Breaking News

ಅಂಕೋಲಾದಲ್ಲಿ ಭಾರಿ ಮಳೆಗೆ ಕುಸಿದು ಬಿದ್ದ ಉದ್ಯಾನದ ಕಾಂಪೌಂಡ್‌ ಗೋಡೆ

 

ಕಾರವಾರ (ಅಂಕೋಲಾ):  ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಸುರಿಯುತ್ತಿದ್ದು, ಮಳೆಯ ಅಬ್ಬರಕ್ಕೆ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಭವನದ ಆವರಣದಲ್ಲಿರುವ ರೋಟರಿ ಮಕ್ಕಳ ಉದ್ಯಾನದ ಕಾಂಪೌಂಡ್‌ ಗೋಡೆ ಕುಸಿದು ಬಿದ್ದಿದೆ.

  1.  

ಕುಮಟಾ ರಸ್ತೆಗೆ ಹೊಂದಿಕೊಂಡು ಇರುವ ಮಕ್ಕಳ ಉದ್ಯಾನ ಕಾಂಪೌಂಡ್ ರಾತ್ರಿ ಕುಸಿದು ಬಿದ್ದ ಪರಿಣಾಮ ಕಲ್ಲುಗಳು ರಸ್ತೆಯ ಅಕ್ಕಪಕ್ಕದಲ್ಲಿ ಬಿದ್ದಿವೆ.

ಜನ ಸಂಚಾರ ಇರುವ ಸಮಯದಲ್ಲಿ ಕುಸಿತ ಉಂಟಾಗಿದ್ದರೆ, ರಸ್ತೆ ಬದಿಯಲ್ಲಿ ಸಂಚರಿಸುವವರು ಅಪಾಯಕ್ಕೆ ಸಿಕ್ಕು ಹಾಕಿಕೊಳ್ಳುವ ಸಾಧ್ಯತೆ ಇತ್ತು. ರಾತ್ರಿ ವೇಳೆ ಅವಘಡ ನಡೆದಿರುವುದರಿಂದ ಅಪಾಯ ತಪ್ಪಿದೆ. ಆವರಣ ಗೋಡೆಗೆ ಹೊಂದಿಕೊಂಡಂತೆ ಉಯ್ಯಾಲೆ, ಜಾರುಬಂಡಿ ಮೊದಲಾದ ಮಕ್ಕಳ ಆಟಿಕೆ ಸಾಮಗ್ರಿಗಳಿದ್ದು ಅಡಿಯಲ್ಲಿನ ಮಣ್ಣು ಕುಸಿದರೆ ಉರುಳಿ ಬೀಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com