
ಹೊನ್ನಾವರ: ತಾಲೂಕಿನ ಮುಗ್ವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಲಕ್ಕಿ, ಹುಲಿಯಪ್ಪನ ಕಟ್ಟೆ, ಹೊನ್ನಾವರ ಪಟ್ಟಣಕ್ಕೆ ಹತ್ತಿರ ಇರುವ ಮೂರು ಕಟ್ಟೆ ಪ್ರದೇಶದಲ್ಲಿ ಕಸದ ವಿಲೇವಾರಿಯೇ ದೊಡ್ಡ ಸವಾಲಾಗಿದೆ. ಸ್ವಚ್ಟ ಭಾರತ್ ಕನಸು ಅಪವಾದ ಎಂಬಂತೆ ಆಗಿದೆ. ತ್ಯಾಜ್ಯ ಒಯ್ಯುವ ವಾಹನವೇ ನಾಪತ್ತೆ ಆಗಿದೆ. ದಿನೇ ದಿನೇ ಕಸ ವಿಲೇವಾರಿ ಸಮಸ್ಯೆಯಿಂದಾಗಿ ಜನರು ಆಕ್ರೋಶಗೊಂಡು ಗ್ರಾಮ ಪಂಚಾಯಿತಿ ಎದುರು ಕಸ ಸುರಿಯುವುದಾಗಿ ಎಚ್ಚರಿಸಿದ್ದಾರೆ.
ಒಣ ಮತ್ತು ಹಸಿ ಕಸವನ್ನು ಗುಡ್ಡ ಬೆಟ್ಟ, ಚರಂಡಿ, ನೀರು ಹರಿವ ಹಳ್ಳದಲ್ಲಿ ಸಂಗ್ರಹ ಆಗುತ್ತಿದೆ. ಪ್ರತಿ ದಿನ ಫಾಸ್ಟ್ ಫುಡ್, ವೈನ್ ಶಾಪ್ ಇನ್ನಿತರ ಅಂಗಡಿ ಜತೆಗೆ ಮನೆಯಲ್ಲಿ ಬಳಸಿದ ವಸ್ತುಗಳನ್ನು ನಗರೆ ಕ್ರಾಸ್ ಹತ್ತಿರದ ರಸ್ತೆ ಅಂಚಿನ ಗುಡ್ಡ ಮತ್ತು ಹಳ್ಳದಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಅಲ್ಲಿ ಗಿಡ ಗಂಟಿಗಳ ಮದ್ಯದಲ್ಲಿ ಗುಡ್ಡದ ಆಕಾರದಲ್ಲಿ ಕಸದ ರಾಶಿ ದೊಡ್ಡದಾಗುತ್ತಲೆ ಇದೆ, ಆದರೆ ಯಾರೂ ಕೂಡ ಈ ಬಗ್ಗೆ ತಲೆಕಡಸಿಕೊಳ್ಳದೇ ಇರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕಸ ಮಳೆಗಾಲದಲ್ಲಿ ನೀರಿನ ಜತೆಗೆ ಹರಿದು ಬಂದು ನಿರ್ವತ್ತಿಕೋಡ್ಲು ಗ್ರಾಮದ ತೋಟ, ಮನೆಗಳನ್ನು ಸೇರುತ್ತಿದೆ. ನಿರ್ವತ್ತಿಕೋಡ್ಲು ಭಾಗದಲ್ಲಿ ಅನೇಕ ಕುಟುಂಬಗಳು ವಾಸವಾಗಿವೆ. ಹೆಚ್ಚಿನ ಜನ ಕೃಷಿ ಅವಲಂಬಿಸಿದ್ದಾರೆ. ಅವರ ತೋಟ, ಬೆಟ್ಟ, ಮನೆ ಹತ್ತಿರ ಹೊಲಸು ನಾರುವ ಕಸ ಬಂದು ಬೀಳುತ್ತಿರುದರಿಂದ ಸ್ಥಳೀಯ ಜನರಿಗೆ ಕಸದಿಂದ ಕಿರಿಕಿರಿ ಉಂಟಾಗುತ್ತಿದೆ.
ಕಸದ ವಾಹನವೇ ನಾಪತ್ತೆ: ಗ್ರಾಮ ಪಂಚಾಯಿತಿ ಕಸ ವಿಲೇವಾರಿಗೆ ವಾಹನ ವ್ಯವಸ್ಥೆ ಮಾಡಿ, ಸಿಬ್ಬಂದಿ ನೇಮಕ ಮಾಡಲಾಗಿದೆ. ಮಳೆ ಬರುವವರಿಗೆ ಮಾತ್ರ ಕಸ ಸಂಗ್ರಹ ಮಾಡಲಾಯಿತು. ವಾರಕೊಮ್ಮೆ ಬರುತ್ತಿದ್ದ ಕಸ ಸಂಗ್ರಹದ ಗಾಡಿ ಒಣ ಕಸ ಮಾತ್ರ ತೆಗೆದುಕೊಳ್ಳುತ್ತಿದ್ದರು. ಮಳೆ ಬಂದ ನಂತರ ಗಾಡಿಯೇ ನಾಪತ್ತೆ ಆಗಿದೆ.
ತಿಂಗಳಿಗೊಮ್ಮೆ ಕವಲಕ್ಕಿಯ ಡಾ. ಅನುಪಮಾ ಅವರ ಮನೆಗೆ ರಾಜ್ಯದ ಬೇರೆ ಬೇರೆ ಕಡೆಯಿಂದ ಶಿಬಿರಕ್ಕೆ ಬರುವ ವಿದ್ಯಾರ್ಥಿಗಳು ಶ್ರಮದಾನ ಮಾಡಿ ಕವಲಕ್ಕಿ ಗ್ರಾಮ ಸ್ವಚ್ಛ ಗೊಳಿಸುತ್ತಿದ್ದಾರೆ. ಅವರು ಸ್ವಚ್ಛ ಗೊಳಿಸಿ ಮೂಟೆ ಕಟ್ಟಿ ಇಟ್ಟಿರುವ ಕಸದ ಮೂಟೆ ಕವಲಕ್ಕಿಯಲ್ಲಿ ಹಾಗೇ ಉಳಿದಿದೆ.
ವಾಹನ, ಚಾಲಕ, ಸಿಬ್ಬಂದಿ ಇದ್ದರು ಕಸ ವಿಲೇವಾರಿ ಸ್ಥಗಿತವಾಗಿದೆ. ಸ್ವಚ್ಛ ಗ್ರಾಮದ ಕನಸು ಕನಸಾಗಿಯೇ ಉಳಿದುಕೊಂಡಿದೆ. ಕವಲಕ್ಕಿಯಿಂದ ಅತೀ ಹೆಚ್ಚು ಕರ ವಸೂಲಿ ಆಗುತ್ತಿದೆ. ಹಾಗಿದ್ದೂ ಕೂಡ, ಕಸ ವಿಲೇವಾರಿಗೆ ಮುಂದಾಗುತ್ತಿಲ್ಲ. ನಮ್ಮಿಂದ ಪಂಚಾಯಿತಿಗೆ ಆದಾಯ ಬಂದರು ಸರಿಯಾದ ಸೌಲಭ್ಯ ಒದಗಿಸಿ ಕೊಡದೆ ಇರುವ ಬಗ್ಗೆ ಅಂಗಡಿ ಮಾಲೀಕರು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.
ಎರಡು ತಿಂಗಳಿಂದ ಗ್ರಾಮ ಪಂಚಾಯಿತಿ ಕಸ ವಿಲೇವಾರಿ ನಿಲ್ಲಿಸಿದೆ. ನಮ್ಮ ಅಂಗಡಿಯಲ್ಲಿನ ತ್ಯಾಜ್ಯ ಎಲ್ಲಿ ಹಾಕಬೇಕು. ಹೊರಗಡೆ ಹಾಕಲು ನಮಗೆ ಮನಸ್ಸಿಲ್ಲ, ಕಸ ಒಯ್ಯುತ್ತಿಲ್ಲ. ಹೀಗೆ ಮುಂದುವರಿದ್ದಲ್ಲಿ ಗ್ರಾಮ ಪಂಚಾಯಿತಿ ಎದುರಿಗೆ ಕಸ ತಂದು ಸುರಿಯಬೇಕಾಗುತ್ತದ ಎಂದು ಸುಬ್ರಮಣ್ಯ ಹೆಗಡೆ ಹೇಳಿದರು.
Garbage disposal is the biggest challenge in Kavalakki, Huliappana Katte and three Katte areas near Honnavar town under Mugwa Gram Panchayat of Honnavar Taluk. The dream of Swachh Bharat is an exception. The garbage truck itself has gone missing. Day by day people are angry due to the problem of garbage disposal and have warned that they will dump garbage in front of the Gram Panchayat.


