Breaking News

ದಿಗಂಬರ ಜೈನಮುನಿ ಹತ್ಯೆ ಖಂಡಿಸಿ ವ್ಯಾಪಕ ಪ್ರತಿಭಟನೆ, ಮನವಿ ಸಲ್ಲಿಕೆ

 

ಮಂಗಳೂರು: ದಿಗಂಬರ ಜೈನ ಮುನಿ ಹತ್ಯೆ ಮಾಡಿರುವ ಘಟನೆ ಖಂಡಿಸಿ ಮಂಗಳೂರಿನಲ್ಲಿ ಜೈನ ಸಮಾಜದವರು ಪ್ರತಿಭಟನಾ ಮೆರವಣಿಗೆ ನಡೆಸಿ, ಕೃತ್ಯದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿದರು.

ಮೂಡುಬಿದಿರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನೇತೃತ್ವದಲ್ಲಿ ನಗರದ ಮಿನಿ ವಿಧಾನಸೌಧ ಬಳಿ ಸೇರಿದ ಪ್ರತಿಭಟನಾ ನಿರತರು ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಿದರು.

  1.  

ಯಾವುದೇ ಲೌಕಿಕ ಸಂಬಂಧಗಳನ್ನು ಇಟ್ಟುಕೊಳ್ಳದೆ, ಕೇವಲ ಆಧ್ಯಾತ್ಮ ಜೀವನ ನಡೆಸುತ್ತಿದ್ದ ದಿಗಂಬರ ಜೈನ ಮುನಿಗಳನ್ನು ಈ ರೀತಿ ಹತ್ಯೆ ನಡೆಸಿರುವುದು ಅತ್ಯಂತ ಹೇಯ ಕೃತ್ಯ. ಕೃತ್ಯದಲ್ಲಿ ಯಾರೇ ಭಾಗಿಯಾಗರಲಿ, ಅವರಿಗೆ ಶೀಘ್ರದಲ್ಲಿ ಗಲ್ಲು ಶಿಕ್ಷೆಯಾಗಬೇಕು. ಮುಂದೆ ಈ ರೀತಿಯ ಕೃತ್ಯ ಆಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಜೈನ ಸಮಾಜದ ಸಂತರಿಗೆ ಭದ್ರತೆ ನೀಡಬೇಕು ಎಂದು ಜೈನ್ ಮಿಲನ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಜೈನ್ ಆಗ್ರಹಿಸಿದ್ದಾರೆ.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ನಾಗರಿಕ ಸಮಾಜ ತಲೆತಗ್ಗಿಸುವ ರೀತಿಯ ಕೃತ್ಯ ನಡೆದಿದೆ. ಅಮಾಯಕ ಅದರಲ್ಲೂ ಎಲ್ಲವನ್ನೂ ಬಿಟ್ಟ ದಿಗಂಬರನಾಗಿದ್ದ ಸಂತರೊಬ್ಬರನ್ನು ಕೊಲ್ಲುವುದು ಧರ್ಮಕ್ಕಾಗಿ ಜೀವನ ಸವೆಸುತ್ತಿರುವ ಸಂತರಲ್ಲಿ ಭಯ ಮೂಡಿಸಿದೆ. ಇದಕ್ಕಾಗಿ ಜೈನ ಸಮಾಜದ ಆಶ್ರಮಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕೃತ್ಯದ ತನಿಖೆ ಬಗ್ಗೆ ವಿಶೇಷ ತನಿಖಾ ತಂಡ ಮತ್ತು ವಿಶೇಷ ನ್ಯಾಯಾಧೀಶರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಜೈನ್ ಮಿಲನ್ ಸಂಘದ ಸುದರ್ಶನ್ ಜೈನ್ ಪ್ರಸ್ತಾವಿಸಿ, ನಾವು ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸುತ್ತೇವೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಜೊತೆಗೆ, ಜೈನ ಸಮುದಾಯದ ಸಂತರಿಗೆ ಮುಂದೆ ಯಾವತ್ತೂ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಮಹಿಳೆಯರು ಸೇರಿದಂತೆ 50 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com