Breaking News

ಕುಮಟಾ, ಹೊನ್ನಾವರದಲ್ಲಿ ಡಿಸಿ ಗಂಗೂಬಾಯಿ ರೌಂಡ್ಸ್: ಜನರ ಸಮಸ್ಯೆಗಳಿಗೆ ಧ್ವನಿ

 

ಕಾರವಾರ: ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಸರ್ಕಾರದಿಂದ ಕೈಕೊಂಡ ರಸ್ತೆ, ಕುಡಿವ ನೀರು, ಸೇತುವೆ ಮುಂತಾದ ಕಾಮಗರಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಗಂಗೂ ಬಾಯಿ ಮಾನ್ಕರ್‌ ಅವರು ಶನಿವಾರ ಪರಿಶೀಲಿಸಿದರು.

ತಾಲೂಕಿನ ಮಿರ್ಜಾನ್ ನಲ್ಲಿ ಗ್ರಾಮ ಒನ್ ಕೇಂದ್ರ ಕ್ಕೆ ಭೇಟಿ ನೀಡಿ,  ಅಲ್ಲಿನ ಸಿಬ್ಬಂದಿ ಕಾರ್ಯನಿರ್ವಹಣೆ ಕುರಿತು  ಪರಿಶೀಲಿಸಿದರು.

ಗ್ರಾಮ ಒನ್ ಕೇಂದ್ರ ಕ್ಕೆ ಬಂದದ್ದ ಫಲನುಭವಿಗಳೊಂದಿಗೆ ಗ್ರಾಮ ಒನ್ ಸಿಬ್ಬಂದಿ ಕಾರ್ಯವೈಖರಿಯ ಬಗ್ಗೆ ಚರ್ಚಿಸಿದ ಅವರು, ಸರ್ಕಾರದ ಯೋಜನೆಗಳನ್ನು  ಸದುಪಯೋಗ ಪಡಿಸಿಕೊಳ್ಳುವಂತೆ ಫಲನುಭವಿಗಳಿಗೆ ತಿಳಿಸಿದರು.

ಬಿಸಿಎಂ ವಿದ್ಯಾರ್ಥಿ ನಿಲಯಗಳಿಗೆ ತೆರಳಿ  ವಿದ್ಯಾರ್ಥಿ ನಿಲಯಗಳಲ್ಲಿ  ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಲಭ್ಯ ನೀಡಲಾಗಿದೆಯೇ ಎಂಬುವುದ ಕುರಿತು ಪರಿಶೀಲಿಸಿದರು  ಬಳಿಕ  ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ  ವಿದ್ಯಾರ್ಥಿ ನಿಲಯಗಳಲ್ಲಿ  ನೀಡಲಾಗುತ್ತಿರುವ ಅಗತ್ಯ ಸೌಲಭ್ಯಗಳು  ಗುಣಮಟ್ಟ ಇರುವುದರ ಬಗ್ಗೆ ಖಚಿತ ಪಡಿಸಿಕೊಂಡರು.

ವಿದ್ಯಾರ್ಥಿಗಳಿಗೆ ನೀಡಲಾಗುವುದು ಆಹಾರದ ಕುರಿತು ಚರ್ಚಿಸಿ  ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳಿಗೆ ಸಾಕಾಗುವಷ್ಟು ಆಹಾರದ ಪೂರೈಕೆ ಆಗುತ್ತಿದ್ದೆಯೇ ಎಂಬುದರ ಕುರಿತು ಮಾಹಿತಿ ಪಡೆದರು. ವಿದ್ಯಾರ್ಥಿ ನಿಲಯಗಳಲ್ಲಿ ಸಮಸ್ಯೆಗಳು ಇದ್ದಲ್ಲಿ ನೆರೆವಾಗಿ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

  1.  

ಹೊನ್ನಾವರ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಾದ ಬಸಕೆರೆ ಹಾಗೂ ಗೌಂಡಬಳೆ ಬೇಟಿ ನೀಡಿ ಪ್ರವಾಹ ಸಂತ್ರಸ್ತರ ಜತೆಗೆ ಚರ್ಚಿಸಿ, ಪ್ರವಾಹದಿಂದ ಆಗಿರುವ ಹಾನಿಗೆ ಸರ್ಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದರು.  ಯಾವುದೇ ಕಾರಣಕ್ಕೂ  ಪ್ರವಾಹ ಪೀಡಿತಕ್ಕೆ ಒಳಗಾಗಿರುವ ಪ್ರದೇಶದ ಜನರು ಭಯ ಪಡುವ ಅಗತ್ಯವಿಲ್ಲ ಜಿಲ್ಲಾಡಳಿತ ಸದಾ ನಿಮ್ಮ ಜೊತೆಗಿದ್ದು ಸಂಬಂಧ ಪಟ್ಟ ಸಿಬ್ಬಂದಿ ದಿನದ 24 ಗಂಟೆ ಕೆಲಸ ನಿರ್ವಹಿಸಲು ಈಗಾಗಲೇ ಕ್ರಮ ವಹಿಸಲಾಗಿದೆ. ಯಾವುದೇ ತೊಂದರೆಗಳಾಗದಂತೆ ಕ್ರಮ ವಹಿಸಲಾಗುವುದು ಎಂದರು.

ಹೊನ್ನಾವರ ತಾಲೂಕಿನ ಅಪ್ಸರಕೊಂಡ್ ಹಾಗೂ ಕಸರಕೋಡ ಭೂ ಕುಸಿತ ಸಾಧ್ಯತೆ ಇರುವ ಪ್ರದೇಶಗಳಿಗೆ ಅಧಿಕಾರಿ ತಂಡಗಳ ಜತೆಗೆ ಭೇಟಿ ನೀಡಿ, ಅಗತ್ಯ ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಳೆಗಾಲ ಇನ್ನೂ ಇದ್ದು ಯಾವುದೇ ಸಮಯದಲ್ಲು ಸಮಸ್ಯೆಗಳಾಗಬಹುದು. ಈಗಲೇ ಎಚ್ಚತ್ತುಕೊಂಡರೆ ಮುಂದೆ ಆಗಬಹುದಾದ ದುರಂತಗಳನ್ನು  ತಡೆಗಟ್ಟಲ್ಲು  ಸಾಧ್ಯವಾಗುತ್ತದೆ. ಸಂಬಂಧ ಪಟ್ಟ ತಂಡವು ವಾಸ್ತವ್ಯ ಇದ್ದು ಸಮರ್ಪಕವಾಗಿ  ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com