Breaking News

ತುಂಬೆ ಡ್ಯಾಂ ನಲ್ಲಿ ನೀರಿನ ಮಟ್ಟ ಕುಸಿತ: ಮಳೆ ಬಾರದೇ ಇದ್ದರೆ ನೀರಿಗೆ ಬರ

 

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಿಂಗಳಿನಿಂದ 2 ದಿನಗಳಿಗೊಮ್ಮೆ ನೀರಿನ ರೇಷನಿಂಗ್ ಮಾದರಿಯಲ್ಲಿ ಸುರತ್ಕಲ್ ಹಾಗೂ ಮಂಗಳೂರು ನಗರ ಪ್ರದೇಶಗಳಿಗೆ ನೀರು ಪೂರೈಸಲಾಗುತ್ತಿದೆ.  ಕೆಲ ಕಡೆಗಳಲ್ಲಿ ಸಾಧಾರಣ ಮಳೆಯಾದರೂ, ತುಂಬೆ ಅಣೆಕಟ್ಟಿನಲ್ಲಿ 2.98 ಮೀಟರ್ ನೀರು ಸಂಗ್ರಹವಾಗಿದ್ದರೂ, ನೀರಿನ ಮಟ್ಟವು ಕುಸಿತ ಕಂಡಿದೆ.

  1.  

ತುಂಬೆ ಡ್ಯಾಂನಲ್ಲಿ 2.98 ಮೀಟರ್ ನೀರು ಇದ್ದು, ಎಎಂಆರ್ ಡ್ಯಾಂನಲ್ಲಿ 16.74 ನೀರು ಸಂಗ್ರಹ ಆಗಿದೆ. ಸದ್ಯ ಎಎಂಆರ್ ಡ್ಯಾಂನಲ್ಲಿ ಅಲ್ಪ ಪ್ರಮಾಣದ ನೀರು ಇರುವುದರಿಂದ ಕೆಲ ದಿನಗಳಿಗೆ ನೀರು ಸಾಕಾಗಬಹುದು.  ಈ ತಿಂಗಳ ಕೊನೆಯಲ್ಲಿ ಅಥವಾ ಜೂನ್ ಮೊದಲ ವಾರ ಮುಂಗಾರು ಪ್ರವೇಶಿಸಲಿದ್ದು, ಇನ್ನೇನು ಎರಡು ಮೂರು ವಾರದಲ್ಲಿ ಮಳೆ ಸುರಿವ ನಿರೀಕ್ಷೆ ಇದೆ. ಆದರೆ ಮಳೆ ಬಾರದೇ ಇದ್ದರೇ ನೀರಿಗೆ ಬರ ಬರುವುದು ಖಚಿತ.

ಜಿಲ್ಲೆಯಲ್ಲಿ ಈವರೆಗೂ ಅಲ್ಪ ಪ್ರಮಾಣದ ಮಳೆ ಸುರಿದಿದ್ದು, ವಾಡಿಕೆಯಂತೆ ಹೆಚ್ಚಿನ ಮಟ್ಟದಲ್ಲಿ ಮಳೆ ಸುರಿದಿಲ್ಲ. ಈ ಕಾರಣಕ್ಕಾಗಿ ತುಂಬೆ ಹಾಗೂ ಇತರ ಡ್ಯಾಂನಲ್ಲಿ ಮೇ ತಿಂಗಳು ಮುಗಿಯುತ್ತಿದ್ದರೂ, ಡ್ಯಾಂಗಳು ಇನ್ನೂ ತುಂಬುತ್ತಿಲ್ಲ. ಅದ್ದರಿಂದ ರೇಷನಿಂಗ್ ಹಿಂದಿನಂತೆ ಮುಂದುವರಿಸಲಾಗುವುದು. ಮಳೆ ಬಂದರೆ ರೇಷನಿಂಗ್ ಬಂದ್ ಮಾಡಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಚೆನ್ನಬಸಪ್ಪ ತಿಳಿಸಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com