Breaking News

ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ತಾಯಿ ನಿಧನ

 

ಪುತ್ತೂರು: ಮಾಜಿ ಸಂಸದ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರ ತಾಯಿ ಸುನೀತಿ ಅಚ್ಯುತ ಸೊರಕೆ ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

  1.  

ಅವರಿಗೆ 91 ವರ್ಷ ವಯಸ್ಸಾಗಿತ್ತು. ಅವರಿಗೆ ಮೂರು ಜನ ಪುತ್ರರು, ಎರಡು ಜನ ಪುತ್ರಿಯರು, ಎಂಟು ಮೊಮ್ಮಕ್ಕಳು, ಮೂರು ಮಂದಿ ಮರಿ ಮಕ್ಕಳು ಇದ್ದಾರೆ.

ಮೃತರ ಅಂತ್ಯ ಸಂಸ್ಕಾರ ಶನಿವಾರ ಮಧ್ಯಾಹ್ನ  ಸ್ವಗೃಹ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಸೊರಕೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com