Breaking News

ಸೀರೆ ನೇಕಾರಿಕೆ ದಿಗ್ಗಜ ಸಂಜೀವ ಶೆಟ್ಟಿಗಾರ್‌ ಗೆ ರಾಜ್ಯ ಮಟ್ಟದ 2ನೇ ಸ್ಥಾನ

 

ಉಡುಪಿ: ಸೀರೆ ನೇಕಾರರು ಆಗಿರುವ ಸಂಜೀವ ಶೆಟ್ಟಿಗಾರ್ ಅವರಿಗೆ ಹತ್ತಿ ಬಟ್ಟೆ ಸೀರೆ ನೇಯ್ಗೆಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾನ ಲಭಿಸಿದೆ.

ಅವರು ತಾಳಿಪಾಡಿ ನೇಕಾರರ ಸಂಘದ ಸದಸ್ಯ, ರಾಷ್ಟ್ರೀಯ ಕೈಮಗ್ಗ ದಿನಾಚರಣೆ ದಿನದಂದು ಸೋಮವಾರ ಅವರಿಗೆ ಬೆಂಗಳೂರಿನಲ್ಲಿ ಅವರು ರಾಜ್ಯ ಪ್ರಶಸ್ತಿ ಸ್ವೀಕರಿಸಿದರು. 74 ಇಳಿವಯಸ್ಸಿನ ಸಂಜೀವ ಶೆಟ್ಟಿಗಾರ್ ಈಗ ಇರುವ ಕೇವಲ ಹತರಿಚಯಿಸಿದ ಇಕತ್ ಸೀರೆಯನ್ನು ಯಾವುದೇ ಹಿಂಜರಿಕೆ ತೋರಿಸದೆ ಮೊದಲು ನೇಯ್ದವರು. ್ತು 80 ಕೌಂಟ್ ನೇಕಾರರಲ್ಲಿ ಒಬ್ಬರು. ನೇಯ್ಗೆಯಿಂದಲೇ ಚಂದದ ಬುಟ್ಟಾ ನೇಯುವಲ್ಲಿ ಪರಿಣಿತರು. 80 ಕೌಂಟ್ ಸಹಜ ಸೀರೆ ನೇಯ್ದ ಮೊದಲಿಗರು. ಕದಿಕೆ ಟ್ರಸ್ಟ್ ಇಪ್ಪತ್ತು ವರುಷದ ನಂತರ ಗೋಪಿನಾಥ್ ಶೆಟ್ಟಿಗಾರ್ ಅವರ ನೆರವಿನಲ್ಲಿ ಪರಿಚಯಿಸಿದ ಇಕತ್ ಸೀರೆಯನ್ನು ಯಾವುದೇ ಹಿಂಜರಿಕೆ ತೋರಿಸದೆ ಮೊದಲು ನೇಯ್ದವರು.

ನೇಕಾರಿಕೆ ಮತ್ತು ಅದರ ಪೂರ್ವ ತಯಾರಿಕೆ ಕೆಲಸದಲ್ಲಿ ಪರಿಣತಿ ಹೊಂದಿರುವ ಸಂಜೀವ ಶೆಟ್ಟಿಗಾರ್, ಎರಡು ಹಾಸುಗಳನ್ನು ಒಂದೇ ಕೈಯಿಂದ ಜೋಡಿಸುವ ಅಪರೂಪದ ಕೌಶಲತೆ ಹೊಂದಿದ್ದಾರೆ. ಅವರು ಸಂದು ಹಾಕುವ ಈ ಕೆಲಸ ನೋಡುವುದೇ ಕಣ್ಣಿಗೆ ಒಂದು ಹಬ್ಬ.

ಸಾಂಪ್ರದಾಯಿಕ ಮತ್ತು ಆಧುನಿಕ ಎರಡೂ ಶೈಲಿಯ ಸೀರೆಗಳನ್ನು ಬಣ್ಣಗಳನ್ನು ಸರಿಯಾಗಿ ಹೊಂದಿಸಿ ಬೇಡಿಕೆಗೆ ಸರಿಯಾಗಿ ಈ 74 ರ ವಯಸ್ಸಿನಲ್ಲೂ ನೇಯಬಲ್ಲ ಪ್ರಯೋಗಶೀಲ ಮನಸ್ಸು ಹೊಂದಿದ್ದಾರೆ. ಒಂದೇ ಹಾಸಿನಲ್ಲಿ ವಿವಿಧ ವಿನ್ಯಾಸದ ಸೀರೆ ನೇಯಬಲ್ಲರು.

  1.  

ಸದಾ ಹಸನ್ಮುಖರಾಗಿ ತಮ್ಮ ಕುಶಲತೆಯನ್ನು ಕಿರಿಯರಿಗೆ ಕಲಿಸುವ ಸಂಜೀವ ಶೆಟ್ಟಿಗಾರ್ ಎಲ್ಲರಿಗೂ ಅಚ್ಚುಮೆಚ್ಚು. ಕದಿಕೆ ಟ್ರಸ್ಟ್ ಆರಂಭಿಸಿದ ಉಡುಪಿ ಸೀರೆ ಉಳಿಸಿ ಅಭಿಯಾನದ ನಂತರ ತಾಳಿಪಾಡಿ ನೇಕಾರರ ಸಂಘವನ್ನು ಸೇರಿದ ಸಂಜೀವ ಶೆಟ್ಟಿಗಾರ್ ಅನೇಕ ವರ್ಷಗಳ ಕಾಲ ಉಡುಪಿ ನೇಕಾರರ ಸಂಘದಲ್ಲಿ ಸೇವೆ ಸಲ್ಲಿಸಿದ್ದರು. ಸಂಜೀವ ಶೆಟ್ಟಿಗಾರ್ ಅವರಿಗೆ ಅಭಿನಂದನೆಗಳು. ಅವರು ಇನ್ನೂ ಹಲವು ವರುಷಗಳ ಕಾಲ ಕಿರಿಯರನ್ನು ಪ್ರೋತ್ಸಾಹಿಸುತ್ತಾ ನೇಕಾರಿಕೆ ಕಾಯಕದಲ್ಲಿ ತೊಡಗಲಿ ಎಂದು ಕದಿಕೆ ಟ್ರಸ್ಟ್ ಹಾರೈಸಿದೆ.

Sanjiva Shettigar, a saree weaver, won the second prize at the state level in cotton saree weaving.

A member of Talipadi Weavers Association, he received the State Award in Bengaluru on Monday on National Handloom Day. 74-year-old Sanjiva Shettigar was the first to weave the now-introduced Ikat saree without any hesitation. One of the 80 count weavers. Expert in weaving Chandada Butta by weaving itself. First to weave 80 count natural sarees. Kadike Trust was the first to weave the ikat saree after twenty years with the help of Gopinath Shettigar.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com