Breaking News

ಲೋಕಸಭಾ ಚುನಾವಣೆಗೆ ಸನ್ನದ್ದರಾಗಿ: ಮಾಜಿ ಶಾಸಕಿ ರೂಪಾಲಿ ನಾಯ್ಕ್‌

 

ಕಾರವಾರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಲು ಎಲ್ಲರೂ ಪಣ ತೋಡಬೇಕು ಎಂದು ಕಾರವಾರ- ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ಕಾರವಾರದ ಇಂದಿರಾಕಾಂತ ಸಭಾಭವನದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ನಗರಸಭೆ ಸದಸ್ಯರ ಜತೆಗೆ ಸಭೆ ನಡೆಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಗಾಗಿ ನಾವು ಕೇಂದ್ರ ಸರ್ಕಾರದ ಸಾಧನೆಯ ಕರಪತ್ರವನ್ನು ಮನೆ ಮನೆಗೆ ತಲುಪಿಸುವ ಮೂಲಕ ಬೂತ್, ವಾರ್ಡ್‌ನ ಮತದಾರರನ್ನು ಸಂಪರ್ಕ ಮಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು.  ದೇಶದ ಉಜ್ವಲ ಭವಿಷ್ಯಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸುವಂತೆ ಆಗಬೇಕು. ನಮ್ಮ ಪಕ್ಷದ ಗೆಲುವಿಗೆ ಕಾರ್ಯಕರ್ತರು ಹಗಲಿರುಳು ದುಡಿಬೇಕು. ಹಾಗೆಯೇ ಪಕ್ಷಕ್ಕಾಗಿ ಕಾರ್ಯಕರ್ತರು ಸಮಯ ಮೀಸಲಿಡಬೇಕು ಎಂದು ಕರೆ ನೀಡಿದರು.

ಅಂಕೋಲಾ- ಕಾರವಾರ ವಿಧಾನಸಭಾ ಚುನಾವಣೆಯಲ್ಲಿ ತಾವು ನನ್ನ ಕ್ಷೇತ್ರದ ಮತದಾರನ್ನು ನಿರಂತರ ಸಂಪರ್ಕಿಸಿ ನಾನು ಮಾಡಿದ ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಹೇಳುವ ಮೂಲಕ ಅವರಿಗೆ ಮನೆ ಮನೆಗೆ ಹೋಗಿ ಕರಪತ್ರವನ್ನು ನೀಡಿ. ನನ್ನ ಕ್ಷೇತ್ರದಲ್ಲಿ 75 ಸಾವಿರಕ್ಕೂ

ಅಧಿಕ ಮತಗಳನ್ನು ಪಡೆವ ಮೂಲಕ ಪಕ್ಷದ ಕಾರ್ಯವನ್ನು ಚೆನ್ನಾಗಿ ಮಾಡಿದ್ದೀರಿ. ನಾನು ಕನಿಷ್ಠ ಮತದ ಅಂತರದಿಂದ ಸೋತರೂ, ತಾವು ನನ್ನ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮಾಡಿದ ಸೇವೆಗೆ ನಾನು ಹಾಗೂ ನಮ್ಮ ಬಿಜೆಪಿ ಪಕ್ಷದ ಪರವಾಗಿ ಸದಾ ನಿಮಗೆ ಚಿರಋಣಿ ಆಗಿದ್ದೇನೆ ಎಂದರು.

  1.  

ಮುಂದೆಯೂ ತಾವು ಇದೇ ರೀತಿ ನನಗೆ ಹಾಗು ಪಕ್ಷಕ್ಕೆ ಪ್ರೀತಿ ತೋರಿಸ ಬೇಕು. ಇನ್ನೂ ಮುಂದೆ ತಾವು ಹತಾಶ ಆಗದದೇ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕು. ನಿಮ್ಮೊಂದಿಗೆ ಸದಾ ನಾನು ಇದ್ದೇನೆ. ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ  ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನಾವು ಪಕ್ಷದ ಸಲುವಾಗಿ ನಿರಂತರ ಕಾರ್ಯವನ್ನು ಮಾಡಬೇಕು. ಜನರ ನಡುವೆ ಇದ್ದು ಜನರ ಕಷ್ಟ ಸುಖದಲ್ಲಿ ಭಾಗಿ ಆಗಬೇಕು ಎಂದರು.

ಐದು ಗ್ಯಾರಂಟಿ ನೀಡುವ ಮೂಲಕ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಜನರಿಗೆ ಐದು ಗ್ಯಾರಂಟಿ ನೀಡುವವರಿಗೆ ಹೋರಾಟ ಮಾಡಿ ಜನರಿಗೆ ನ್ಯಾಯ ಒದಗಿಸಬೇಕು. ಕ್ಷೇತ್ರದ ಜನರ ಜತೆಗೆ ಸದಾ ಇರುತ್ತೇನೆ. ಪಕ್ಷದ ಕಾರ್ಯಕರ್ತರು ಪಕ್ಷ ಕೊಟ್ಟಂತಹ ಎಲ್ಲಾ ಜವಾಬ್ದಾರಿ ಹಾಗು ಕಾರ್ಯಕ್ರಮಗಳನ್ನು ಚೆನ್ನಾಗಿ ನಿರ್ವಹಿಸಬೇಕು ಎಂದು ಹೇಳಿದರು.

ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು, ನಗರಸಭೆ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

Rupali Nayka, former MLA from Karwar-Ankola constituency, said that everyone should bet on the victory of the BJP candidate in the Lok Sabha elections and once again make Prime Minister Narendra Modi the Prime Minister of the country.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com