Breaking News

ಯಲಬುರ್ಗಾ: ತಾಯಿ, ಮಗುವಿನ ಅಪೌಷ್ಟಿಕತೆ ನಿವಾರಣೆಗೆ ವಿನೂತನ ಅಭಿಯಾನ

 

ಕೊಪ್ಪಳ:  ಯಲಬುರ್ಗಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಪೌಷ್ಟಿಕತೆ ನಿವಾರಿಸುವ ಸಲುವಾಗಿ  ಎಡ್ವರ್ಡ್ ಮತ್ತು ಸಿಂಥಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್  ಮಂಗಳೂರಿನ ಯೆನೆಪೋಯದ ಸಿಎಚ್‌ಡಿ ಗ್ರೂಪ್ ಮತ್ತು ಸುಧಾರಿತ ತಾಂತ್ರಿಕ ಸಹಕಾರ ಕೇಂದ್ರದ ಘಟಕದ ಜತೆಗೆ ಸೇರಿ ವಿನೂತನ ಸಾರ್ವಜನಿಕ ಆರೋಗ್ಯ ಪೈಲೆಟ್ ಯೋಜನೆ ಪರಿಚಯಿಸಿದೆ.

ತಾಲ್ಲೂಕಿನಲ್ಲಿ ಈ ಯೋಜನೆಯನ್ನು ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದ ಭಾಗವಾಗಿ  ಜಾರಿಗೆ ತರಕಾಗಿದೆ. ತೀವ್ರ  ಅಪೌಷ್ಟಿಕತೆ ಹೊಂದಿರುವ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಅಪೌಷ್ಟಿಕತೆ ಕಡಿಮೆಗೊಳಿಸುವ ಮತ್ತು ಮಧ್ಯಮ ತೀವ್ರ ಅಪೌಷ್ಟಿಕತೆ ಹೊರೆ ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಕಾರದಿಂದ ಸಿಎಚ್‌ಡಿ ಗ್ರೂಪ್‌ ನುಷ್ಠಾನಗೊಳಿಸಿದೆ. ಅನುದಾನದ ಕೊರತೆಯಿಂದಾಗಿ, ಯೋಜನೆ ಪ್ರಾಯೋಗಿಕವಾಗಿ ಕಾರ್ಯಗತಗೊಳಿಸಲಾಗಿತ್ತು.

ಆಗಸ್ಟ್ 2022 ರಲ್ಲಿ ಅಪೌಷ್ಟಿಕತೆ ಹೊಂದಿದ ಮಕ್ಕಳ ಸಂಖ್ಯೆ 31 ಇತ್ತು. ಮಾರ್ಚ್ 2023 ಕ್ಕೆ ಸಂಖ್ಯೆ 11 ಕ್ಕೆ ಇಳಿದಿದೆ. ಸೆಪ್ಟೆಂಬರ್ 2022 ರಲ್ಲಿ ಮಧ್ಯಮ ತೀವ್ರ ಅಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿದ್ದ 1067 ಮಕ್ಕಳ ಸಂಖ್ಯೆ ಮಾರ್ಚ್ 2023 ರಕ್ಕೆ 329 ಕ್ಕೆ ಇಳಿದಿದೆ.

  1.  

ಅಪೌಷ್ಟಿಕತೆ ಸಮಸ್ಯೆಗೆ ಅಂತ್ಯ ಹಾಡಲು ಈ ರೀತಿಯ ವಿಶಿಷ್ಟ ಮಾದರಿ ಯೋಜನೆಯು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಚಾಲನೆಗೆ ಬಂದಿದೆ. ಐದು ವರ್ಷದೊಳಗಿನ ಮಕ್ಕಳ ಪಾಲಕರು, ಅಂಗನವಾಡಿ ಮೇಲ್ವಿಚಾರಕರು, ಸಮುದಾಯದ ಹಿರಿಯರು, ಚುನಾಯಿತ ಪ್ರತಿನಿಧಿಗಳು, ಧಾರ್ಮಿಕ  ಮುಖಂಡರು ಅಪೌಷ್ಟಿಕತೆ ಹೊರೆ ಕೊನೆಗೊಳಿಸುವ ನಿಟ್ಟಿನಲ್ಲಿಒಗ್ಗೂಡಿದರು.

ಭಾರತದಲ್ಲಿನ ಕರ್ನಾಟಕ ರಾಜ್ಯದ ಯಲಬುರ್ಗಾ ತಾಲೂಕಿನಲ್ಲಿರುವ ಎಲ್ಲಾ ಅಂಗನವಾಡಿಗಳಿಗೆ ಅವರ ಪೋಷಕರು ಮಕ್ಕಳಿಗೆ ಒದಗಿಸಬೇಕಾದ ಕಡಿಮೆ-ವೆಚ್ಚದ ಶಕ್ತಿಯುತ ಆಹಾರದ ವಿಷಯದಲ್ಲಿ ಬೆಂಬಲದ ಮೇಲ್ವಿಚಾರಣೆ ಮತ್ತು ಸಹಕಾರವನ್ನು ನೀಡಲಾಯಿತು.

500 ಮಂದಿ ಯುವ ಸ್ವಯಂ ಸೇವಕರ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಅಂಗನವಾಡಿಗಳಲ್ಲಿ ಮಕ್ಕಳಿಗೆ ಶೇಂಗಾ ಚಿಕ್ಕೆ,  ಬೇಳೆ ಪಾಯಸ, ಚಿತ್ರಾನ್ನ, ಅನ್ನ ಸಾಂಬಾರು, ಮೊಳಕೆ ಕಾಳು, ಗೋಧಿ ಪಾಯಸ, ಉಪ್ಪಿಟ್ಟು ಹೀಗೆ ದಿನ ನಿತ್ಯ ಪೌಷ್ಟಿಕ ಆಹಾರ ನೀಡಲಾಯಿತು. ಜತೆಗೆ ಮನೆಗಳಲ್ಲಿ, ಐದು ವರ್ಷದೊಳಗಿನ ಮಕ್ಕಳಿಗೆ ನೀಡಬೇಕಾದ ಬಲವರ್ಧಿತ ಆಹಾರ ಮಿಶ್ರಣಗಳನ್ನು ತಯಾರಿಸಲು ಪೋಷಕರಿಗೆ ಕಲಿಸಲಾಯಿತು.

ಇಂತಹ ಪರಿಕಲ್ಪನೆಗಳ ಮೂಲಕ ದೇಶದಲ್ಲಿ 2030 ರ ವೇಳೆಗೆ ಅಪೌಷ್ಟಿಕತೆಯನ್ನು ತೊಡೆದು ಹಾಕಬಹುದು. ಆದರೆ ರಾಜಕೀಯ ಇಚ್ಛಾಶಕ್ತಿ,  ಮೇಲ್ವಿಚಾರಣೆ ಮತ್ತು ಪೋಷಕರ ಸಹಕಾರದ ಅಗತ್ಯ ಇದೆ ಎಂದು ಎಡ್ವರ್ಡ್ ಮತ್ತು ಸಿಂಥಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನ ನಿರ್ದೇಶಕ ಡಾ.ಎಡ್ಮಂಡ್‌ ಫರ್ನಾಂಡಿಸ್ ತಿಳಿಸಿದರು.

ಮಗುವಿನ ಆರೋಗ್ಯದ ಬಗ್ಗೆ ತೀವ್ರ ಜಾಗೃತೆ ವಹಿಸುವಂತೆ ಪೋಷಕರಿಗೆ ತಿಳಿವಳಿಕೆ ನೀಡಲಾಗುತ್ತದೆ. ಮಗುವಿನ ಅತ್ಯುತ್ತಮ ಬೆಳವಣಿಗೆ ಖಚಿತಪಡಿಸಿಕೊಳ್ಳಲು ಸ್ಥಳೀಯವಾಗಿ ರಚಿಸಲಾದ ಮೇಲ್ವಿಚಾರಕ ಪಂಗಡಗಳಿಗೆ, ಪರೀಕ್ಷೆಯ ಮಾದರಿ ಉನ್ನತ ಮಟ್ಟದ ಸಾಮರ್ಥ್ಯದೊಂದಿಗೆ ಅದ್ಭುತ ಫಲಿತಾಂಶ ನೀಡಿರುವುದರಿಂದ ಅಪೌಷ್ಟಿಕತೆ ಕೊನೆಗೊಳಿಸುವ ಗಂಭೀರ ಕಾರ್ಯಕ್ರಮಗಳ ಅನುಷ್ಟಾನಗೊಳಿಸುವ ಯಾವುದೇ ರಾಜ್ಯ ಸರ್ಕಾರಕ್ಕೆ ತಮ್ಮ ನಿರ್ದೇಶನಗಳ ಪ್ರಕಾರ ಬೆಂಬಲವನ್ನು ನೀಡಲಾಗುತ್ತದೆ ಎಂದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com