Breaking News

ಕಾರವಾರ: ಆಯಾಕಟ್ಟಿನ ಜಲಪಾತಗಳಿಗೆ ಪೊಲೀಸ್‌ ಕಾವಲಿನ ಬೀಗ

 

ಕಾರವಾರ: ಎರಡು ದಿನಗಳ ರಜಾ ದಿನಗಳ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ವಿವಿಧ ಜಲಪಾತ ವೀಕ್ಷಣೆಗೆ ಹಾಗೂ ನದಿ ಪಕ್ಕದ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬಾರದಂತೆ ತಡೆಯಲು ಆಯಾಕಟ್ಟಿನ ಸ್ಥಳಗಳಲ್ಲಿ ಭಾನುವಾರ ಪೊಲೀಸರನ್ನು ಕಾವಲಿಗೆ ನೀಯೋಜನೆ ಮಾಡಲಾಗಿತ್ತು.

ಶಿರವಾಡ ಬಳಿಯ ಜಾಂಗಾ ಜಲಪಾತ, ದೇವಳಮಕ್ಕಿ ಸಮೀಪದ ನಗೆಕೋವೆ, ಗೋಟೆಗಾಳಿ, ಅಣಶಿ ಜಲಪಾತ, ತೊಡೂರು ಸಮೀಪದ ಗೊಲ್ಲಾರಿ ಜಲಪಾತ, ನಾಗರಮಡಿ ಜಲಪಾತ  ಸೇರಿದಂತೆ ವಿವಿಧ ಕಡೆಗಳಲ್ಲಿ ಬಿಗಿ ಕಾವಲು ಹಾಕಲಾಗಿತ್ತು. ಅಪಾಯಕಾರಿ ನಿಷೇಧಿತ ಸ್ಥಳಗಳಲ್ಲಿ ಸೆಲ್ಫಿ ತೆಗೆಯುವುದು, ಭಾವಚಿತ್ರ ಸೆರೆ ಹಿಡಿಯುವುದನ್ನು ನಿಷೇಧಿಸಿ ಈಗಾಗಲೇ ಜಿಲ್ಲಾಡಳಿತವು ಆದೇಶ ಕೂಡ ಹೊರಡಿಸಿದೆ. ಇದರ ಜತೆಗೆ ಪೊಲೀಸ್ ಸಿಬ್ಬಂದಿ ಕೂಡ ನಿಯೋಜನೆ ಮಾಡಿ ಬಿಗಿ ಕ್ರಮ ತೆಗೆದುಕೊಂಡಿದೆ.

  1.  

ಮಳೆ ಕೂಡ ಬಿಡುವು ನೀಡಿದ್ದು, ವಾರಾಂತ್ಯ ಆಗಿದ್ದರಿಂದ ಜನರು ಪ್ರವಾಸಿ ಸ್ಥಳಗಳಿಗೆ ಬಂದು ವಾಪಸ್‌ ಆಗಿರುವ ಘಟನೆಗಳು ಕೂಡ ನಡೆದವು. ಜನರ ಸುರಕ್ಷತೆ ದೃಷ್ಟಿಯಿಂದ ಇಂತಹ ಕ್ರಮಕ್ಕೆ ಜಿಲ್ಲಾಡಳಿತ ಬಿಗಿ ಕ್ರಮ ತೆಗೆದುಕೊಂಡಿದೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಜಲಪಾತ ನೋಡಲು ಬಂದವರು ಹುಚ್ಚಾಟಿಕೆಯಿಂದಾಗಿ ಜೀವಕ್ಕೆ ಅಪಾಯ ತಂದುಕೊಂಡಿರುವ ಘಟನೆಗಳಿಂದ ಇಂತಹ ಭದ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

In the backdrop of two days of holidays, police were deployed at various places on Sunday to prevent tourists from visiting various waterfalls and riverside tourist spots in Karwar taluk of Uttara Kannada district.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com