Breaking News

ಮಕ್ಕಳ ವೆಂಟಿಲೇಟರ್ ಅಂಬುಲೆನ್ಸ್ ಸಿಗದೇ ಮಗು ಸಾವು: ಕ್ರಿಮ್ಸ್‌ ವಿರುದ್ಧ ಆಕ್ರೋಶ

 

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ನ್ಯುಮೋನಿಯಾದಿಂದ ಬಳಲುತ್ತಿದ್ದ ಕಿನ್ನರ ಮೂಲದ ರಾಜೇಶ್‌ ನಾಗೇಕರ್ ಎಂಬುವವರ 3 ತಿಂಗಳ ರಾಜನ್‌ ಎಂಬ ಮಗು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

ಸರಿಯಾದ‌ ಸಮಯಕ್ಕೆ ಪೀಡಿಯಾಟ್ರಿಕ್ ವೆಂಟಿಲೇಟರ್ ಅಂಬುಲೆನ್ಸ್ ಸರಿಯಾದ ಸಮಯಕ್ಕೆ ಸಿಗದೇ ಇರುವುದಿಂದ ಮೃತಪಟ್ಟಿದೆ ಎಂದು ಮೃತ ಮಗುವಿನ ಪೋಷಕರು ಹಾಗೂ ಸಂಬಂಧಿಕರು ಮಗುವಿನ ಶವದ ಜತೆಗೆ ಕ್ರಿಮ್ಸ್‌ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಕ್ರಿಮ್ಸ್‌ ಮಕ್ಕಳ ವಿಭಾಗದಲ್ಲಿ ಸರಿಯಾದ ಸೌಲಭ್ಯ ಇಲ್ಲ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ ಎಂದು ಕುಟುಂಬಸ್ಥರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜೇಶ್‌ ಅವರ ಮಗು ಕಫದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಖಾಸಗಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಮಗುವಿಗೆ ಚಿಕಿತ್ಸೆ ನೀಡಿದರೂ ಆರೋಗ್ಯ ಚೇತರಿಕೆ ಕಾಣದ ಹಿನ್ನಲೆಯಲ್ಲಿ ಕಾರವಾರದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ದಾಖಲು ಮಾಡಲಾಗಿತ್ತು. ಮೂರು ದಿನದಿಂದ ಮಕ್ಕಳ ವಿಭಾಗದ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಅಳವಡಿಸಿ ಮಗುವಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ‌

ಚಿಕಿತ್ಸೆ ನೀಡಿದಾಗಲೂ ಮಗುವಿಗೆ ಕಫ ಕಡಿಮೆ ಆಗದೆ ಮಗು ತೀವ್ರ ಅಸ್ವಸ್ಥಗೊಂಡಿದ್ದರಿಂದ ಮಗುವಿನ ಪೋಷಕರು ಚಿಕಿತ್ಸೆ ಸಾಧ್ಯವಿಲ್ಲ ಎಂದಾದಲ್ಲಿ ಬೇರೆ ಆಸ್ಪತ್ರೆಗೆ ಕೊಂಡೊಯ್ಯುವುದಾಗಿ ತಿಳಿಸಿದ್ದರು. ಇದಕ್ಕೆ ಆಸ್ಪತ್ರೆಐ ವೈದ್ಯರು ಅನುಮತಿ ನೀಡಿದ್ದರು. ಪಿಡಿಯಾಟ್ರಿಕ್ ವೆಂಟಿಲೇಟರ್ ಅಂಬುಲೆನ್ಸ್‌ ಇಲ್ಲದೇ ಇರುವ ಕಾರಣ ಉಡುಪಿ ಆಸ್ಪತ್ರೆಯಿಂದ ಅಂಬುಲೆನ್ಸ್ ತರಿಸಲಾಗಿತ್ತು. ಆದರೆ, ಅಂಬುಲೆನ್ಸ್ ಬರುವ ಮೊದಲೇ ಮಗು ಸಾವನ್ನಪ್ಪಿದೆ. ರಾಜೇಶ್‌ ದಂಪತಿಗೆ ಮದುವೆಯಾಗಿ 5 ವರ್ಷದ ನಂತರ ಮಗು ಜನಿಸಿತ್ತು. ಮಗು ಹುಟ್ಟಿದ ಮೂರೇ ತಿಂಗಳಲ್ಲಿ ಸಾವು ಕಂಡಿರುವುದು ಕುಟುಂಬಸ್ಥರಲ್ಲಿ ತೀವ್ರ ನೋವು ಉಂಟು ಮಾಡಿದೆ.

  1.  

ಆಸ್ಪತ್ರೆ ಎದುರು ಮೃತ ಹಸುಗೂಸು ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಕಾರವಾರ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಮಗು ಚಿಕಿತ್ಸೆ ಪಡೆದುಕೊಂಡ ನಂತರ ಕ್ರಿಮ್ಸ್‌ ಗೆ ಕರೆತರಲಾಗಿತ್ತು. ಕೊನೆ ಗಳಿಗೆಯಲ್ಲಿ ಚಿಕಿತ್ಸೆಗೆ ಮಗು ಬಂದಿತ್ತು. ನಮ್ಮಲ್ಲಿ ಉತ್ತಮ ಮಕ್ಕಳ ವಿಭಾಗ ಹಾಗೂ ಚಿಕಿತ್ಸಾ ಸೌಲಭ್ಯ ಇದೆ. 6 ಮಂದಿ ಮಕ್ಕಳ ತಜ್ಞ ವೈದ್ಯರು ಇದ್ದಾರೆ. ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಮಗು ಇಲ್ಲಿಗೆ ಬರುವಾಗಲೇ ಗಂಭೀರ ಸ್ಥಿತಿಯಲ್ಲಿ ಇತ್ತು. ಮಗುವಿಗೆ ಅಗತ್ಯ ಚಿಕಿತ್ಸೆ ನೀಡಲಾಗಿತ್ತು,  ಎಂದು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ.ಗಜಾನನ ನಾಯಕ್ ತಿಳಿಸಿದರು.

Karwar: The 3-month-old Rajan of Rajesh Nagekar, a native of Kinnar, who was suffering from pneumonia, died in the hospital of Karwar Medical College in Uttara Kannada district on Thursday.

The parents and relatives of the deceased child protested in front of Krims Hospital along with the body of the deceased child saying that the pediatric ventilator ambulance did not arrive at the right time. Family members and locals have expressed outrage that there is no proper facility in CRIM’s children’s department and the hospital is full of chaos.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com