Breaking News

ಅಕ್ಕಮಹಾದೇವಿ ಮಹಿಳಾ ವಿವಿಗೂ ತಪ್ಪದ ಕರೆಂಟ್ ಶಾಕ್

 

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೂ ಕರೆಂಟ್ ಶಾಕ್ ತಗುಲಿದೆ. ಈ ಬಾರಿ 5 ಲಕ್ಷ ರೂಪಾಯಿಗೂ ಅಧಿಕ ಬಿಲ್ ಬಂದಿದ್ದು, ಮೇ ತಿಂಗಳಿನ ವಿದ್ಯುತ್ ಬಿಲ್ ನೋಡಿ ಕುಲಪತಿಯೇ ಶಾಕ್ ಆಗಿರುವ ಘಟನೆ ನಡೆದಿದೆ.

  1.  

ಮೇ ತಿಂಗಳ ಬಿಲ್ 5,06,302 ಲಕ್ಷ ರೂಪಾಯಿ ಬಿಲ್ ಬಂದಿದೆ. ಇನ್ನೂ ವಿವಿ ಆವರಣದಲ್ಲಿ ಸೋಲಾರ್ ವಿದ್ಯುತ್ ಸೌಲಭ್ಯವಿದ್ದು, ಇದನ್ನೇ ಗರಿಷ್ಠ ಮಟ್ಟದಲ್ಲಿ ಬಳಕೆ ಮಾಡಿಕೊಳ್ಳುತ್ತೇವೆ. ಆದರೂ ಮೇ ತಿಂಗಳಿನಲ್ಲಿ ಹೆಚ್ಚಿನ ವಿದ್ಯುತ್ ಬಿಲ್ ಬಂದಿದ್ದು ಆಶ್ಚರ್ಯ ಉಂಟು ಮಾಡಿದೆ. ಈ ಬಗ್ಗೆ ಇಲಾಖೆಯ ಗಮನಕ್ಕೆ ತರುವುದಾಗಿ ವಿವಿ ಅಧಿಕಾರಿಗಳು ತಿಳಿಸಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com