
ಮಂಗಳೂರು: ತಲಪಾಡಿ ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ 3 ಮಂದಿ ವಿದ್ಯಾರ್ಥಿನಿಯರು ವಿವಿಧ ಕೋರ್ಸ್‍ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ನಡೆಸಿದ ಜೆಇಇ ಮೈನ್ (ಪೇಪರ್ 2) ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ವಿನಾಯಕ್ ತಿಳಿಸಿದ್ದಾರೆ.
ವಿದ್ಯಾ, (ಎಐಆರ್ 778), ತನಿಷಾ ಕಾಮತ್ (ಎಐಆರ್1124), ಸ್ಪಂದನಾ ಬಿ (ಎಐಆರ್ 1275) ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಮತ್ತು ಶಾರದಾ ವಿದ್ಯಾನಿಕೇತನ ಆಡಳಿತ ಮಂಡಳಿ, ಪ್ರಾಧ್ಯಾಪಕರು, ಸಿಬ್ಬಂದಿ ಅಭಿನಂದಿಸಿದೆ ಎಂದು ಪ್ರಕಟಣೆ ತಿಳಿಸಿದೆ.


