
ಮಂಗಳೂರು: ಸರಕಾರದ ಉಚಿತ ಬಸ್ ಪ್ರಯಾಣದ ಯೋಜನೆಯಿಂದಾಗಿ ಮಹಿಳೆಯರ ಬಸ್ ಪ್ರಯಾಣ ಜೋರಾಗಿಯೇ ಇದೆ. ಪ್ರವಾಸ ಮಾಡುವ ನೆಪದಲ್ಲಿ ಮಹಿಳೆಯುರು ಸರಕಾರಿ ಬಸ್ ಗಳತ್ತ ಮುಗಿಬೀಳುತ್ತಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ಮಲೆನಾಡು ಕಡೆಗಳಿಂದಲೂ ಕರಾವಳಿ ಭಾಗದ ಧರ್ಮಸ್ಥಳ ಹಾಗೂ ಕುಕ್ಕೆಗೆ ದಾಂಗುಡಿ ಇಡುತ್ತಿದ್ದಾರೆ.
ಇದರ ಜತೆಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಣಗಾನವೂ ಮಹಿಳೆಯರಿಂದ ಜೋರಾಗಿ ನಡೆಯುತ್ತಿದೆ. ಮಹಿಳೆಯರು ಮಾತಿನ ಮಧ್ಯ ಸಿದ್ದರಾಮಯ್ಯ ಜಪ ಮಾಡುವ ಸದ್ಗು ಕೇಳಿ ಬರುತ್ತದೆ.
ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಕ್ಷೇತ್ರಗಳತ್ತ ಮಹಿಳೆಯರ ದಂಡು ಹರಿದು ಬರುತ್ತಿದೆ. ಎಲ್ಲ ಬಸ್ ಗಳಲ್ಲಿ ಮಹಿಳೆಯರದ್ದೆ ಪಾರುಪತ್ಯ. ಕೆಎಸ್ ಆರ್ ಟಿಸಿ ಬಸ್ ಬಸ್ ಫುಲ್ ರಶ್. ಗ್ರಾಮೀಣ ಭಾಗದಲ್ಲಿಯೂ ಉಚಿತ ಪ್ರಯಾಣಕ್ಕೆ ಬಾರಿ ಡಿಮ್ಯಾಂಡ್ ಬಂದಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಬಸ್ ಫುಲ್ ರಶ್ ಆಗುತತ್ತಿವೆ. ಉಚಿತ ಪ್ರಯಾಣ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತ ಖಾಸಗಿ ಬಸ್ ಗಳತ್ತ ಯಾರು ಸುಳಿಯದ ಸ್ಥಿತಿ ಬಂದಿದೆ.

ಎಲ್ಲ ಬಸ್ ಗಳಲ್ಲಿಯೂ ಪ್ರವಾಸಿ ಮಹಿಳೆಯರದೇ ಕಾರೂ ಬಾರೂ ಸ್ಥಳೀಯ ಸಾಮಾನ್ಯ ಜನರಿಗೆ ಬಸ್ ಗಳಲ್ಲಿ ಪ್ರಯಾಣ ಮಾಡದ ಸ್ಥಿತಿ ಎದುರಾಗಿದೆ. ಉತ್ತರ ಕರ್ನಾಟಕ ಭಾಗದಿಂದ ಕರಾವಳಿಗೆ ಬರುವುದಕ್ಕೆ ಸಾಮಾನ್ಯವಾಗಿ ಸಾವಿರಾರು ರೂಪಾಯಿ ಬೇಕಿದ್ದರೆ, ಈಗ ಉಚಿತ ಪ್ರಯಾಣದಿಂದಾಗಿ ಹಳ್ಳಿ ಮಹಿಳೆಯರು ಉಚಿತ ಪ್ರಯಾಣಕ್ಕೆ ಆಕರ್ಷಿತರಾಗಿದ್ದಾರೆ. ಮಕ್ಕಳು, ಇಡೀ ಕುಟುಂಬದ ಜತೆಗೆ ಧಾರ್ಮಿಕ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ.
ಜನರ ದಟ್ಟಣೆ ಹೆಚ್ಚಾಗಿರುವುದರಿಂದ ಪುಣ್ಯ ಕ್ಷೇತ್ರಗಳಲ್ಲಿ ಕೂಡ ಫುಲ್ ರಶ್ ಆಗಿವೆ. ಇನ್ನೂ ವ್ಯಾಪಾರ ಕೂಡ ಜೋರಾಗಿವೆ. ಪರಿಣಾಮ ವ್ಯಾಪಾರಸ್ಥರ ಮುಖಗಳಲ್ಲಿ ಮಂದಹಾಸ ಉಂಟಾಗುತ್ತಿದೆ. ಕುಕ್ಕೆ, ಧರ್ಮಸ್ಥಳಗಳಲ್ಲಿ ವಾರಾಂತ್ಯಗಳಲ್ಲಿ ಜನರ ಸಂಖ್ಯೆ ಹೆಚ್ಚಾಗಿರುತ್ತಿತ್ತು, ಆದರೆ ಈಗ ಈಗ ವಾರದ ನಡುವೆಯೂ ಜನ ಬರಲಾರಂಭಿಸಿದ್ದು ಜನರು ಉಚಿತ ಬಸ್ ನೆಪದಲ್ಲಿ ಎಲ್ಲೆಂದರಲ್ಲಿ ಪ್ರವಾಸ ಹೊರಟಿದ್ದಾರೆ.


