Breaking News

ಉಕ್ಕಿ ಹರಿದ ಕಾನೇರಿ ನದಿ: ಹೃದಯಾಘಾತದ ವ್ಯಕ್ತಿ ಸಾಗಣೆಗೆ ಪರದಾಟ

 

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಕ ಮಳೆ ಸುರಿಯುತ್ತಿರುವ ಪರಿಣಾಮ ನದಿಗಳು ಉಕ್ಕಿ ಹರಿಯುತ್ತಿದ್ದು, ಇದರಲ್ಲಿ ಕಾನೇರಿ ನದಿ ಕೂಡ ಸೇರಿದೆ. ಪ್ರವಾಹದ ಪರಿಣಾಮ ಜೊಯಿಡಾ ತಾಲ್ಲೂಕಿನ ಕೆಲೋಲಿ ಗ್ರಾಮದಲ್ಲಿ ಹೃದಯಾಘಾತಕ್ಕೆ ಸಂಭವಿಸಿದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಆಗದೇ ಗ್ರಾಮದ ಜನರು ಪರದಾಡಿ ಘಟನೆ ಗುರುವಾರ ನಡೆಯಿತು.

  1.  

ಕೆಲೋಲಿ ಗ್ರಾಮ ಕಾಳಿ ನದಿ ಉಪನದಿ ಆಗಿರುವ ಕಾನೇರಿ ಉಕ್ಕಿ ಹರಿಯುತ್ತಿರುವುದರಿಂದ ಇಲ್ಲಿನ ಜನರು ಹಲವು ದಿನಗಳಿಂದ ಸಂಪರ್ಕವನ್ನು ಕಡೆದುಕೊಂಡು ಒದ್ದಾಡುವ ಸ್ಥಿತಿ ನಿರ್ಮಾಣ ಆಗಿದೆ.

ಕೆಲೋಲಿ ಗ್ರಾಮದ ಮಾಬಳು ನಾರಾಯಣ ಗಾವಡಾ (46) ಎಂಬುವವರಿಗೆ ಹೃದಯಾಘಾತ ಸಂಭವಿಸಿದ್ದು, ಗ್ರಾಮವನ್ನು  ಸಂಪರ್ಕ ಮಾಡುವ ರಸ್ತೆಯೂ ಸಂಪೂರ್ಣವಾಗಿ ನದಿ ಪ್ರವಾಹದಿಂದ ಮುಳುಗಡೆ ಆಗಿರುವುದರಿಂದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಆಗದೇ ಜನರು ಪರದಾಡಿದರು. ಜೀವ ಉಳಿಸುವ ಉದ್ದೇಶದಿಂದ ವಾಟರ್ ರ್‍ಯಾಫ್ಟಿಂಗ್ ಬೋಟ್ ತಂದು ಅದರಲ್ಲಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯನ್ನು ದಾಟಿಸುವ ಸಾಹಸ ಮಾಡಲಾಯಿತು. ನಂತರ ಜೊಯಿಡಾದ ಆಸ್ಪತ್ರೆಗೆ ದಾಖಲಿಸಲಾಯಿತು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com