Breaking News

ಸಸಿಹಿತ್ಲು ಬೀಚ್ ನಲ್ಲಿ ಸರ್ಫಿಂಗ್ ಕಲರವ: ದೇಶದ 75 ಕ್ಕೂ ಸ್ಪರ್ಧಿಗಳು

 

ಮಂಗಳೂರು (ಮೂಲ್ಕಿ): ಸಸಿಹಿತ್ಲು ಬೀಚ್ ನಲ್ಲಿ ಸರ್ಫಿಂಗ್ ನಡೆಯುತ್ತಿರುವುದು  ಹೆಮ್ಮೆಯ ವಿಷಯ, ರಾಜ್ಯದಲ್ಲಿಯೇ ಸಸಿಹಿತ್ಲು ಬೀಚ್ ಸರ್ಫಿಂಗ್ ಗೆ ಹೇಳಿ ಮಾಡಿಸಿದ ಜಾಗ. ಸರ್ಫಿಂಗ್ ಪ್ರಾರಂಭ ಆಗಿದ್ದು ಮಂಗಳೂರಿನಲ್ಲಿಯೇ, ಇದು ನಮಗೆ ಹೆಮ್ಮೆ, ಒಲಪಿಂಕ್ಸ್  ನಲ್ಲೂ ಸರ್ಫಿಂಗ್ ಸೇರ್ಪಡೆಯ ಪ್ರಯತ್ನ ನಡೆಯುತಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಾಣಿಕ್ಯ ಎನ್ ಹೇಳಿದರು.

ಇಲ್ಲಿನ ಮಂತ್ರ ಸರ್ಫ್ ಕ್ಲಬ್ ವತಿಯಿಂದ ಸಸಿಹಿತ್ಲಿನಲ್ಲಿ ನಡೆದ  ರಾಷ್ಟ್ರೀಯ ಸರ್ಫಿಂಗ್ 4ನೇ ಆವೃತ್ತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜೂನ್ 1ರಿಂದ ಜೂನ್ 3 ರವರಿಗೆ ನಡೆವ ಸರ್ಫಿಂಗ್ ಚಾಂಪಿಯನ್ ಷಿಪ್ ಬೆಳಿಗ್ಗೆ 7ಗಂಟೆಯಿಂದ ಆರಂಭಗೊಂಡು ಮಧ್ಯಾಹ್ನ 12.30ರ ವರೆಗೆ ನಡೆಯಲಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಪ್ರಾಯೋಜಿತ ವಿವಿಧ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ಪರ್ಧೆ ನಡೆಯಲಿದ್ದು ರಾಷ್ಟ್ರಮಟ್ಟದ ಸ್ಪರ್ಧಿಗಳುಗಳು ಭಾಗವಹಿಸಿದ್ದಾರೆ.

  1.  

30 ಕ್ಕೂ ಅಧಿಕ ಸರ್ಫ್ ಕ್ಲಬ್ ಗಳಿಂದ 75 ಕ್ಕೂ ಅಧಿಕ ಸ್ಪರ್ಧಿಗಳುಗಳ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಮುಂಗಾರು ಆಗಮನದ ಮೊದಲು ಬೀಸುವ ಗಾಳಿಯಲ್ಲಿ ಏಳುವ ಅಲೆಗಳೇ ಸರ್ಫಿಂಗ್ ಚಾಂಪಿಯನ್ ಷಿಪ್ ಗೆ ಪ್ರತಿಕೂಲವಾಗಲಿದೆ ಎಂದು ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಉಪಾಧ್ಯಕ್ಷ ರಾಮ ಮೋಹನ್ ಪರಾಂಜಪೆ ಹೇಳಿದರು.

16 ವರ್ಷದ ಒಳಗಿನ ಬಾಲಕ, ಬಾಲಿಕೆಯರ ಎರಡು ವಿಭಾಗ ಮತ್ತು ಓಪನ್ ವಿಭಾಗದಲ್ಲಿ ಪುರುಷರು ಹಾಗೂ ಮಹಿಳೆಯರು ಪ್ರತ್ಯೇಕವಾಗಿ ಪಾಲ್ಗೊಳ್ಳಲಿದ್ದಾರೆ. ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಕಾಯ್ಡುಕೊಂಡ ಕ್ರೀಡಾಪಟುಗಳಿಗೆ ಚೆನೈನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸುವ ಅವಕಾಶ ಲಭಿಸಲಿದೆ.ಮುಂದಿನ ಇಂಡಿಯನ್ ಓಪನ್ ಸ್ಪರ್ಧೆಗಳು ಪುದುಚೇರಿ, ಚೆನೈ ಮಹಾಬಲಿಪುರಂ ನಲ್ಲಿ ನಡೆಯಲಿದೆ ಎಂದು ಹೇಳಿದರು.

ಉದ್ಯಮಿ ಧನಂಜಯ ಶೆಟ್ಟಿ, ಕೋಶಾಧಿಕಾರಿ ನವಾಜ್ ಜಬ್ಬರ್, ಸರ್ಫಿಂಗ್ ಸ್ವಾಮಿ ಫೌಂಡೇಶನ್ ನಿರ್ದೇಶಕ ಗೌರವ್ ಹೆಗ್ಡೆ, ಉದ್ಯಮಿ ಉದಯ ಶೆಟ್ಟಿ ಪಡುಬಿದ್ರೆ,ನವೀನ್ ಶೆಟ್ಟಿ ಮುಂಬೈ ಇದ್ದರು.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com