Breaking News

ಮಂಗಳೂರಿನ ಇಸಿಐಪಿಎಚ್ ಗೆ ಕೇಂದ್ರ ಸರಕಾರದ ಅಧೀನ ಕಾರ್ಯದರ್ಶಿಗಳ ಭೇಟಿ, ಸಂವಾದ

 

ಮಂಗಳೂರು: ಇಲ್ಲಿನ ಯುನೆಸ್ಕೋ ವಿಶೇಷ ಸಮಾಲೋಚನಾ ಸಿಎಚ್ ಡಿ ಗ್ರೂಪ್‌ ಘಟಕ ಎಡ್ವರ್ಡ್ ಮತ್ತು ಸಿಂಥಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (ಇಸಿಐಪಿಎಚ್) ಗೆ ಕೇಂದ್ರ ಸಚಿವಾಲಯದ ಸರ್ಕಾರದ ಅಧೀನ ಕಾರ್ಯದರ್ಶಿಗಳು ಭೇಟಿ ನೀಡಿದರು.

ಶಿಕ್ಷಣ, ಆರೋಗ್ಯ, ಹಣಕಾಸು, ರಕ್ಷಣಾ, ಗ್ರಾಮೀಣಾಭಿವೃದ್ಧಿ, ಡಿಒಪಿಟಿ, ಕ್ಯಾಬಿನೆಟ್ ಸೆಕ್ರೆಟರಿಯೇಟ್, ಸ್ಟೀಲ್, ಸಿಬಿಐ, ಪಶುಸಂಗೋಪನೆ, ಕೃಷಿ, ಪರಿಸರ ಮತ್ತು ಭೂ ವಿಜ್ಞಾನ, ರಿಜಿಸ್ಟ್ರಾರ್ ಜನರಲ್, ಪ್ರವಾಸೋದ್ಯಮ, ಕಾರ್ಪೊರೇಟ್ ವ್ಯವಹಾರಗಳು, ವಸತಿ, ಮಾಹಿತಿ ಮತ್ತು ಪ್ರಸಾರಕ್ಕಾಗಿ ಸಿಎಚ್‌ಡಿ ಗ್ರೂಪ್‌ನ ಇವರ ಪ್ರಯತ್ನವು ದೇಶಾದಾದಯಂತ ಜೀವನದ ಮೇಲೆ ಹೇಗೆ ಪ್ರಭಾವ ಮತ್ತು ಪರಿಣಾಮ ಬೀರುತ್ತಿದೆ ಎಂಬುದನ್ನು ಅರ್ಥ ಮಾಡಿ ಸಮಗ್ರ ಸಂವಾದಕ್ಕಾಗಿ ವಿವಿಧ ಸಚಿವಾಲಯಗಳ 36 ಅಧೀನ ಕಾರ್ಯದರ್ಶಿಗಳು ಆಗಮಿಸಿದ್ದರು.

ಎಡ್ವರ್ಡ್ ಮತ್ತು ಸಿಂಥಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನಿರ್ದೇಶಕ ಡಾ. ಎಡ್ಮಂಡ್ ಫರ್ನಾಂಡಿಸ್ ಅವರು ಸಂಸ್ಥೆಯು ನಿರ್ವಹಿಸಿದ ಕೆಲಸವನ್ನು ಪರಿಚಯಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀತಿ ಸುಧಾರಣೆಗಳಿಗೆ ಸಿಎಚ್‌ಡಿ ಗ್ರೂಪ್ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ವಿವರಿಸಿದರು.

  1.  

ಕೇಂದ್ರ ಸರ್ಕಾರವು ವಿವರಿಸಿರುವ ಹಂಚಿಕೆ ಗುರಿಗಳು ಮತ್ತು ದೃಷ್ಟಿಕೋನಗಳನ್ನು ಸಾಧಿಸುವಲ್ಲಿ ಸಚಿವಾಲಯಗಳ ಏಕೀಕರಣದ ಜತೆಗೆ ಅಪಾಯದ ಮಾಹಿತಿಯ ಯೋಜನೆಯನ್ನು ರಚಿಸುವ ಅಗತ್ಯವಿರುವ ವಿವಿಧ ವಿಧಾನಗಳನ್ನು ಡಾ ಎಡ್ಮಂಡ್ ಸೂಚಿಸಿದರು.

ಉಪ ಕಾರ್ಯದರ್ಶಿಗಳ ಸಭೆಯಲ್ಲಿ ಸಿಎಚ್‌ಡಿ ಗ್ರೂಪ್‌ನ ಕೆಲಸದ ಆರ್ಥಿಕ ಮತ್ತು ಸಾಮಾಜಿಕ ಪ್ರಭಾವದ ಕುರಿತು ವಿವರಣೆ ನೀಡಲಾಯಿತು. ಸಿಎಚ್‌ಡಿ ಗ್ರೂಪ್‌ನ ಅಖಿಲ ಭಾರತದಲ್ಲಿ ನಡೆಯುವ  ಕಾರ್ಯಗಳು 2.9 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮಾದರಿಗಳನ್ನು ಯಾವ ರೀತಿಯಲ್ಲಿ ಸದುಪಯೋಗ ಮಾಡಿಕೊಳ್ಳಬಹುದು ಮತ್ತು ಸರ್ಕಾರಿ-ಅಭಿವೃದ್ಧಿ ವಲಯದ ಸಹಭಾಗಿತ್ವವನ್ನು ಹೇಗೆ ಮತ್ತಷ್ಟು ಬಲಪಡಿಸಬಹುದು ಎಂಬುದರ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸಿಎಚ್‌ಡಿ ಗ್ರೂಪ್ ನ  ಕಾರ್ಯನಿರ್ವಹಣಾ ಮುಖ್ಯಸ್ಥ ನಿಶಾಂತ್ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com