Breaking News

ಶಾಲಾ ಮಕ್ಕಳಿಗೆ ವಾರದಲ್ಲಿ 2 ಮೊಟ್ಟೆ: ಸಚಿವ ಮಧು ಬಂಗಾರಪ್ಪ

 

ಬೆಂಗಳೂರು: ಶಾಲೆಗಳಲ್ಲಿ ವಾರಕ್ಕೆ ಎರಡು ಮೊಟ್ಟೆ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  1.  

ವಾರಕ್ಕೆ ಎರಡು ದಿನ ಮೊಟ್ಟೆ ಕೊಡುವ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿಕೊಂಡಿದ್ದೆ. ಅದರಂತೆ ಮುಖ್ಯಮಂತ್ರಿ ಒಪ್ಪಿಗೆ ನೀಡಿ ವಾರಕ್ಕೆ ಎರಡು ಮೊಟ್ಟೆ ನೀಡಲು ಅನುಮೋದಿಸಿದ್ದಾರೆ ಎಂದು ತಿಳಿಸಿದರು.

ಮೊಟ್ಟೆ ವಿತರಣೆ ಹಾಗೂ ಶೂ- ಸಾಕ್ಸ್ ವಿಚಾರದಕಲ್ಲಿ ಎಸ್​ಡಿಎಂ​ಸಿ ಅವರಿಗೆ ಎಲ್ಲ ಅಧಿಕಾರ ಕೊಡಲಾಗಿದೆ. 280 ಕೋಟಿ ರೂಪಾಯಿ ಈ ಮೊಟ್ಟೆ ನೀಡಲು ಸದ್ಯ ಯೋಜನೆ ರೂಪಿಸಲಾಗಿದೆ. ವಾರ್ಷಿಕವಾಗಿ 84 ದಿನ ಮಕ್ಕಳಿಗೆ ಮೊಟ್ಟೆ ಕೊಡಲಾಗುತ್ತದೆ. ಮೊಟ್ಟೆ ತಿನ್ನದೇ ಇರುವವರಿಗೆ ಚಿಕ್ಕಿ ಮತ್ತು ಬಾಳೆ ಹಣ್ಣು ಕೊಡುವ ವ್ಯವಸ್ಥೆ ಮಾಡಲಾಗಿದೆ. ಗುಣಮಟ್ಟ ಚೆನ್ನಾಗಿಲ್ಲ ಎಂದರೆ ಎಸ್​ಡಿಎಂ​ಸಿ ಅವರೇ ಜವಾಬ್ದಾರಿ ಎಂದು ತಿಳಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com