

ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ, ಮಾಜಿ ಮೇಯರ್‌ ಕವಿತಾ ಸನಿಲ್‌ ಮಾತನಾಡಿದರು.  ಬಾಬು ಶೆಟ್ಟಿ, ಪ್ರತಾಪ್‌ ಚಂದ್ರ ಶೆಟ್ಟಿ, ಕಿಸಾನ್‌ ಘಟಕದ ರಾಜೇಶ್‌ ಪಡ್ರೆ, ಪ.ಪಂಗಡ ವಿಭಾಗದ ಅಧ್ಯಕ್ಷರಾದ ಮಲ್ಲಿಕಾರ್ಜುನ್‌, ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಶಿಕಲಾ ಪದ್ಮನಾಭ, ಅಸಂಘಟಿತ ವಲಯದ ಆನಂದ್‌ ಪಡ್ರೆ,

ಹಿಂದುಳಿದ ವರ್ಗಗಳ ಅಧ್ಯಕ್ಷ ಚಂದ್ರಹಾಸ್‌ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ರೆಹ್ಮಾನ್‌ ಖಾನ್‌ ಕುಂಜತ್ತಬೈಲ್‌ ಸ್ವಾಗತಿಸಿದರು. ಕಿಶೋರ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Under the leadership of KPCC General Secretary Inayat Ali on behalf of Mangalore North Vidhan Sabha Constituency Suratkal Block Congress Committee and Suratkal Block Kisan Unit, a friendly game and Gramin Autota competition was held at Padre Dhoomavathi Daivasthana near NITK.

Inayat Ali said, we are not captives in the shackles of any kind of difference, caste, caste and religion. He said that we all are the children of the same mother and are members of the Congress family.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com