Breaking News

ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಬೇಡ: ಪ್ರೊ. ಎಂ. ಬಿ. ಪುರಾಣಿಕ್‌

 

ಬೆಳ್ತಂಗಡಿ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮರುತನಿಖೆಯಾಗಬೇಕು. ಆದರೆ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ವಿ.ಎಚ್.ಪಿ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ ಪುರಾಣಿಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸೌಜನ್ಯ ಪ್ರಕರಣ ಇತ್ಯರ್ಥವಾಗದೇ  ಇರುವುದು ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗಿದೆ. ಹಾಲಿ ನ್ಯಾಯಧೀಶರ ಮೂಲಕ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಆಗ್ರಹಿಸಲಾಗುತ್ತದೆ. ಪ್ರಕರಣದ ಮರು ತನಿಖೆಯಾಗಬೇಕು. ಯಾವ ರೀತಿ ತನಿಖೆಯಾಗಬೇಕು ಎಂಬುವುದು ವ್ಯವಸ್ಥೆಗೆ ಬಿಟ್ಟಿದ್ದು. ಮತ್ತೊಮ್ಮೆ ಮರು ತನಿಖೆಗೆ ಆಗ್ರಹಿಸುತ್ತೇವೆ ಎಂದು ತಿಳಿಸಿದರು.

ಪ್ರಕರಣದ ನಿಜವಾದ ಆರೋಪಿ ಯಾರೆಂದು ಗೊತ್ತಾಗಬೇಕು. ಆರೋಪಿಗಳಿಗೆ ಶಿಕ್ಷೆಯಾಗುವತನಕ ಈ ಪ್ರಕರಣ ಅಂತ್ಯವಾಗೋದಿಲ್ಲ. ಎಲ್ಲ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಿದ್ದೇವೆ. ನಮ್ಮ ಕಾರ್ಯಕರ್ತರ ಮೂಲಕ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲೂ ಪ್ರಾರ್ಥನೆ ಮಾಡಲಿದ್ದೇವೆ. ಸೌಜನ್ಯಳಿಗೆ ನ್ಯಾಯ ಸಿಗಲೆಂದು ಎಲ್ಲಾ ಊರಿನ ದೇವಸ್ಥಾನ, ದೈವಸ್ಥಾನಗಳಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದು ಹೇಳಿದರು.

  1.  

ಧರ್ಮಸ್ಥಳ ಕ್ಷೇತ್ರ ಇವತ್ತು ನಿನ್ನೆಯದಲ್ಲ. ಈ ಕ್ಷೇತ್ರಕ್ಕೆ ಅದರದ್ದೇ ಆದ ಹಿನ್ನೆಲೆ, ಇತಿಹಾಸವಿದೆ. ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಜನರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಸಾಮಾಜಿಕ, ಶೈಕ್ಷಣಿಕವಾಗಿ ಬೇರೆ-ಬೇರೆ ಕ್ಷೇತ್ರದಲ್ಲಿ ಅನನ್ಯ ಕೊಡುಗೆ ನೀಡಿದ ಕ್ಷೇತ್ರ ಇದು. ಈ ರಾಷ್ಟ್ರದ ಮಾನ ಸಮ್ಮಾನ ಸನಾತನ ಧರ್ಮದ ರಕ್ಷಣೆಯನ್ನ ನಮ್ಮ ಸಂಘಟನೆ ಮಾಡಿಕೊಂಡು ಬಂದಿದೆ. ಯಾವುದೇ ಕ್ಷೇತ್ರಕ್ಕೆ, ಧರ್ಮಕ್ಕೆ ಅಪಚಾರ ಆದಾಗ ವಿಶ್ವ ಹಿಂದೂ ಪರಿಷತ್ ನಿಂತು ವಿರೋಧವನ್ನ ಸೂಚಿಸಿದೆ ಎಂದರು.

ಧರ್ಮಸ್ಥಳ ಪುಣ್ಯ ಕ್ಷೇತ್ರಕ್ಕೆ ಅಪಚಾರ ಅವಮಾನವಾಗುವುದನ್ನ ನಾವೂ ಸಹಿಸಲ್ಲ. ಕ್ಷೇತ್ರಕ್ಕೆ ಮುತ್ತಿಗೆ ಹಾಕುವುದು, ಪ್ರತಿಭಟನೆ ಮಾಡೋದನ್ನು ವಿಎಚ್‌ ಪಿ ಸಹಿಸೋದಿಲ್ಲ. ಸೌಜನ್ಯ ಪ್ರಕರಣ ಹಾಗೂ ಕ್ಷೇತ್ರಕ್ಕೂ ತಾಳೆ ಹಾಕುವುದನ್ನ ನಾವೂ ಸಹಿಸಲ್ಲ. ಕ್ಷೇತ್ರದ ಗೌರವವನ್ನ ಪ್ರತಿಷ್ಠೆಯನ್ನು ಯಾವ ಬೆಲೆ ಕೊಟ್ಟಾದರೂ ವಿಶ್ವ ಹಿಂದೂ ಪರಿಷತ್ ಕಾಪಾಡುತ್ತದೆ. ಅನ್ಯಾಯ ಆಗಿದೆ, ಅಪರಾಧಿಯನ್ನ ಪತ್ತೆ ಹಚ್ಚಿ ಶಿಕ್ಷೆ ನೀಡಬೇಕು. ನಾವೂ ಪೂರ್ವಗ್ರಹ ಪೀಡಿತವಾಗಿ ಯಾರನ್ನು ಆರೋಪಿಸುವುದಿಲ್ಲ ಎಂದು ತಿಳಿಸಿದರು.

Courtesy rape and murder case should be reinvestigated. However, VHP Provincial Working President MB Puranik said in a press conference held at Belthangadi that it is not right to spread slander about Dharmasthala constituency.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com