Breaking News

ಆಕಸ್ಮಿಕ ಬೆಂಕಿ ತೋಟಕ್ಕೆ ಹಾನಿ: ಶಾಸಕ ಭೀಮಣ್ಣ ನಾಯ್ಕ್ ಭೇಟಿ

 

ಶಿರಸಿ:  ತಾಲೂಕಿನ ಅಮಚಿ ಮನೆ ಅಡಿಕೆ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಹಾನಿ ಉಂಟಾದ ಪ್ರದೇಶಕ್ಕೆ  ನೂತನ ಶಾಸಕ ಭೀಮಣ್ಣ ನಾಯ್ಕ ಅವರು ಭೇಟಿ ನೀಡಿ ಪರಿಹಾರ ಒದಗಿಸುವ ಭರವಸೆ ನೀಡಿದರು.

ಹುಲೇಕಲ್ ಗ್ರಾಮ ಪಂಚಾಯಿತಿ  ವ್ಯಾಪ್ತಿಯ ಅಮಚಿಮನೆ ಗ್ರಾಮದ ಭವಾನಿ ಹೆಗಡೆ ಮತ್ತು ಎಮ್.ವಿ.ಹೆಗಡೆ ಅವರಿಗೆ ಸೇರಿದ 2 ಎಕರೆ ಮಾಲ್ಕಿ ಬೆಟ್ಟ ಮತ್ತು ಅರ್ಧ ಎಕರೆ ಅಡಿಕೆ ತೋಟವು ಸುಟ್ಟು‌ ಕರಕಲಾಗಿದ್ದು, ನೊಂದ ರೈತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

  1.  

ಮಾಲ್ಕಿ ಬೆಟ್ಟಕ್ಕೆ ತಗುಲಿದ ಬೆಂಕಿಯಿಂದಾಗಿ ಮಳೆಗಾಲದ ಮಣ್ಣಿನ ಸವಕಳಿ ತಡೆಗೆ ಮುಚ್ಚಿಗೆ ಮಾಡಲಾದ ಕರಡ, ಸೊಪ್ಪಿಗೂ ಬೆಂಕಿ ತಗುಲಿ ಅಡಿಕೆ, ಬಾಳೆ, ಕಾಳು‌ ಮೆಣಸು ಮರಗಿಡ ಸಂಪೂರ್ಣ ಸುಟ್ಟು ಹೋಗಿವೆ.

ನಾನೂ ಒಬ್ಬ ರೈತ, ಅಡಿಕೆ ಬಾಳೆ, ಕಾಳುಮೆಣಸಿಗೆ ಹಾನಿ ಆದರೆ ಮತ್ತೆ ಬೆಳೆ ತೆಗೆಯಲು ವರ್ಷಗಳೇ ಬೇಕಾಗುತ್ತವೆ. ಈಗಿನ ಬೆಳೆ ಹಾನಿ ಜತೆ‌ ಮುಂದಿನ ಎಂಟು ವರ್ಷ ಬೆಳೆಯೂ ಇರುವುದಿಲ್ಲ. ಮರು ನಾಟಿಯಿಂದ ಎಲ್ಲವೂ ವೆಚ್ಚದಾಯಕವೇ ಆಗಿದೆ. ಸರಕಾರದಿಂದ ಗರಿಷ್ಠ ಪರಿಹಾರ‌ ಒದಗಿಸಿ ಕೊಡುವ ಪ್ರಯತ್ನ ಮಾಡುತ್ತೇನೆ ಎಂದು ನೊಂದ ರೈತರಿಗೆ ಭೀಮಣ್ಣ ನಾಯ್ಕ್ ಭರವಸೆ‌ ನೀಡಿದರು.

ಎಂ.ವಿ.ಹೆಗಡೆ, ಜಿ.ಪಂ.ಮಾಜಿ ಸದಸ್ಯ ಜಿ.ಎನ್.ಹೆಗಡೆ‌ ಮುರೇಗಾರ ಇದ್ದರು. ಎಸ್ಕೆ ಭಾಗವತ, ಗಣೇಶ ದಾವಣಗೆರೆ, ಅಧಿಕಾರಿಗಳಾದ ಬೆಳ್ಳೇಮನೆ, ಗ್ರಾ.ಪಂ. ಸದಸ್ಯ ಕಾಸಿಂ ಸಾಬ್, ಹುಲೇಕಲ್ ಗ್ರಾಪಂ ಪಿಡಿಒ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com