Breaking News

ಸಂಶೋಧನೆ, ಬರವಣಿಗೆ ಪ್ರಕಟಣೆ ಕುರಿತು ಮೂರು ದಿನಗಳ ಕಾರ್ಯಾಗಾರ

 

ಮಂಗಳೂರು: ಇಂಟರ್ನಲ್ ಕ್ವಾಲಿಟಿ ಅಶ್ಯೂರೆನ್ಸ್ ಸೆಲ್, ಪಿಎಸಿಇ ಮಂಗಳೂರಿನ ಆಶ್ರಯದಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆ ಶ್ರೇಷ್ಠತೆ ಕೇಂದ್ರ ಸಂಶೋಧನೆ, ಬರವಣಿಗೆ ಮತ್ತು ಪ್ರತಿಷ್ಠಿತ ಜರ್ನಲ್‌ಗಳಲ್ಲಿ ಪ್ರಕಟಣೆ-ಯುರೆಕಾ ಕುರಿತು ಮೂರು ದಿನಗಳ ಕಾರ್ಯಾಗಾರ ಹಮ್ಮಿಕೊಂಡಿತ್ತು.

ಮಂಗಳೂರಿನ ಪಿಎಸಿಇ ಮಲ್ಟಿಪರ್ಪಸ್ ಸಭಾಂಗಣದಲ್ಲಿ ಕಾರ್ಯಾಗಾರದ ಉದ್ಘಾಟನೆ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಾಗಾರವು ಸಂಶೋಧನಾ ವಿದ್ವಾಂಸರು ಮತ್ತು ಶಿಕ್ಷಣ ತಜ್ಞರನ್ನು ಸಂಶೋಧನಾ ಬರವಣಿಗೆ, ಪ್ರಕಟಣೆ ಮತ್ತು ಪ್ರಸರಣಕ್ಕೆ ಸಂಬಂಧಿಸಿದ ಅಗತ್ಯ ಕೌಶಲ ಮತ್ತು ಜ್ಞಾನದ ಜತೆಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.

ಮುಖ್ಯ ಅತಿಥಿ  ಸೌದಿ ಅರೇಬಿಯಾದ ಡಾ. ಇಮಾಮ್ ಅಬ್ದುಲ್‌ ರೆಹಮಾನ್‌ ಬಿನ್ ಫೈಸಲ್ ವಿಶ್ವವಿದ್ಯಾಲಯದ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಎಂ.ಅಬ್ದುಲ್ ಮುಜೀಬ್‌ ಕಾರ್ಯಾಗಾರವನ್ನು ಉದ್ಘಾಟಿಸಿ ಪರಿಣಾಮಕಾರಿ ಸಂಶೋಧನಾ ಬರವಣಿಗೆ ಮಹತ್ವವನ್ನು ತಿಳಿಸಿದರು.

  1.  

ಜ್ಞಾನ ಮತ್ತು ಶೈಕ್ಷಣಿಕ ಉತ್ಕೃಷ್ಟತೆ, ತಮ್ಮ ಸಂಶೋಧನೆ ಕ್ಷೇತ್ರದಲ್ಲಿ ವಿಶ್ವಾಸಾರ್ಹತೆ ಮತ್ತು ಪ್ರಭಾವವನ್ನು ಖಚಿತಪಡಿಸಿಕೊಳ್ಳಲು ಉನ್ನತ-ಗುಣಮಟ್ಟದ ಸಂಶೋಧನಾ ಅಭ್ಯಾಸಗಳು ಮತ್ತು ನೈತಿಕ ಬರವಣಿಗೆ ಮಾನದಂಡಗಳನ್ನು ಅಳವಡಿಸಿಕೊಳ್ಳುವ ಅಗತ್ಯದ ಕುರಿತು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಗಂಗೋತ್ರಿ ಅಂತರ ರಾಷ್ಟ್ರೀಯ ಪೋಸ್ಟ್‌ಡಾಕ್ ಫೆಲೋ ಡಾ. ಅಜೀಜುದ್ದೀನ್ ಸುಲ್ತಾನಿ ಮಾತನಾಡಿ, ತಮ್ಮ ಸಂಶೋಧನಾ ಕಾರ್ಯದಲ್ಲಿ ಯಶಸ್ಸು ಸಾಧಿಸಲು ಉತ್ತಮ ಸಂಶೋಧಕರು ಬೆಳೆಸಿಕೊಳ್ಳಬೇಕಾದ ಗುಣಗಳು ಮತ್ತು ಉತ್ತಮ ಅಭ್ಯಾಸಗಳನ್ನು ತಿಳಿಸಿದರು.

ಶರ್ಫುದ್ದೀನ್ ಪಿ ಕೆ, ಎಜಿಎಂ (ಕ್ಯಾಂಪಸ್) ಪ್ರಾಂಶುಪಾಲ ಡಾ.ರಾಮಿಸ್ ಎಂ ಕೆ ಉಪಸ್ಥಿತರಿದ್ದರು.

ಸಿಎಸ್‌ಇ ವಿಭಾಗದ ಪ್ರಾಧ್ಯಾಪಕ ಪ್ರೊ. ಫಾತಿಮತ್ ರೈಹಾನ್ ಸ್ವಾಗತಿಸಿದರು. ಯುರೇಕಾದ ಸಂಚಾಲಕ ಡಾ.ಪ್ರಶಾಂತ್ ಪೈ ಎಂ, ಡಾ.ಮುಜೀಬ್‌  ಪರಿಚಯಿಸಿದರು. ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಪ್ರೊ. ಕಾವ್ಯಶ್ರೀ ವಂದಿಸಿದರು. ಸಿಎಂಎಸ್‌ಆರ್‌ ಅಧ್ಯಾಪಕ ಪ್ರೊ. ಶಾಮಾ ಎ. ಕಾರ್ಯಕ್ರಮ ನಿರೂಪಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com