Breaking News

31, 1 ರಂದು ಎಸ್ ಪಿಎಲ್ ಕರಾವಳಿ ಕೋಯಲ್ ಚಾಂಪಿಯನ್ಸ್: ಶ್ರೀನಿವಾಸ್

 

ಮಂಗಳೂರು: ಅರುಣ್ಯ ಫೌಂಡೇಶನ್ ಮತ್ತು ದಾಸ್ ಕುಡ್ಲ ಇವೆಂಟ್ಸ್ ಸಹಯೋಗದಲ್ಲಿ ಕರಾವಳಿ ಕರ್ನಾಟಕ ಮೆಗಾ ಮ್ಯೂಸಿಕಲ್ ರಿಯಾಲಿಟಿ ಶೋ, ಸಿಂಗರ್ಸ್ ಪ್ರೀಮಿಯರ್ ಲೀಗ್ ಕರಾವಳಿ ಕೋಯಲ್ ಚಾಂಪಿಯನ್ 2023 ಕಾರ್ಯಕ್ರಮವು ಇದೇ 31 ಹಾಗೂ ಜೂನ್ 1 ರಂದು ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ಅರುಣ್ಯ ಫೌಂಡೇಶನ್ ಕಾರ್ಯದರ್ಶಿ ಶ್ರೀನಿವಾಸ ಪೆಜತ್ತಾಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

31ರಂದು ಮೊದಲ ಸುತ್ತಿನ ಸಂಗೀತ ಕಾರ್ಯಕ್ರಮ, ಜೂನ್ 1 ರಂದು ಬೆಳಿಗ್ಗೆ 8.30 ಕ್ಕೆ ಸೆಮಿ ಫೈನಲ್, ಮಧ್ಯಾಹ್ನ 12. 30 ಕ್ಕೆ ಅಂತಿಮ ಸುತ್ತು ಹಾಗೂ ಸಂಜೆ ಪ್ರಶಸ್ತಿ ಪ್ರದಾನ ಮತ್ತು ಬಹುಮಾನ ವಿತರಣಾ ಸಮಾರಂಭ, ‘ಪಂಚಭಾಷಾ ರಸಮಂಜರಿ’ ನಡೆಯಲಿದೆ ಎಂದು ತಿಳಿಸಿದರು.

ಜ್ಞಾನೋದಯದ ಉದಯ್ ಗುರೂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಮಾಜ ಸೇವಕ ಸುರೇಶ್ ಬಲ್ಲಾಳ್, ವೇದಮಾಯು ಆಯುರ್ವೇದ ಆಸ್ಪತ್ರೆ ಡಾ. ಕೇಶವರಾಜ್, ವೆನ್ಲಾಕ್ ಆಸ್ಪತ್ರೆ ಜೀವ ಸಾರ್ಥಕತೆ ಸಂಯೋಜಕಿ ಪದ್ಮಾ ವೇಣೂರು ಸೇರಿದಂತೆ ಹಲವು ಮಂದಿ ಪಾಲ್ಗೊಳ್ಳಲಿದ್ದಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಜಯಶ್ರೀ ಅಮರನಾಥ ಶೆಟ್ಟಿ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಸಿದರು.

  1.  

ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್,  ಮೇಯರ್ ಜಯಾನಂದ ಅಂಚನ್, ಗಾಯಕಿ ವಾಣಿ ಹರಿಕೃಷ್ಣ ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜೂನ್ 1 ರ ಸಂಜೆ 4 ರಿಂದ 9 ಗಂಟೆಯವರೆಗೆ ವಾಣಿ  ಹರಿಕೃಷ್ಣ ಉಪಸ್ಥಿತಿಯೊಂದಿಗೆ, ರಮೇಶ್ಚಂದ್ರ ಸಾರಥ್ಯದಲ್ಲಿ, ಎಸ್ಪಿಎಲ್ ಟೀಂ ಲೀಡರ್ ಗಳಿಂದ ‘ಪಂಚಭಾಷಾ ರಸಮಂಜರಿ’ ಜರುಗಲಿದೆ ಎಂದರು.

ಕಲಾ ಸಾಧಕರಿಗೆ ವಿವಿಧ ಪ್ರಶಸ್ತಿ ವಿತರಿಸಲಾಗುವುದು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರಿಗೆ ಕಲಾವೀರ ತಿಲಕರತ್ನ ಗೌರವ ಪ್ರಶಸ್ತಿ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅವರಿಗೆ ಸಕಲ ಕಲಾಸಂಪನ್ನ ಗೌರವ ಪ್ರಶಸ್ತಿ, ಸಂಗೀತ ಕ್ಷೇತ್ರದಲ್ಲಿನ ಸಾಧನೆಗೆ ಠಾಗೋರ್ ದಾಸ್ ಮತ್ತು ಶಾರದಾ ಬಾರ್ಕೂರ್ ಅವರಿಗೆ ನೀಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗೌರವ ಕಲಾ ಸಾಧಕ ಪ್ರಶಸ್ತಿ, ವಿಶೇಷ ಚೇತನ ಕಲಾ ಸಾಧಕ ಪ್ರಶಸ್ತಿ, ಗೌರವ ಕ್ರೀಡಾ ಸಾಧಕ ಪ್ರಶಸ್ತಿ, ಗೌರವ ಸಮಾಜಸೇವಾ ರತ್ನ ಪ್ರಶಸ್ತಿ ಹಾಗೂ ಗೌರವ ಕಲಾಪೋಷಕ ರತ್ನ ಪ್ರಶಸ್ತಿ ನೀಡಲಾಗುವುದು. ಕಾರ್ಯಕ್ರಮದಲ್ಲಿ ಸಂಗ್ರಹವಾಗಿ ಉಳಿದ ಹಣದಲ್ಲಿ ವಿಶೇಷತನ ಮಕ್ಕಳಿಗೆ ಹಾಗೂ ಸಂಸ್ಥೆಗಳಿಗೆ ಸಹಾಯ ಹಾಗೂ ಹಿರಿಯ ಕಲಾವಿದರಿಗೆ ಮಾಸಾಶನ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.

ಮುಖ್ಯ ಸಂಯೋಜಕ ರಮೇಶ್ಚಂದ್ರ, ಅರುಣ್ಯ ಫೌಂಡೇಶನ್ ಮ್ಯಾನೆಜಿಂಗ್ ಟ್ರಸ್ಟಿ ವಿಕ್ರಮ್ ಕೆ., ದಾಸ್ ಕುಡ್ಲ ಇವೆಂಟ್ಸ್ ಸದಾಶಿವದಾಸ್ ಪಾಂಡೇಶ್ವರ, ಸಂಯೋಜನಾ ಸದಸ್ಯ ನಾರಾಯಣರಾಜ್, ಹಿನ್ನಲೆ ಗಾಯಕಿ ಸಾಯಿ ಮಲ್ಲಿಕಾ ಇದ್ದರು.

  1.  

Leave a Reply

Your email address will not be published. Required fields are marked *