Breaking News

ಮೈಚಳಿ ಬಿಟ್ಟು ಕೆಲಸ ಮಾಡಿ: ಅಧಿಕಾರಿಗಳಿಗೆ ಸಚಿವ ಮಂಕಾಳು ವೈದ್ಯ ತಾಕೀತು

 

ಕಾರವಾರ: ಅಧಿಕಾರಿಗಳ ಜಿಲ್ಲೆಯ ಅಭಿವೃದ್ಧಿಗೆ ಹಾಗೂ ಸರಕಾರಿ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಮೈಚಳಿ ಬಿಟ್ಟಿ ಕೆಲಸ ಮಾಡಬೇಕು. ಜನರ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಅಧಿಕಾರಿಗಳಿಗೆ  ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಖಡಕ್‌ ಎಚ್ಚರಕೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಆಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ‌ 10 ಮಕ್ಕಳಿಗಿಂತ ಕಡಿಮೆ‌ ಇರುವ ಶಾಲೆಗಳ ಪಟ್ಟಿ ಮಾಡಿ,‌ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪೋಷಕರ ಜತೆ ಚರ್ಚಿಸಿ ವರದಿ ಸಲ್ಲಿಸಬೇಕು. ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರುಗಳು ಬರುತ್ತಿದೆ. ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ಆಗಬೇಕು. ಆಸ್ಪತ್ರೆಗೆ ಬಂದ ರೋಗಿಗಳಿಗೆ ಬೇರೆ ಜಿಲ್ಲೆಯ ಆಸ್ಪತ್ರೆಗೆ ತೆರಳುವಂತೆ ಸೂಚಿಸವ ಚಾಳಿ ಬಿಟ್ಟು, ಇಲ್ಲೆಯೇ ಉತ್ತಮ ಚಿಕಿತ್ಸೆ ನೀಡುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ‌ ಮೂಲ ಸೌಕರ್ಯಗಳು ಕಡ್ಡಾಯವಾಗಿ ಇರಬೇಕು. ಇಲ್ಲದ ಶಾಲೆಗಳ ವಿವರಗಳನ್ನು‌ ಪಟ್ಟಿ‌ ಮಾಡಿ ವರದಿ ಮಾಡಿ. ಶಾಲಾ ಕಟ್ಟಡ ದುರಸ್ತಿ ‌ಮಾಡುವ ಬದಲು ಹೊಸ ಕಟ್ಟಡ ಕಟ್ಟಲು ಕ್ರಮಕೈಗೊಳ್ಳಬೇಕು.  ಹೊರತು ದುರಸ್ತಿ‌‌ ಮಾಡಿ ಅನುದಾನ ದುಂದುವೆಚ್ಚ ಮಾಡಬೇಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕ ಸತೀಶ್ ಸೈಲ್ ಅವರು ಮಾತನಾಡಿ ಜಿಲ್ಲೆಯಲ್ಲಿ ಈಗಾಗಲೇ ಮುಚ್ಚಿದ ಶಾಲೆಗಳ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ, ಅತಿಥಿ ಶಿಕ್ಷಕರಿಗೆ ನೀಡುವ ಗೌರವ‌ ಸಂಭಾವನೆಯಲ್ಲಿ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಕನಿಷ್ಠ ಗೌರವ ಸಂಭಾವನೆ ನೀಡುವ ಬಗ್ಗೆ‌ ಪರಿಶೀಲಿಸುವಂತೆ ಸಚಿವರಲ್ಲಿ‌ ಮನವಿ ಮಾಡಿದರು‌.

ಶಾಸಕ ಭೀಮಣ್ಣ ನಾಯ್ಕ ಅವರು ಮಾತನಾಡಿ,‌ ಸರ್ಕಾರಿ‌ ಆಸ್ಪತ್ರೆಗೆ  ಬರುವ ರೋಗಿಗಳು ಬಡವರಾಗಿದ್ದು, ಅವರಿಗೆ ಉತ್ತಮ ಚಿಕಿತ್ಸೆ ಸಿಗುವಂತಾಗಬೇಕು ಎಂದು ಹೇಳಿದರು.

  1.  

ಪ್ರತಿ ತಾಲ್ಲೂಕಿನಲ್ಲಿ‌ ಸರ್ವೆ ಮಾಡಿಸಿ‌ ಅರ್ಹರಿಗೆ ಸರ್ಕಾರದಿಂದ  ಸಿಗಬೇಕಾದ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ  ಸಚಿವರು ನಿರ್ದೇಶನ ನೀಡಿದರು.

ಶಾಸಕರಾದ ಅರಬೈಲ್ ಶಿವರಾಮ ಹೆಬ್ಬಾರ್ ಅವರು ಮಾತನಾಡಿ, ಅಂಗನವಾಡಿ  ಕಾರ್ಯಕರ್ತರು ಮತ್ತು ಸಿಬ್ಬಂದಿ  ನೇಮಾಕಾತಿ‌ ಸಂಬಂಧ ದಿನಾಂಕ ನಿಗದಿಪಡಿಸಬೇಕು ಹಾಗೂ ವಸತಿ ಶಾಲೆಗಳ ಪ್ರವೇಶಾತಿ ಆನ್ ಲೈನ್ ಮೂಲಕ ಮಾಡುತ್ತಿರುವುದರಿಂದ  ಮಕ್ಕಳಿಗೆ ಅನಾನುಕೂಲತೆಯಾಗುತ್ತಿದೆ ಇದರ ಬಗ್ಗೆ ಪರಿಶೀಲಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ಜಿಲ್ಲೆಯಲ್ಲಿ  2782 ಅಂಗನವಾಡಿ ಕೇಂದ್ರಗಳಿದ್ದು,  ಇದರಲ್ಲಿ ನಿವೇಶನವಿಲ್ಲದ 452,  ಬಾಡಿಗೆ 307 ಅಂಗನವಾಡಿ ಕೇಂದ್ರಗಳು‌ ಕಾರ್ಯನಿರ್ವಹಿಸುತ್ತಿವೆ ಎಂದು ಮಹಿಳಾ‌ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಕರು ಸಭೆಗೆ  ಮಾಹಿತಿ‌ ನೀಡಿದರು.

ಸಚಿವರಾದ ಮಂಕಾಳ ಎಸ್ ವೈದ್ಯ ಅವರು‌ ನಿವೇಶನವಿಲ್ಲದ ಅಂಗನವಾಡಿಗಳಿಗೆ  ಜಾಗ ಒದಗಿಸಬೇಕು. ಜಾಗ ಇಲ್ಲದ ಕಡೆ ಖಾಸಗಿ ಅವರಿಂದ‌ ಖರೀದಿಸಲು ಕ್ರಮಕೈಗೊಳ್ಳುವಂತೆ  ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ‌  ಅನ್ನಭಾಗ್ಯ ಯೋಜನೆ ಅಡಿ 3,10,789 ಪಡಿತರ ಚೀಟಿಗಳಲ್ಲಿ  ಪ್ರತಿ‌ ಕೆ.ಜಿ.ಗೆ ರೂ.34    ರಂತೆ 5 ಕೆ.ಜಿ. ಅಕ್ಕಿಯ ಮೊತ್ತವನ್ನು  2,37,444 ಪಡಿತರ  ಚೀಟಿದಾರರ ಖಾತೆ ಹಣ ಜಮಾ ಮಾಡಲಾಗಿದೆ ಎಂದು ಅಹಾರ ಮತ್ತು ನಾಗರಿಕ ಸರಬರಾಜು‌ ಇಲಾಖೆ  ಉಪ ನಿರ್ದೇಶಕ ಮಂಜುನಾಥ ರೇವಣಕರ್‌ ತಿಳಿಸಿದರು.

ಜಿಲ್ಲೆಯಲ್ಲಿ‌ ಪ್ರತಿಯೊಂದು ಮನೆಗೂ‌ ವಿದ್ಯುತ್ ಸಂಪರ್ಕ ಕಲ್ಪಸಲು ಪಿಡಿಓ ಅವರು ತಮ್ಮ ತಮ್ಮ ವ್ಯಾಪ್ತಿಯ ವಿದ್ಯುತ್ ಸಂಪರ್ಕ ಇಲ್ಲದ ಕುಟುಂಬದ  ಮಾಹಿತಿಯನ್ನು ಹೆಸ್ಕಾಂಗೆ ನೀಡಿ ಪ್ರತಿಯೊಬ್ಬರಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳಬೇಕು ಅವರು  ಹೇಳಿದರು.

ಶಾಸಕರಾದ ದಿನಕರ ಕೆ.ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೆಕರ್, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್. ಎನ್, ಜಿಲ್ಲಾ ಪಂಚಾಯತ್ ಸಿಇಒ ಈಶ್ವರ ಕುಮಾರ ಖಂಡೂ, ಹೆಚ್ಚುವರಿ‌ ಜಿಲ್ಲಾಧಿಕಾರಿ‌ ರಾಜು ಮೋಗವೀರ ಸೇರಿದಂತೆ ವಿವಿದ ಇಲಾಖೆ ಅಧಿಕಾರಿಗಳು ಇದ್ದರು.

Officers should work tirelessly for the development of the district and to deliver the guaranteed schemes announced by the government to the people and to respond to the people’s problems. District in-charge minister Mankala Vaidya Khadak warned the officials that neglecting people’s problems will not be tolerated for any reason.

He was speaking while presiding over the district level quarterly KDP meeting held at Karwar District Panchayat Hall on Friday.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com