
ಮಂಗಳೂರು: ಇಲ್ಲಿನ ಶಾರದಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಾರೆ. ಒಟ್ಟು 121 ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದು 112 ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ ಎಂದು ಕಾಲೇಜು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿನೋದ್ ಗಾಣಗಿ – 655, ಕನ್ನಿಕಾ ಕೆ.ಜೆ- 614, ಆರಾಧ್ಯ ಶೆಟ್ಟಿ -606, ಆಲೊಕ್-605, ರವಿತೇಜ್ ಗೌಡ- 576, ಅವನಿ ಎಸ್. ಭಟ್ -543, ಇಶಿತಾ ವಿ.ಆರ್-523, ಅಕ್ಷಿತಾ ಅಜಿತ್ – 486, ಸಿಂಚನ ಆರ್ – 477, ಮಹಿತ್- 446, ಶ್ರವಣ್ ಕುಮಾರ್ – 420, ಅಂಕ ಪಡೆದಿರುತ್ತಾರೆ ಎಂದು ತಿಳಿಸಿದ್ದಾರೆ.

ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. .ಎಂ.ಬಿ.ಪುರಾಣಿಕ್ ಮತ್ತು ಶಾರದಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.


