Breaking News

ಉಡುಪಿಯಲ್ಲಿ ಹಲಸಿನ ಮೇಳಕ್ಕೆ ವಿಧ್ಯುಕ್ತ ತೆರೆ: ಮಾರಾಟ ಭರ್ಜರಿ ಜೋರು

 

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಲಸಿನ ಮೇಳವು ಭಾನುವಾರ ತೆರೆ ಕಂಡಿತು.

ಐದು ದಿನಗಳ ಕಾಲ ನಡೆದ ಮೇಳದಲ್ಲಿ ಒಟ್ಟು ಆರು ಟನ್ ಹಲಸಿನ ಹಣ್ಣು ಹಾಗೂ ಹಲಸಿನ ಕಾಯಿ ಮಾರಾಟ ಆಗಿದೆ. ಹಲಸಿನಿಂದ ತಯಾರು ಮಾಡಿದ ವಿವಿಧ ಖಾಧ್ಯಗಳಿಗೆ ಮೇಳದಲ್ಲಿ ಉತ್ತಮ ಬೇಡಿಕೆ ಕೂಡ ಸಿಕ್ಕಿದೆ. ಹಲಸು ಮೇಳದಲ್ಲಿ 2 ಟನ್ ಮಾವು, 700 ಕೆ.ಜಿ. ರಂಬುಟನ್, 500 ಕೆ.ಜಿ. ನೇರಳೆ ಹಣ್ಣುಗಳು ಮಾರಾಟ ಆಗಿದೆ.

  1.  

ಮೇಳದಲ್ಲಿ ಹೆಚ್ಚಾಗಿ ಹಲಸಿನ ವಿಶೇಷ ತಳಿಗಳಿಗೆ ವ್ಯಾಪಕ ಬೇಡಿಕೆ ಕಂಡು ಬಂತು. ಮೇಳಕ್ಕೆ ಬಂದವರು ಸಸಿಗಳನ್ನು ಕೊಂಡ್ಯೊದರು. ಜತೆಗೆ ವರ್ಷದ ಎಲ್ಲ ದಿನಗಳಲ್ಲಿ ಇಳುವರಿ ನೀಡುವ ಹಲಸು ಮತ್ತು ಮಾವು, ರಂಬುಟನ್ ಸಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ಐದು ದಿನಗಳಲ್ಲಿ ಇಲಾಖೆ ಹಾಗೂ ಖಾಸಗಿ ನರ್ಸರಿಗಳಿಂದ 16 ಸಾವಿರ ಸಸಿ ಮಾರಾಟ ಮಾಡಲಾಗಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಐದು ದಿನಗಳ ಕಾಲ ಸಾವಿರಾರು ಸಂಖ್ಯೆಯಲ್ಲಿ ಬಂದ ಜನರು ಹಲಸು, ಹಲಸಿನ ಉತ್ಪನ್ನಗಳನ್ನು ಖರೀದಿಸಿದರು. ವಾರಾಂತ್ಯದ ಎರಡು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com