Breaking News

ಮಂಗಳೂರು ವಿವಿ ಪವರ್ ಲಿಫ್ಟಿಂಗ್: ಮೂಡುಬಿದಿರೆ ಆಳ್ವಾಸ್ ಗೆ ಚಾಂಪಿಯನ್ ಪಟ್ಟ

 

ಉಡುಪಿ: ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್ ಹಾಗೂ ಲಯನ್ಸ್ ಕ್ಲಬ್ ಉಡುಪಿ ಅಮೃತ್ ಆಶ್ರಯದಲ್ಲಿ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಪವರ್ ಲಿಫ್ಟಿಂಗ್ ಚಾಂಪಿಯನ್ ಷಿಪ್ನಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ತಂಡಗಳು ಪುರುಷ ಹಾಗೂ ಬಾಲಕಿಯರ ವಿಭಾಗಗಳಲ್ಲಿ ತಂಡ ಪ್ರಶಸ್ತಿ ಬಾಚಿಕೊಂಡಿವೆ.

ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ತಂಡ ಒಟ್ಟು 33 ಅಂಕ ಸಂಗ್ರಹಿಸಿ ಅಗ್ರಸ್ಥಾನಿಯಾದರೆ, ಆತಿಥೇಯ ತೆಂಕನಿಡಿಯೂರು ಕಾಲೇಜು ತಂಡ 21 ಅಂಕಗಳೊಂದಿಗೆ ರನ್ನರ್ಅಪ್ ಸ್ಥಾನ ಪಡೆಯಿತು. 20 ಅಂಕ ಪಡೆದ ಎಸ್ಡಿಎಂ ಕಾಲೇಜು ಉಡುಪಿ ಮೂರನೇ ಹಾಗೂ 16 ಅಂಕ ಪಡೆದ ಕೋಟ ಪಡುಕೆರೆಯ ಸರಕಾರಿ ಪ್ರಥಮ ದರ್ಜೆ ಕಾಲೇಜು ನಾಲ್ಕನೇ ಸ್ಥಾನ ಪಡೆದವು.

ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ತಂಡವು 43 ಅಂಕ ದಾಖಲಿಸಿ ಮೊದಲ ಸ್ಥಾನದ ಜತೆಗೆ ಚಾಂಪಿಯನ್ ಪ್ರಶಸ್ತಿ ಪಡೆಯಿತು. ಅಜ್ಜರಕಾಡಿನ ಡಾ ಜಿ.ಶಂಕರ್ ಸರಕಾರಿ ಮಹಿಳಾ ಪದವಿ ಕಾಲೇಜು 41 ಅಂಕ ಪಡೆದು ರನ್ನರ್ ಅಪ್ ಸ್ಥಾನ ದಾಖಲಿಸಿತು. ಮೂರನೇ ಸ್ಥಾನ 33 ಅಂಕ ಪಡೆದ ಉಜಿರೆ ಎಸ್‌ಡಿಎಂ ಕಾಲೇಜಿನ ಪಾಲಾಯಿತು, ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಕಾಲೇಜು 8 ಅಂಕ ಪಡೆದು 4ನೇ ಸ್ಥಾನ ಪಡೆಯಿತು.

ವೈಯಕ್ತಿಕ ಪ್ರಶಸ್ತಿ: ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ರಂಜಿತ್ ಜಿ. ಅತ್ಯುತ್ತಮ ಲಿಫ್ಟರ್ ಪ್ರಶಸ್ತಿ, ಮಹಿಳೆಯರ ವಿಭಾಗದ ಪ್ರಶಸ್ತಿಯು ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜಿನ ಪ್ರತೀಕ್ಷಾ ಗೆದ್ದು ಕೊಂಡರು.

ಸಮಾರೋಪದಲ್ಲಿ ಮಾಜಿ ಶಾಸಕ ಕೆ. ರಘುಪತಿ ಭಟ್ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ರೈ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಯ ಆಯೋಜಕ ಡಾ.ರೋಶನ್ ಕುಮಾರ್ ಶೆಟ್ಟಿ ನಿರ್ವಹಿಸಿದರು.

ಫಲಿತಾಂಶ:

ಪುರುಷರ 59 ಕೆ.ಜಿ ವಿಭಾಗ: ಚಂದ್ರಶೇಖರ್ ಕೆ., ಆಳ್ವಾಸ್,  (ಒಟ್ಟು 525ಕೆ.ಜಿ.),  ಪ್ರಜ್ವಲ್, ಕೋಟ ಪಡುಕೆರೆ (465), ಎಚ್.ಹಾಲೇಶ್, ತೆಂಕನಿಡಿಯೂರು (445).

66 ಕೆ.ಜಿ ವಿಭಾಗ: ಶಶಾಂಕ್, ಕೋಟ ಪಡುಕೆರೆ (495), ಆಕಾಶ್ ಪಾಲ್, ಎಸ್‌ಎಂಎಸ್ ಬ್ರಹ್ಮಾವರ  (482.5), ಶ್ರೀಧರ್, ಭಂಡಾರ್‌ಕಾರ್ಸ್ ಕುಂದಾಪುರ (480).

74 ಕೆ.ಜಿ.: ಪ್ರಜ್ವಲ್, ಎಸ್‌ಡಿಎಂ ಉಜಿರೆ (507.5), ತಿಪ್ಪಣ್ಣ, ಎಸ್‌ಡಿಎಂ ಉಜಿರೆ (455),  ನಾಗೇಂದ್ರ, ಕೋಟ ಪಡುಕೆರೆ (450).

83ಕೆ.ಜಿ.: ಸುಮಂತ, ಮಿಲಾಗ್ರಿಸ್ ಕಲ್ಯಾಣಪುರ (662.5), ಶರತ್, ತೆಂಕನಿಡಿಯೂರು (660), ರೋಹನ್ ಕೆ., ಎಸ್‌ಎಂಎಸ್ ಬ್ರಹ್ಮಾವರ (555).

93ಕೆ.ಜಿ.: ರಂಜಿತ್, ಆಳ್ವಾಸ್ (720), ಜೇಮ್ಸ್ ಕರೀ, ಆಳ್ವಾಸ್ (545).

105 ಕೆ.ಜಿ.: ಪ್ರತ್ಯುಷ್, ಆಳ್ವಾಸ್ (585), ಕೆ.ಎಸ್. ನಿಶ್ಚಿತ ರೈ, ಎಸ್‌ಡಿಎಂ ಉಜಿರೆ (530),  ಮಹಮ್ಮದ್ ಆಶೀರ್, ಮಿಲಾಗ್ರಿಸ್ ಮಂಗಳೂರು (430).

  1.  

120 ಕೆ.ಜಿ.: ರೋಹನ್, ತೆಂಕನಿಡಿಯೂರು (612.5), ನಾಗೇಂದ್ರ ಅಣ್ಣಪ್ಪ ನಾಯ್ಕ್, ಆಳ್ವಾಸ್ (550), ತ್ರಿಶೂಲ್ ಆರ್.ಆಂಚನ್, ಮಿಲಾಗ್ರಿಸ್ ಕಲ್ಯಾಣಪುರ (532.5).

120 + ಕೆ.ಜಿ.: ಪ್ರಥ್ವಿ ಕುಮಾರ್, ಎಸ್ಡಿಎಂ ಬಿಬಿಎಂ ಮಂಗಳೂರು (550), ರಾಹುಲ್ ಜಿ.ಕೆ., ಪದುವಾ ಮಂಗಳೂರು (425), ಕಾರ್ತಿಕ್, ತೆಂಕನಿಡಿಯೂರು (370).

ಮಹಿಳೆಯರ ವಿಭಾಗ:

47ಕೆ.ಜಿ.: ರಶ್ಮಿತಾ, ಅಜ್ಜರಕಾಡು (262.5), ಯಾಸ್ಮಿನ್ ಶೇಖ್, ಆಳ್ವಾಸ್ (250), ಪೂಜಾ, ತೆಂಕನಿಡಿಯೂರು (230).

52 ಕೆ.ಜಿ.: ಯುಕ್ತಿಕ, ಎಸ್‌ಡಿಎಂ ಉಜಿರೆ (277.5), ಜೀವಿತಾ, ಎಸ್‌ಡಿಎಂ ಉಜಿರೆ (247.5), ಕಾವ್ಯಶ್ರೀ ಯು. ಸರಕಾರಿ ಮಹಿಳಾ ಕಾಲೇಜು ಪುತ್ತೂರು (232.5).

57ಕೆ.ಜಿ.: ಐಶ್ವರ್ಯ, ಅಜ್ಜರಕಾಡು (355), ಅಶ್ವಿತಾ ಬಿ., ಎಸ್‌ಡಿಎಂ ಉಜಿರೆ (240), ಜಸ್ಮಿತಾ, ಆಳ್ವಾಸ್ (222.5).

63ಕೆ.ಜಿ.: ಸೌಮ್ಯ, ಅಜ್ಜರಕಾಡು (340), ಅನುಷಾ, ಆಳ್ವಾಸ್ (292.5), ಸಂಗೀತಾ ಎ.ಎಂ., ಎಸ್‌ಡಿಎಂ ಉಜಿರೆ (247.5).

69ಕೆ.ಜಿ.: ತನುಷಾ, ಆಳ್ವಾಸ್ (340), ಲಾವಣ್ಯ ರೈ, ಎಸ್‌ಡಿಎಂ ಉಜಿರೆ (315),  ಋತು, ಅಜ್ಜರಕಾಡ (275).

76ಕೆ.ಜಿ.: ವಿತಾಶ್ರೀ, ಆಳ್ವಾಸ್ (272.5), ವೈಷಿಕಾ ಬಿ.ಎಚ್., ಸರಕಾರಿ ಕಾಏಜು ಕಾರ್‌ಸ್ಟ್ರೀಟ್ ಮಂಗಳೂರು(267.5), ಹಿತಾಶ್ರೀ, ಎಸ್‌ಡಿಎಂ ಉಜಿರೆ (227.5).

84 ಕೆ.ಜಿ.: ವೈಷ್ಣವಿ, ಶ್ರೀವೆಂಕಟರಮಣ ಕಾರ್ಕಳ (260), ಸುಷ್ಮಾ, ಅಜ್ಜರಕಾಡು (242.5), ಧನ್ಯಾ, ಆಳ್ವಾಸ್ (240).

84+ಕೆ.ಜಿ.: ಪ್ರತೀಕ್ಷಾ, ಆಳ್ವಾಸ್ (550), ಪ್ರತಿಕ್ಷಾ, ಅಜ್ಜರಕಾಡು (530), ಸಿತಾರಾ, ಆಳ್ವಾಸ್ (325).

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com