Breaking News

ಹೀಗಿದೆ ನಿಮ್ಮ ಮಂಗಳವಾರದ ರಾಶಿಫಲ

 

ಧನು ರಾಶಿಯವರಿಗೆ ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಕಿರಿಕಿರಿ ಉಂಟಾಗಲಿದೆ, ಕುಂಭ ರಾಶಿಯವರು ವೈವಾಹಿಕ ಜೀವನದಲ್ಲಿ ಹಲವು ಕಷ್ಟಗಳನ್ನು ಎದುರಿಸಲಿದ್ದೀರಿ.

ಧನು : ಕಚೇರಿಯಲ್ಲಿ ಮೇಲಧಿಕಾರಿಗಳಿಂದ ನಿಮಗೆ ಕಿರಿಕಿರಿ ಇರಲಿದೆ. ಸಂಗಾತಿ ಮೇಲೆ ಸುಮ್ಮನೇ ಅನುಮಾನ ಪಡಲಿದ್ದೀರಿ.

ಮಕರ : ಇಂದು ನೀವು ಸಂಬಂಧಿಗಳ ಕೆಲವು ವರ್ತನೆಗೆ ನೇರ ಉತ್ತರ ನೀಡಲಿದ್ದೀರಿ. ಇದರಿಂದ ನೀವು ಹಲವರ ಕೆಂಗಣ್ಣಿಗೆ ಗುರಿ ಆಗುವ ಸಾಧ್ಯತೆ ಇದೆ.

ಕುಂಭ: ವೈವಾಹಿಕ ಜೀವನದಲ್ಲಿ ಹಲವು ಕಷ್ಟಗಳನ್ನು ಎದುರಿಸಲಿದ್ದೀರಿ. ಹಿರಿಯರ ಮಾತುಗಳನ್ನು ಕೇಳಿ ಮುನ್ನಡೆದರೆ ನಿಮಗೆ ಸೋಲು ಸಿಗಲಿದೆ.

ಮೀನ: ವಿದ್ಯಾರ್ಥಿಗಳು ಎಲ್ಲಿಯೂ ವಿಚಲಿತರಾಗದೇ ಅಂದುಕೊಂಡ ಗುರಿಯನ್ನು ಸಾಧಿಸುವತ್ತ ಗಮನ ನೆಡಲಿದ್ದಾರೆ.

ಸಿಂಹ : ಎಲ್ಲಾ ವಿಚಾರಗಳನ್ನು ನಿಮ್ಮ ಸಂಗಾತಿಯ ಜೊತೆ ಹಂಚಿಕೊಳ್ಳಿ. ನೀವೇ ಮನಸ್ಸಿಲ್ಲಿಟ್ಟುಕೊಂಡು ಕೊರೆಯಬೇಡಿ.

  1.  

ಕನ್ಯಾ : ಸಂಗಾತಿಗೆ ನೀವಿಂದು ಉಡುಗೊರೆಗಳನ್ನು ನೀಡುವ ಬಗ್ಗೆ ಯೋಚಿಸಲಿದ್ದೀರಿ. ಅತ್ತೆಯೊಂದಿಗಿನ ನಿಮ್ಮ ಸಂಬಂಧ ಸುಧಾರಿಸಲಿದೆ.

ಮೇಷ: ನೀವು ಅತಿಯಾಗಿ ಪ್ರೀತಿಸುತ್ತಿರುವ ವ್ಯಕ್ತಿಗೆ ನಿಮ್ಮ ಭಾವನೆಯನ್ನು ಹೇಳಿಕೊಳ್ಳುವಲ್ಲಿ ಮತ್ತೆ ವಿಫಲರಾಗಲಿದ್ದೀರಿ .

ವೃಷಭ : ನಿಮಗೆ ಬುದ್ಧಿ ಹೇಳುತ್ತಿರುವವರೆಲ್ಲ ನಿಮ್ಮ ಒಳ್ಳೆಯದಕ್ಕೆ ಅದನ್ನು ಹೇಳುತ್ತಿದ್ದಾರೆ ಎಂಬ ತಪ್ಪು ಕಲ್ಪನೆ ಬೇಡ.

ಮಿಥುನ : ಕೆಲವೊಂದು ಸಂಬಂಧವನ್ನು ಸರಿಮಾಡಲು ನಿಮ್ಮಿಂದ ಸಾಧ್ಯವಿಲ್ಲ ಎಂದಮೇಲೆ ಕನಿಷ್ಠ ಅದನ್ನು ಹಾಳು ಮಾಡುವ ನೀಚ ಕೆಲಸಕ್ಕೆ ಕೈ ಹಾಕಬೇಡಿ.

ಕಟಕ : ನಿಮ್ಮದೇ ತಪ್ಪಿನಿಂದ ವೈವಾಹಿಕ ಜೀವನಕ್ಕೆ ನೆಮ್ಮದಿ ಇಲ್ಲದಂತೆ ಮಾಡಿಕೊಳ್ಳುವಿರಿ. ಅತ್ಯಾಪ್ತರ ನಡವಳಿಕೆಯೇ ಮನಸ್ಸಿಗೆ ನೋವು ತರಲಿದೆ.

ತುಲಾ : ಹೊರಗಿನ ಆಹಾರ ಸೇವೆನೆಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ ಎಚ್ಚರದಿಂದ ಇರುವುದು ಒಳಿತು.

ವೃಶ್ಚಿಕ : ಮಕ್ಕಳ ಏಕಾಂಗಿತನವನ್ನು ಹೋಗಲಾಡಿಸಲು ಅವರೊಂದಿಗೆ ಹೆಚ್ಚೆಚ್ಚು ಸಮಯ ಕಳೆಯಲಿದ್ದೀರಿ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com