Breaking News

ಹೀಗಿದೆ ನಿಮ್ಮ ಸೋಮವಾರದ ರಾಶಿಫಲ

 

ವೃಷಭ ರಾಶಿಯವರು ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭವನ್ನು ಹೊಂದಲಿದ್ದೀರಿ, ಮಿಥುನ ರಾಶಿಯವರು ಕಚೇರಿಯಲ್ಲಿ ನಿಮ್ಮ ಪ್ರತಿಸ್ಪರ್ಧಿ ನಿಮ್ಮ ಎದುರು ಸೋಲುವ ಸಾಧ್ಯತೆ ಹೆಚ್ಚಿದೆ.  

ವೃಷಭ: ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭವನ್ನು ಹೊಂದಲಿದ್ದೀರಿ. ಇಂದು ವಿದ್ಯಾರ್ಥಿಗಳಿಗೂ ಅಂದುಕೊಂಡ ಗುರಿ ಸಾಧಿಸಲು ಸಾಧ್ಯವಿದೆ.

ಕುಂಭ : ನಿಮ್ಮ ದುಶ್ಚಟಗಳಿಂದ ಸಂಗಾತಿಗೆ ನಿಮ್ಮ ಮೇಲೆ ಅಸಹ್ಯ ಮೂಡಲಿದೆ. ಇದು ನಿಮ್ಮ ದಾಂಪತ್ಯ ಜೀವನಕ್ಕೆ ಕಷ್ಟ ತರಲಿದೆ.

ಮೀನ : ಮನೆಯಲ್ಲಿಯೇ ನಿಮ್ಮದೇ ಆದ ಸಣ್ಣ ಉದ್ಯಮ ಆರಂಭಿಸುವ ಬಗ್ಗೆ ಯೋಚಿಸಲಿದ್ದೀರಿ. ದಿನಚರಿಯ ಏರುಪೇರಿನಿಂದಾಗಿ ಆರೋಗ್ಯದಲ್ಲಿ ಸಮಸ್ಯೆ ಕಂಡು ಬರಲಿದೆ

ಮೇಷ: ನೀವು ತೆಗೆದುಕೊಂಡ ಕೆಲವು ನಿರ್ಧಾರಗಳನ್ನು ಪರಾಮರ್ಶಿಸುವ ದಿನ ಸಮೀಪಿಸುತ್ತಿದೆ. ಕಳ್ಳತನದಂತಹ ಕೃತ್ಯಕ್ಕೆ ನೀವು ಬಲಿಯಾಗುವ ಸಾಧ್ಯತೆ ಹೆಚ್ಚಿದೆ.

ಮಿಥುನ: ಕಚೇರಿಯಲ್ಲಿ ನಿಮ್ಮ ಪ್ರತಿಸ್ಪರ್ಧಿ ನಿಮ್ಮ ಎದುರು ಸೋಲುವ ಸಾಧ್ಯತೆ ಹೆಚ್ಚಿದೆ. ಇದರಿಂದ ಕಚೇರಿಯಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಲಿದೆ. ಹೊಸ ಜಾಗ ಖರೀದಿ ಬಗ್ಗೆ ಯೋಚಿಸಲಿದ್ದೀರಿ.

ಕಟಕ : ಅಡಮಾನವಿಟ್ಟ ಚಿನ್ನವನ್ನು ಬಿಡುಗಡೆ ಮಾಡುವ ಬಗ್ಗೆ ಯೋಚಿಸಲಿದ್ದೀರಿ. ಸ್ನೇಹದಲ್ಲಿ ಎಂದಿಗೂ ನಿಮ್ಮ ಪ್ರಾಬಲ್ಯ ಮೆರೆಯಲು ಹೋಗಬೇಡಿ. ಪರಸ್ಪರ ಗೌರವ ಇದ್ದರಷ್ಟೇ ಸಂಬಂಧಗಳು ಚಂದ ಎಂಬುದು ನೆನಪಿನಲ್ಲಿ ಇರಲಿ.

  1.  

ಸಿಂಹ : ಯಾರ ಬಗ್ಗೆಯೂ ಪೂರ್ವಾಪರ ವಿಚಾರಿಸಿಕೊಳ್ಳದೇ ಸಲುಗೆ ಬೆಳೆಸುವುದು ಒಳ್ಳೆಯದಲ್ಲ. ಕೆಲವೊಂದು ವಿಚಾರದಲ್ಲಿ ಮನೆಯ ಹಿರಿಯರ ನಡವಳಿಕೆ ನಿಮ್ಮ ಕೋಪಕ್ಕೆ ಕಾರಣವಾಗಲಿದೆ.

ಕನ್ಯಾ : ಇಂದಿನ ದಿನವು ನಿಮಗೆ ಮಿಶ್ರಫಲವನ್ನು ನೀಡಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಸಂಜೆ ಮೇಲೆ ಚೇತರಿಕೆ ಕಂಡು ಬರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ನೀವೇ ಮುಂದಾಳತ್ವ ವಹಿಸಲಿದ್ದೀರಿ.

ತುಲಾ : ಇಂದು ನೀವು ಸಂಗಾತಿಗೆ ನಿಮ್ಮ ಸಮಯವನ್ನು ಮೀಸಲಿಡಲಿದ್ದೀರಿ. ಇತರರು ನಿಮಗೆ ಗೌರವ ಕೊಡಬೇಕು ಎಂದರೆ ಮೊದಲು ನೀವು ಅವರಿಗೆ ಗೌರವ ಕೊಡಬೇಕು ಎಂಬುದು ಗಮನದಲ್ಲಿ ಇರಲಿ.

ವೃಶ್ಚಿಕ: ಸಾಲಗಳನ್ನು ನಿಮ್ಮ ಬುದ್ಧಿವಂತಿಕೆಯಿಂದ ಬದಲಾಯಿಸಿಕೊಳ್ಳಲಿದ್ದೀರಿ. ಕೌಟುಂಬಿಕ ಜೀವನದಲ್ಲಿ ಯಾವುದೇ ತೊಂದರೆಯಿಲ್ಲ.

ಧನು : ನೀವು ಕಳೆದ ಕೆಲವು ದಿನಗಳ ಕಷ್ಟಪಟ್ಟು ಮಾಡಿದ್ದ ಕೆಲಸಕ್ಕೆ ಇಂದು ಫಲ ಸಿಗಲಿದೆ. ಈ ಫಲವು ನಿಮ್ಮ ನಿರೀಕ್ಷೆಗಿಂತಲೂ ಹೆಚ್ಚಾಗಿ ಇರಲಿದೆ.

ಮಕರ : ಸರ್ಕಾರಿ ಕೆಲಸದ ನಿಮಿತ್ತ ಕೋರ್ಟ್ ಕಚೇರಿ ಅಲೆಯಬೇಕಾಗಿ ಬರಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಯಾರನ್ನೂ ನಂಬಬೇಡಿ. ಪಾಲುದಾರಿಕೆ ವ್ಯವಹಾರ ನಿಮಗೆ ಆಗಿ ಬರುವುದಿಲ್ಲ. ದಾಂಪತ್ಯದಲ್ಲಿ ಸಾಮರಸ್ಯ ಇರಲಿದೆ.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com