Breaking News

ನೂತನ ಸಂಸತ್​ ಭವನಕ್ಕೆ ಚಾಲನೆ, ಮೋದಿ ಪರ ಜಯಘೋಷಣೆ

 

ನವದೆಹಲಿ: ಹೋಮ, ಹವನ ಪೂಜೆಯೊಂದಿಗೆ ನೂತನ ಸಂಸತ್​ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಭಾನುವಾರ ಚಾಲನೆ ನೀಡಿದ್ದಾರೆ.

ಪೂಜಾ ವಿಧಿಗಳನ್ನು ನೆರವೇರಿಸುವ ವೇಳೆ ಪ್ರಧಾನಿ ಮೋದಿ ಜತೆಗೆ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಅವರು ಇದ್ದಾರೆ. ಸುಮಾರು 1 ಗಂಟೆಯವರೆಗೂ ಪೂಜಾ ವಿಧಗಳು ನಡೆದವು.

ಕಾರ್ಯಕ್ರಮಕ್ಕೆ 60 ಧಾರ್ಮಿಕ ಮುಖ್ಯಸ್ಥರನ್ನು ಕರೆಸಲಾಗಿದ್ದು, ಅವರಲ್ಲಿ ಹಲವರು ತಮಿಳುನಾಡಿನವರು ಇದ್ದಾರೆ. ಅಧಿಕಾರದ ಹಸ್ತಾಂತರಕ್ಕೆ ಸೆಂಗೋಲ್ ಅಥವಾ ರಾಜ ದಂಡವನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ತಿರುವವಾಡುತುರೈ ಅಧೀನಮ್​ ಅಥವಾ ಮಠಕ್ಕೆ ನೀಡಲಾಗಿತ್ತು. ಈ ಅಧೀಮನ್​ 400 ವರ್ಷಗಳಷ್ಟು ಹಳೆಯದಾಗಿದೆ.

  1.  

ಹೊಸ ಸಂಸತ್ ಭವನದ ಲೋಕಾರ್ಪಣೆ ಕಾರ್ಯಕ್ರಮದ ಧಾರ್ವಿುಕ ಕಾರ್ಯಕ್ರಮದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಋತ್ವಿಜರಾದ ಟಿ.ವಿ. ಸೀತಾರಾಮ ಶರ್ಮಾ, ಶ್ರೀರಾಮ ಶರ್ಮಾ, ಲಕ್ಷ್ಮೀಶ ತಂತ್ರಿ ಹಾಗೂ ನವದೆಹಲಿ ಶಾಖಾ ಮಠದ ನಾಗರಾಜ ಅಡಿಗ, ಋಷ್ಯಶೃಂಗ ಭಟ್ ಪಾಲ್ಗೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್​ ಭವನವನ್ನು ಉದ್ಘಾಟಿಸಿ ಒಳಗೆ  ಪ್ರವೇಶಿಸುತ್ತಿದ್ದಂತೆ ಸದನದ ಒಳಗಿದ್ದ ಸದಸ್ಯರು ಎದ್ದು ನಿಂತು ಮೋದಿ ಅವರಿಗೆ ಚಪ್ಪಾಳೆ ತಟ್ಟುವ ಮೂಲಕ ಗೌರವ ಸೂಚಿಸಿದರು. ಅಲ್ಲದೆ ಮೋದಿ ಮೋದಿ ಎಂಬ ಘೋಷಣೆಗಳ ಮೂಲಕ ಭವ್ಯವಾಗಿ ಸ್ವಾಗತಿಸಿದರು. 

ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಸೇರಿದಂತೆ ಅನೇಕ ಸದಸ್ಯರು ಎದ್ದು ನಿಂತು ಪ್ರಧಾನಿ ಮೋದಿ ಅವರಿಗೆ ಚಪ್ಪಾಳೆ ತಟ್ಟುವ ಮೂಲಕ ಗೌರವ ನೀಡಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com