Breaking News

ಜೂಜಾಟ ತಂಡದ ಜತೆಗೆ ಕಾನ್ ಸ್ಟೆಬಲ್ ಶಾಮೀಲು: ಅಮಾನತು ಆದೇಶ

 

ಮಂಗಳೂರು: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸ್ಪೆಷಲ್ ಬ್ರಾಂಚ್ ಕಾನ್ ಸ್ಟೇಬಲ್  ಆಗಿದ್ದ ವಾಸುದೇವ ಚೌಹಾಣ್ ಅವರನ್ನು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಅವರು ಅಮಾನತು ಮಾಡಿದ್ದಾರೆ.

  1.  

ಈಚೆಗೆ ತಲಪಾಡಿ ಗಡಿ ಭಾಗದಲ್ಲಿ ಜೂಜಾಟ ನಡೆಸುತ್ತಿದ್ದ ತಂಡವನ್ನು ಎಸಿಪಿ ನೇತೃತ್ವದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಆದರೆ, ಈ ಬಗ್ಗೆ ಉಳ್ಳಾಲ ಎಸ್ ಬಿ ಆಗಿದ್ದ ವಾಸುದೇವ್ ಗೆ ಮಾಹಿತಿಗಳಿದ್ದವು. ಅಲ್ಲದೆ, ಆರೋಪಿಗಳ ಜತೆ ವಾಸುದೇವ ಶಾಮೀಲಾಗಿದ್ದ ಎನ್ನುವ ಆರೋಪಗಳಿದ್ದವು. ಈ ಬಗ್ಗೆ ಖಚಿತ ಮಾಹಿತಿಗಳನ್ನು ಹೊಂದಿದ್ದ ಎಸಿಪಿ ಧನ್ಯಾ ನಾಯಕ್ ತಲಪಾಡಿ ಗಡಿಭಾಗದ ತಚ್ಚಣಿ ಎಂಬಲ್ಲಿಗೆ ದಾಳಿ ನಡೆಸಿದ್ದರು.

ದಾಳಿ ವೇಳೆ, ಪ್ರಮುಖ ಆರೋಪಿಯಾಗಿದ್ದ ತಲಪಾಡಿ ಗ್ರಾ. ಪಂ ಸದಸ್ಯ ಪರಾರಿಯಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಬಳಿಕ ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಈ ವೇಳೆ, ಕಾನ್ ಸ್ಟೇಬಲ್ ವಾಸುದೇವ ಆರೋಪಿಗಳಿಗೆ ಮಾಹಿತಿ ನೀಡಿದ್ದ. ಮತ್ತು ಅವರೊಂದಿಗೆ ಕೃತ್ಯದಲ್ಲಿ ಶಾಮೀಲಾಗಿದ್ದ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಎಸಿಪಿ ನೇರವಾಗಿ ಪೊಲೀಸ್ ಕಮಿಷನರಿಗೆ ವರದಿ ಮಾಡಿದ್ದರು. ಈ ಆಧಾರದಲ್ಲಿ ಇಲಾಖಾ ತನಿಖೆ ಬಾಕಿ ಇಟ್ಟು  ಪೊಲೀಸ್ ಕಮಿಷನರ್ ವಾಸುದೇವ ಅವರನ್ನು ಅಮಾನತು ಮಾಡಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com