
ಮಂಗಳೂರು: ಮಂಗಳೂರಿನ ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ ( ಸಿಎಫ್ ಎಎಲ್) ನೀಟ್ –2023 ಅಮೋಘ ಫಲಿತಾಂಶವನ್ನು ಸಾಧನೆ ಮಾಡಿದೆ. ಸಿಎಫ್ ಎಎಲ್ ಕೇಂದ್ರದ ವಿದ್ಯಾರ್ಥಿಗಳ ಉತ್ತಮ ಸಾಧನೆ ಮಾಡಿದ್ದು, ಶೇ 92 ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಅರ್ಹತೆ ಗಿಟ್ಟಿಸಿಕೊಂಡಿರುವುದು ಹೆಮ್ಮೆ ತಂದಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ನೀಟ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ದಾಖಲಿಸಿ ಉತ್ತಮ ರ‍್ಯಾಂಕ್ ಗಳನ್ನು ಗಳಿಸಿದ್ದಾರೆ. ಸಿಎಫ್ ಎಎಲ್ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಸದಾ ಬದ್ಧತೆಯಿಂದ ಕೂಡಿದೆ ಎಂದು ಸಿಎಫ್ ಎಎಲ್ ತಿಳಿಸಿದೆ.
ಉತ್ತಮ ರ‍್ಯಾಂಕ್ ದಾಖಲು ಮಾಡಿರುವ ಬಿ. ಶ್ರೇಯಸ್ ಶೆಣೈ, 700 ಅಂಕ ಗಳಿಸಿದ್ದಾರೆ. ಈ ಅತ್ಯುತ್ತಮ ಸಾಧನೆಯು ಶ್ರೇಯಸ್ ಶೆಣೈಗೆ 326 ರ ಅಖಿಲ ಭಾರತ ಶ್ರೇಣಿ (ಎಐಆರ್) ಗಳಿಸಿದ್ದು, ಅಸಾಧಾರಣ ಸಾಧನೆಗಾಗಿ ಶ್ರೇಯಸ್ ಶೆಣೈಗೆ ಸಿಎಫ್ ಎಎಲ್ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

ನೀಟ್ 2023 ರಲ್ಲಿ ಸಿಎಫ್ ಎಎಲ್ ವಿದ್ಯಾರ್ಥಿಗಳು ಉತ್ತಮ ರ‍್ಯಾಂಕ್ ಮತ್ತು ಅಂಕ ಗಳಿಸುವ ಮೂಲಕ ಹೊಸ ಶೈಕ್ಷಣಿಕ ಬುನಾದಿಯೊಂದನ್ನು ಕಟ್ಟಿಕೊಳ್ಳುತ್ತಿರುವುದು ಸಾಕ್ಷಿ ಆಗಿದೆ. ದಿಯಾ ಭಟ್ ಎ 670 ಅಂಕ ಗಳಿಸುವ ಮೂಲಕ 2772 ರ ಅಖಿಲ ಭಾರತ ಶ್ರೇಣಿ ದಾಖಲು ಮಾಡಿದ್ದಾರೆ. ಆದಿತ್ಯ ರವೀಂದ್ರ ಅವರು 646 ಅಂಕದೊಂದಿಗೆ 7930 ಎಐಆರ್ ಅನ್ನು ಪಡೆದು ಕೊಂಡಿದ್ದಾರೆ. ಆರ್ ರಿಕಿ ರೋಜರ್ 634 ಅಂಕದೊಂದಿಗೆ 12326, ಅರ್ಜುನ್ ಅನಿಲ್ ಬೈಪಡಿತ್ತಾಯ 610 ಅಂಕ 23749, ಡಿಯೋನ್ ಅರ್ನಾಲ್ಡ್ ಪತ್ರಾವೊ 601 ಅಂಕ ಗಳಿಸಿ 28174 ಎಐಆರ್ ಸಾಧಿಸಿದ್ದಾರೆ. ಅವರ ಕಠಿಣ ಪರಿಶ್ರಮ ಮತ್ತು ಸಾಧನೆಗಾಗಿ ಈ ಅತ್ತ್ಯುತ್ತಮ ವಿದ್ಯಾರ್ಥಿಗಳ ಬಗ್ಗೆ ಸಿಎಫ್ ಎಎಲ್ ಹೆಮ್ಮೆ ಪಡುತ್ತದೆ ಎಂದು ತಿಳಿಸಿದ್ದಾರೆ.
500 ಕ್ಕಿಂತ ಹೆಚ್ಚು ಅಂಕ ಗಳಿಸಿದ ಇಶಿತಾ ಕೃಷ್ಣರಾಜ, ವರ್ಷಿಣಿ ಮಯ್ಯ ಎ, ಅನಘಾ ರಘುನಂದನ್, ಮುಹಮ್ಮದ್ ನಿಹಾದ್ ಕೆ, ದಿಶಾ ಎಸ್ ಕಟೀಲ್ ಮತ್ತು ಅಂಕಿತ್ ಕಿಣಿ ಅವರ ಸಾಧನೆ ಮಾಡಿರುವುದು ಸಿಎಫ್ ಎಎಲ್ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಕಾರ್ಯಕ್ರಮ ಸಂಯೋಜಕ ವಿಜಯ್ ಮೊರಾಸ್ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಕಲಿಕೆಗೆ ಪ್ರಾಥಮಿಕ ಗಮನವನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವುದು ಮತ್ತು ಅವರ ಶ್ರೇಷ್ಠತೆ ಅನ್ವೇಷಣೆಯನ್ನು ಉತ್ತೇಜಿಸುವುದು. ಗಮನಾರ್ಹ ಯಶಸ್ಸನ್ನು ಸಾಧಿಸಿದ ಅಸಾಧಾರಣ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹಿಸಲು ಸಿಎಫ್ ಎಎಲ್ ಸದಾ ಮುಂಚೂಣಿಯಲ್ಲಿದೆ. ನೀಟ್ ನಲ್ಲಿ ನಮ್ಮ ಕೇಂದ್ರದ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಕಲಿಕೆಗೆ ಸದಾ ಅಗತ್ಯ ಕೌಶಲ್ಯ ಮತ್ತು ಜ್ಞಾನದ ಜತೆಗೆ ಸಜ್ಜುಗೊಳಿಸುವುದಕ್ಕೆ ಸಿಎಫ್ ಎಎಲ್ ನ ಅಧ್ಯಾಪಕ ವರ್ಗವು ಸ್ಪರ್ಧಾತ್ಮಕ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ಉತ್ಕೃಷ್ಟ ಮಟ್ಟಕ್ಕೆ ಕೊಂಡೊಯ್ಯಲು ಅಗತ್ಯ ಇರುವ ಬದ್ಧತೆ ಮತ್ತು ಪ್ರಯತ್ನವು ಸದಾ ನಡೆಯುತ್ತದೆ ಎಂದು ತಿಳಿಸಿದರು.
2009 ರಲ್ಲಿ ಸ್ಥಾಪಿಪನೆ ಆದ ಸಿಎಫ್ ಎಎಲ್ ಒಂದು ದಶಕದಿಂದ ಶಿಕ್ಷಣ ವಲಯದಲ್ಲಿ ಗಟ್ಟಿಯಾದ ಪಟ್ಟಿಯಚ್ಚು ಮೂಡಿಸಿ ಹೆಸರು ಮಾಡಿದೆ. ವಿಷಯ ಜ್ಞಾನ, ಕಠಿಣ ಅಭ್ಯಾಸ ಮತ್ತು ಕಾರ್ಯತಂತ್ರ, ಪರೀಕ್ಷೆ ತಯಾರಿಕೆ ತಂತ್ರಗಳನ್ನು ಸಂಯೋಜಿಸುವ ವಿಶಿಷ್ಟವಾಗಿ ಸಂಯೋಜನೆ ಮಾಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಸಹಕಾರಿ ಆಗಿದೆ. ಅನುಭವಿ ಅಧ್ಯಾಪಕರು ಆಯಾ ಕ್ಷೇತ್ರಗಳಲ್ಲಿ ಪರಿಣಿತರು, ಪ್ರತಿ ವಿದ್ಯಾರ್ಥಿಗೆ ವೈಯಕ್ತಿಕ ಗಮನ ನೀಡುವ ಮೂಲಕ ಸ್ಪರ್ಧಾತ್ಮ ಯುಗಕ್ಕೆ ಬೇಕಾದ ಭರವಸೆ ಕಟ್ಟಿಕೊಡುತ್ತಿದ್ದಾರೆ. ಇದಕ್ಕೆ ನಮ್ಮ ತಂಡ ಸದಾ ಸಿದ್ದವಾಗಿದೆ. ಮಂಗಳೂರಿನಲ್ಲಿ ಸಿಎಫ್ ಎಎಲ್ ಅತ್ಯುತ್ತಮ ಇಂಟಿಗ್ರೇಟೆಡ್ ಕಾಲೇಜು ಎಂದು ಹೆಸರು ದಾಖಲಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ ಮೈನ್ ಅಡ್ವಾನ್ಸ್, ಮತ್ತು ಒಲಂಪಿಯಾಡ್ಸ್ (ಬಯೋಲಜಿ ಮತ್ತು ಗಣಿತ) ನೀಟ್, ಎನ್ ಟಿಎಸ್ ಇ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಬಯಸುವ ವಿದ್ಯಾರ್ಥಿಗಳಿಗೆ ಆದ್ಯತೆಯ ತಾಣ ಆಗಿದೆ ಎಂದು ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ ನ ಗೌರೀಶ್ ರಾಜ್ ತಿಳಿಸಿದ್ದಾರೆ.
ಮಾಹತಿಗೆ ಸಿಎಫ್ ಎಎಲ್ ಬಿಜೈ ಕಾಪಿಕಾಡ್ ರಸ್ತೆ ಮಂಗಳೂರು, ಮೊಬೈಲ್ 99005 20233, www.cfalindia.com ಸಂಪರ್ಕಿಸಬಹುದು.


