Breaking News

ಹೀಗಿದೆ ನಿಮ್ಮ ಬುಧವಾರದ ರಾಶಿಫಲ

 

ಕಟಕ: ಸಂಗಾತಿ ತಲೆಯಲ್ಲಿ ನಕಾರಾತ್ಮಕ ವಿಚಾರಗಳು ಬಾರದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. 

ಸಿಂಹ: ಇತರರನ್ನು ಅತಿಯಾಗಿ ನಂಬುವುದು ಒಳ್ಳೆಯದಲ್ಲ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.

ಕನ್ಯಾ: ಇಂದು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಯಾವುದೇ ತೊಂದರೆ ಇರೋದಿಲ್ಲ. ಮಕ್ಕಳಿಂದ ಒಳ್ಳೆಯ ಸುದ್ದಿಯನ್ನೇ ಕೇಳಲಿದ್ದೀರಿ.

ತುಲಾ: ಕುಟುಂಬದ ಬದ್ಧತೆಗಳನ್ನು ಈಡೇರಿಸಲು ಇನ್ನಿಲ್ಲದ ಪ್ರಯತ್ನ ಮಾಡಲಿದ್ದೀರಿ. ಕ್ಷುಲ್ಲಕ ಕಾರಣಕ್ಕೆ ಸಂಗಾತಿಯೊಂದಿಗೆ ವೈಮನಸ್ಯ ಮೂಡುವ ಸಾಧ್ಯತೆಯಿದೆ.

ಮೇಷ: ಕಳೆದ ಕೆಲವು ದಿನಗಳಿಂದ ಕುಟುಂಬದಲ್ಲಿ ನಡೆಯುತ್ತಿದ್ದ ತಪ್ಪು ತಿಳುವಳಿಕೆ ಇನ್ನೂ ದೊಡ್ಡ ಹಂತಕ್ಕೆ ತಲುಪುವ ಸಾಧ್ಯತೆಯಿದೆ. ಸಂಯಮದಿಂದ ಎಲ್ಲವನ್ನೂ ನಿಭಾಯಿಸಬೇಕು.

ವೃಷಭ: ಮನೆಯ ನವೀಕರಣ ಕಾರ್ಯ ಆರಂಭಗೊಳ್ಳುವ ನಿರೀಕ್ಷೆಯಿದೆ. ಭಾಷಾ ಪ್ರಯೋಗ ಮಾಡುವಾಗ ಎಚ್ಚರಿಕೆ ಇರಲಿ. ನಿಂದನೀಯ ಭಾಷೆ ನಿಮ್ಮ ವ್ಯಕ್ತಿತ್ವವನ್ನೆ ಹಾಳು ಮಾಡಲಿದೆ.

  1.  

ಮಿಥುನ: ವ್ಯಾಪಾರದಲ್ಲಿ ಲಾಭದ ಭರವಸೆ ಕಾಣುತ್ತಿಲ್ಲ. ಆರ್ಥಿಕ ವ್ಯವಸ್ಥೆಗೆ ಪರ್ಯಾಯ ದಾರಿ ಹುಡುಕುವುದು ಸೂಕ್ತ ಎನಿಸುತ್ತಿದೆ.

ವೃಶ್ಚಿಕ: ಸೋಮಾರಿತನವು ನಿಮ್ಮನ್ನು ಅವಕಾಶವಂಚಿತರನ್ನಾಗಿ ಮಾಡಬಹುದು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯಿಂದ ಶಿಕ್ಷಣ ಸಂಸ್ಥೆಯಲ್ಲಿ ಒಳ್ಳೆಯ ಹೆಸರು ಗಳಿಸಲಿದ್ದಾರೆ.

ಕುಂಭ: ಆತ್ಮೀಯ ಸ್ನೇಹಿತನೇ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಬಹುದು. ಮಾರ್ಕೆಟಿಂಗ್​ ಕೆಲಸಗಳು ನಿಮಗೆ ಸಾಥ್​ ನೀಡುವುದಿಲ್ಲ.

ಮೀನ: ಪತ್ನಿ ಹಾಗೂ ತಾಯಿ ನಡುವಿನ ಗಲಾಟೆ ನಿಮ್ಮ ನೆಮ್ಮದಿಯನ್ನು ಸರ್ವನಾಶ ಮಾಡಲಿದೆ. ಆದಾಯದ ಮೂಲ ಚೆನ್ನಾಗಿದ್ದು ಇದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

ಧನು: ಅಹಂಕಾರದಿಂದ ಕೆಲವೊಂದು ವಿಚಾರಗಳನ್ನು ಪ್ರಮಾಣಿಸಿ ನೋಡುವುದರಲ್ಲಿ ಎಡವುತ್ತಿದ್ದೀರಿ. ಮನೆಯ ಅಗತ್ಯತೆಗಳಿಗೆ ಸಂಬಂಧಿಸಿದ ಶಾಪಿಂಗ್​ಗೆ ಇಂದು ಹಣ ಖರ್ಚಾಗಲಿದೆ.

ಮಕರ: ಕೆಲವರು ನಿಮ್ಮ ಬಗ್ಗೆ ಸುಖಾ ಸುಮ್ಮನೇ ತಪ್ಪು ತಿಳಿದುಕೊಳ್ಳಬಹುದು. ಪೋಷಕರ ಅನಾರೋಗ್ಯ ನಿಮ್ಮ ಚಿಂತೆಯನ್ನು ಇನ್ನಷ್ಟು ಹೆಚ್ಚಿಸಲಿದೆ.

  1.  

Leave a Reply

Your email address will not be published. Required fields are marked *