Breaking News

ವಿಧಾನಸೌಧದಲ್ಲಿ ಗದ್ದಲ್ಲ: ಬಿಜೆಪಿಯ 10 ಮಂದಿ ಶಾಸಕರ ಅಮಾನತು

 

ಬೆಂಗಳೂರು: ವಿಧಾನಸಭೆ ಸ್ಪೀಕರ್ ಪೀಠಕ್ಕೆ ‌ಅಗೌರವ ಉಂಟು ಮಾಡಿದ ಕಾರಣಕ್ಕಾಗಿ ಬಿಜೆಪಿ 10 ಮಂದಿ ಶಾಸಕರನ್ನು ವಿಧಾನಸಭೆ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಲಾಗಿದೆ.

ಬಿಜೆಪಿ ಸದಸ್ಯರಾದ ಡಾ. ಸಿಎನ್ ಅಶ್ವತ್ಥ ನಾರಾಯಣ, ಸುನಿಲ್ ಕುಮಾರ್, ಆರ್ ಅಶೋಕ್, ವೇದವ್ಯಾಸ್‌ ಕಾಮತ್‌, ಯಶ್ ಪಾಲ್ ಸುವರ್ಣ, ಡಾ. ಭರತ್ ಶೆಟ್ಟಿ, ಉಮನಾಥ್ ಕೋಟ್ಯಾನ್, ಅರವಿಂದ‌ ಬೆಲ್ಲದ, ಧೀರಜ್ ಮುನಿರಾಜ್, ಆರಗ ಜ್ಞಾನೇಂದ್ರ ಅವರನ್ನು ಅಮಾನತು ಮಾಡಲಾಗಿದೆ.

  1.  

ವಿಧಾನಸಭೆಯ ಉಪಸಭಾಧ್ಯಕ್ಷ ಕುಳಿತಿದ್ದ ಪೀಠಕ್ಕೆ ಬಂದ ಶಾಸಕರು ಗದ್ದಲ ಉಂಟು ಮಾಡಿ, ವಿಧೇಯಕದ ಪ್ರತಿಗಳನ್ನು ಹರಿದು ತೂರಿದ್ದರ ಪರಿಣಾಮ ಶಾಸಕರನ್ನು ಅಮಾನತು ಮಾಡಲಿದೆ.

ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ಹಾಗೂ ನಡಾವಳಿ ನಿಯಮ 348 ಮೇರೆಗೆ ಅಮಾನತು ಮಾಡಲಾಗಿದೆ. ಈ ಪ್ರಸ್ತಾವಕ್ಕೆ ಸ್ಪೀಕರ್ ಖಾದರ್ ಅಂಗೀಕಾರ ನೀಡಿದರು. ಸದಸ್ಯರನ್ನು ಸದನದಿಂದ‌ ಹೊರಗೆ ಹೋಗುವಂತೆ ಸೂಚಿಸಿದರು.

10 BJP MLAs have been suspended till the end of the assembly session for disrespecting the assembly speaker’s chair.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com