Breaking News

ಹೀಗಿದೆ ನಿಮ್ಮ ಮಂಗಳವಾರದ ರಾಶಿಫಲ

 

ಸಿಂಹ ರಾಶಿಯವರಿಗೆ ಹೂಡಿಕೆಗೆ ಸಂಬಂಧಿಸಿ ಯೋಜನೆಗಳಲ್ಲಿ ಅನೇಕ ಗೊಂದಲ ಉಂಟಾಗಲಿದೆ, ಮೀನ ರಾಶಿಯವರಿಗೆ ಅನ್ಯಕೋಮಿನ ಪ್ರೀತಿ ದೊಡ್ಡ ಗಲಾಟೆಗೆ ಕಾರಣ ಆಗಲಿದೆ.

ಮೀನ : ನಿಮ್ಮ ಅನ್ಯಧರ್ಮೀಯ ಪ್ರೀತಿ ದೊಡ್ಡ ಗಲಾಟೆಗೆ ಕಾರಣವಾಗಲಿದೆ. ಪರಿಸ್ಥಿತಿ ಅರ್ಥಮಾಡಿಕೊಳ್ಳದೇ ಮೇಲಾಧಿಕಾರಿಗಳು ಸುಮ್ಮನೇ ನಿಮ್ಮ ಮೇಲೆ ಕೋಪ ಹೊರಹಾಕಲಿದ್ದಾರೆ.

ಕುಂಭ : ಕಚೇರಿ ಕೆಲಸ ಮಾಡುವ ಒತ್ತಡದ ನಡುವೆ ವೈಯಕ್ತಿಕ ಕಾರ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಿದ್ದೀರಿ.

ಸಿಂಹ : ಹೂಡಿಕೆಗೆ ಸಂಬಂಧಿಸಿ ಯೋಜನೆಗಳಲ್ಲಿ ಅನೇಕ ಗೊಂದಲಗಳು ಉಂಟಾಗಲಿದೆ. ಆರ್ಥಿಕ ವಿಚಾರಗಳಲ್ಲಿ ಸಂಕಷ್ಟ ಇರಲಿದೆ.

ಕನ್ಯಾ : ವ್ಯಾಪಾರ ಚಟುವಟಿಕೆಗಳು ಸರಾಗವಾಗಿ ನಡೆಯಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಮಯ ವ್ಯರ್ಥ ಮಾಡಬೇಡಿ.

ತುಲಾ : ಸಂಗಾತಿಯು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲಿದ್ದಾರೆ. ವಾಹನ ಖರೀದಿ ಮಾಡುವ ಬಗ್ಗೆ ಚಿಂತನೆ ನಡೆಸಲಿದ್ದೀರಿ.

  1.  

ಮೇಷ : ಹೊಸ ಕಾರ್ಯಗಳನ್ನು ಆರಂಭಿಸಲು ಈ ದಿನ ಯೋಗ್ಯ ದಿನವಾಗಿದೆ. ಬಹಳ ದಿನಗಳಿಂದ ನೀವು ಮುಂದೂಡಿದ್ದ ಕಾರ್ಯವನ್ನು ಇಂದು ಪೂರ್ಣಗೊಳಿಸುವ ಬಗ್ಗೆ ಯೋಚಿಸಲಿದ್ದೀರಿ.

ವೃಷಭ : ಜನರೊಂದಿಗೆ ಬೆರೆಯುವ ನಿಮ್ಮ ಗುಣ ಎಲ್ಲರಿಗೂ ಮೆಚ್ಚುಗೆ ಎನಿಸಲಿದೆ. ಹಣಕಾಸಿನ ವಿಚಾರದಲ್ಲಿ ಸ್ನೇಹಿತರ ಜೊತೆಯಲ್ಲಿ ವೈಮನ್ಯಸ್ಯ ಮೂಡಲಿದೆ.

ಮಿಥುನ : ಕೆಲಸದ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಿ. ನಿಮ್ಮ ಬಹುದಿನಗಳ ಕನಸೊಂದು ಇಂದು ನನಸಾಗಲಿದೆ.

ಕಟಕ : ಕುಟುಂಬ ಸದಸ್ಯರೊಂದಿಗೆ ಕುಟುಂಬದ ಜವಾಬ್ದಾರಿಗಳನ್ನು ಹಂಚಿಕೊಳ್ಳಲಿದ್ದೀರಿ. ಇಂದು ನೀವು ಹೊಸ ಹೊಸ ಜನರನ್ನು ಭೇಟಿಯಾಗಲಿದ್ದೀರಿ.

ವೃಶ್ಚಿಕ : ಸಂಬಂಧಗಳಲ್ಲಿ ಮೂಡಿದ ಬಿರುಕು ಮನೆಯಲ್ಲಿ ದುಃಖದ ವಾತಾವರಣವನ್ನು ಸೃಷ್ಟಿಸಲಿದೆ.ಇಂತಹ ಸಂದರ್ಭದಲ್ಲಿ ನೀವು ಬಾಯಿಗೆ ಬೀಗ ಹಾಕಿಕೊಂಡು ಇದ್ದರೆ ನಿಮಗೆ ಒಳ್ಳೆಯದು.

ಧನು : ನಿಮ್ಮ ಅಸಭ್ಯ ವರ್ತನೆಯು ಸಮಾಜದಲ್ಲಿ ನಿಮ್ಮ ಗೌರವಕ್ಕೆ ಧಕ್ಕೆ ತರಬಹುದು . ಹೀಗಾಗಿ ನೀವು ಭಾರೀ ಜಾಗ್ರತೆಯಿಂದ ಇರುವುದು ಉತ್ತಮ

ಮಕರ : ದೊಡ್ಡ ಸವಾಲೊಂದನ್ನು ವಾಸಿ ಮಾಡುವ ನೀವು ನಿರಾಳತೆಯನ್ನು ಅನುಭವಿಸಲಿದ್ದೀರಿ. ಅನಭವಿಗಳ ಮಾರ್ಗದರ್ಶನವಿಲ್ಲದೇ ಯಾವುದೇ ಹೊಸ ಕೆಲಸಕ್ಕೆ ಕೈ ಹಾಕಬೇಡಿ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com